ಬೆಂಗಳೂರು: ಗ್ರಾಹಕರು ತಾವು ಸೇವಿಸುವ ಹೆಚ್ಚಿನ ಮಾವಿನ ವಿಧಗಳ ಹೆಸರುಗಳನ್ನು ತಿಳಿದಿದ್ದರೂ, ದಿನನಿತ್ಯ ಸೇವಿಸುವ ಇತರ ಹಲವು ತರಕಾರಿಗಳು ಮತ್ತು ಹಣ್ಣುಗಳ ಹೆಸರುಗಳ ಬಗ್ಗೆ ತಿಳಿರುವುದಿಲ್ಲ. ಅಂತಹ ಒಂದು ಪಟ್ಟಿಯಲ್ಲಿರುವ ಹಣ್ಣುಗಳಲ್ಲಿ ಒಂದು ಜಾಮುನ್ ಸಹ ಒಂದು(ನೇರಳೆ ಹಣ್ಣು). ಇದನ್ನು ಬ್ಲ್ಯಾಕ್ ಪ್ಲಮ್ ಅಥವಾ ಲಾವಾ ಪ್ಲಮ್ ಎಂದೂ ಕರೆಯುತ್ತಾರೆ.
ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICAR) - ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (IIHR) ಹೊಸ ಬಗೆಯ ನೇರಳೆಹಣ್ಣುಗಳನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿದ್ದು ಶೀಘ್ರದಲ್ಲೇ ನೋಂದಾಯಿಸಿ ಪೇಟೆಂಟ್ ಮಾಡಲಾಗುತ್ತದೆ. ಬೆಂಗಳೂರು ಮೂಲದ ಪ್ರಗತಿಪರ ರೈತ ಎನ್‌ಸಿ ಪಟೇಲ್ ತಮ್ಮ ಭೂಮಿಯಲ್ಲಿ ಬೆಳೆದ ಮೂರು ಹೊಸ ಜಾಮುನ್‌ಗಳ ಜೊತೆ ಇದು ನೋಂದಾಯಿಸಲ್ಪಡುತ್ತದೆ ಹಾಗೂ ನಂತರ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ.
ಅಭಿವೃದ್ಧಿಪಡಿಸಲಾದ ಎರಡು ಹೊಸ ಪ್ರಭೇದಗಳಲ್ಲಿ ಒಂದು ಜಾಮುನ್ ನೆರಂತರಾ ಎಂದು ICAR-IIHR ನ ಪ್ರಧಾನ ವಿಜ್ಞಾನಿ ಡಾ. ಜಿ ಕರುಣಾಕರನ್ ಹೇಳಿದರು. ಪಾವಗಡ ಬಳಿ ಕಂಡುಬರುವ ಎರಡು ಹೊಸ ಪ್ರಭೇದಗಳಲ್ಲಿ ಒಂದು ಜಾಮುನ್ ನೆರಂತರಾ. ಈ ವಿಧದ ಹಣ್ಣು ಒಬ್ಬ ರೈತನಿಗೆ ಸೇರಿದ ಭೂಮಿಯಲ್ಲಿ ಕಂಡುಬರುತ್ತದೆ. ಅವರು ಸಸ್ಯ ಪ್ರಭೇದಗಳು ಮತ್ತು ರೈತರ ಹಕ್ಕುಗಳ ಪ್ರಾಧಿಕಾರ (PPVFRA) ಅಡಿಯಲ್ಲಿ ರಕ್ಷಿಸುತ್ತಿದ್ದಾರೆ. ಏಕೆಂದರೆ ಈ ವಿಧದ ಹಣ್ಣು ಬಿಡುವ ಒಂದೇ ಒಂದು ಮರವಿದೆ, ಇದು ಅದರ ಸಿಹಿ, ಮತ್ತು ಬೀಜಗಳಿಂದಾಗಿ ವಿಶಿಷ್ಟವಾಗಿದೆ.
ಇನ್ನೊಂದು ವಿಧವನ್ನು ಇನ್ನೂ ಹೆಸರಿಸಲಾಗಿಲ್ಲ. ಇದನ್ನು ಸಂಸ್ಥೆಯಲ್ಲಿ ಅಭಿವೃದ್ಧಿಪಡಿಸಿದ್ದು, ಪ್ರಸ್ತುತ ಇದನ್ನು IIHR-JI ಎಂದು ಕರೆಯಲಾಗುತ್ತದೆ. ಇದರ ವಿಶಿಷ್ಟತೆ ಹಣ್ಣಿನ ಗಾತ್ರದಲ್ಲಿದೆ, ಪ್ರತಿಯೊಂದೂ ಹಣ್ಣು 23-24 ಗ್ರಾಂ ತೂಕವಿದೆ. ಪ್ರತಿ ಮರವು ಸುಮಾರು 100 ಕೆಜಿ ಹಣ್ಣುಗಳನ್ನು ನೀಡುತ್ತದೆ ಎಂದು ಕರುಣಾಕರನ್ ವಿವರಿಸಿದ್ದಾರೆ.