ಸಾಂದರ್ಭಿಕ ಚಿತ್ರ TNIE
ರಾಜ್ಯ

ಬೆಂಗಳೂರು: ನೈಜೀರಿಯಾ ಪ್ರಜೆ ಬಂಧನ; 2.3 ಕೋಟಿ ರೂ ಮೌಲ್ಯದ MDMA ವಶ

ಬಂಧಿತ ನೈಜೀರಿಯಾ ಪ್ರಜೆಯಿಂದ 2.3 ಕೋಟಿ ರೂ. ಮೌಲ್ಯದ 2.036 ಕೆಜಿ ನಿಷೇಧಿತ ಎಂಡಿಎಂಎ ವಶಪಡಿಸಿಕೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.

ಬೆಂಗಳೂರು: ಮಾದಕ ದ್ರವ್ಯಗಳನ್ನು ಹೊಂದಿದ್ದ ಮತ್ತು ನಗರದ ತೆರೆದ ಸ್ಥಳದಲ್ಲಿ ಅಕ್ರಮವಾಗಿ ಡ್ರಗ್ಸ್ ಮಾರಾಟ ಮಾಡಲು ಯತ್ನಿಸಿದ ಆರೋಪದ ಮೇಲೆ ನೈಜೀರಿಯಾ ಪ್ರಜೆಯೊಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಬಂಧಿತ ನೈಜೀರಿಯಾ ಪ್ರಜೆಯಿಂದ 2.3 ಕೋಟಿ ರೂ. ಮೌಲ್ಯದ 2.036 ಕೆಜಿ ನಿಷೇಧಿತ ಎಂಡಿಎಂಎ ವಶಪಡಿಸಿಕೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ. ಆದರೆ ಆರೋಪಿಯ ಗುರುತನ್ನು ಬಹಿರಂಗಪಡಿಸಿಲ್ಲ.

ಪೊಲೀಸರ ಪ್ರಕಾರ, ಸೆಪ್ಟೆಂಬರ್ 1 ರಂದು, ಬಾಗಲೂರು ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ವಿದೇಶಿ ಪ್ರಜೆಯೊಬ್ಬರು ಡ್ರಗ್ಸ್ ಹೊಂದಿದ್ದಾರೆ ಮತ್ತು ಅವುಗಳನ್ನು ಬಾಗಲೂರು ಗ್ರಾಮದ ಸಂತೆ ವೃತ್ತ ಮತ್ತು ಸಿಎಂಆರ್ ಕಾಲೇಜು ನಡುವಿನ ತೆರೆದ ರಸ್ತೆಯ ಬಳಿ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬ ವಿಶ್ವಾಸಾರ್ಹ ಮಾಹಿತಿ ಸಿಕ್ಕಿತು.

ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ, ಆರೋಪಿ, ಅಪರಿಚಿತ ವ್ಯಕ್ತಿಯಿಂದ ಕಡಿಮೆ ಬೆಲೆಗೆ MDMA ಖರೀದಿಸಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾಗಿ ಒಪ್ಪಿಕೊಂಡಿದ್ದಾನೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರೋಪಿಯಿಂದ 3,000 ರೂ. ನಗದು, ತೂಕದ ಯಂತ್ರ ಮತ್ತು ದ್ವಿಚಕ್ರ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಸಂಬಂಧ ಬಾಗಲೂರು ಪೊಲೀಸ್ ಠಾಣೆಯಲ್ಲಿ NDPS ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

H-1B visa ನಿಯಮದಲ್ಲಿ ಅಮೆರಿಕಾ ಮಹತ್ವದ ಬದಲಾವಣೆ: ಇನ್ನು ಮುಂದೆ ಅರ್ಜಿದಾರರ "social media" ಖಾತೆ ಪಬ್ಲಿಕ್ ಇದ್ದರಷ್ಟೇ ವೀಸಾ..!

ಉಪಲೋಕಾಯುಕ್ತರ ಮಾತನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ತಮ್ಮ ಮೇಲೆ ತಾವೇ ಚಪ್ಪಡಿ ಎಳೆದುಕೊಂಡಿದ್ದಾರೆ: BJP ಕುರಿತು ಸಿಎಂ ವ್ಯಂಗ್ಯ

ಸೆಪ್ಟೆಂಬರ್ 13 ರಂದು ಮಹಿಳಾ ನೌಕರರ ದಿನಾಚರಣೆ: ರಾಜ್ಯ ಸರ್ಕಾರ ಘೋಷಣೆ

ರಷ್ಯಾ ಅಧ್ಯಕ್ಷ Putin ಗೆ ಮೋದಿ ನಿವಾಸದಲ್ಲಿ ವಿಶೇಷ ಭೋಜನ ಕೂಟ!

ಇನ್ನೂ 2-3 ದಿನ ಅವಾಂತರ; ಫೆ. 10 ರವರೆಗೆ ನಿಯಮಗಳ ವಿನಾಯಿತಿ ಕೋರಿದ IndiGo!

SCROLL FOR NEXT