ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟ (fkcci) ಆಯೋಜಿಸಿದ್ದ ಅತ್ಯುತ್ತಮ ರಫ್ತುದಾರರಿಗೆ ಪ್ರಶಸ್ತಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ  
ರಾಜ್ಯ

ಅಮೆರಿಕದಿಂದ ಸುಂಕ ಜಾರಿ: ಕೇಂದ್ರದಿಂದ ಪರಿಹಾರ ಕ್ರಮದ ನೆರವು ಕೇಳಿದ ಸಚಿವ ರಾಮಲಿಂಗಾ ರೆಡ್ಡಿ

ಕರ್ನಾಟಕವು ರಫ್ತಿನಲ್ಲಿ ತನ್ನದೇ ಆದ ಕೊಡುಗೆ ನೀಡುತ್ತದೆ. ರಾಜ್ಯ ಸರ್ಕಾರವು ರಫ್ತು ಪ್ರಗತಿಯಲ್ಲಿ ಬದ್ಧ ಪಾಲುದಾರನಾಗಿ ಉಳಿದಿದೆ ಎಂದು ಪ್ರಶಸ್ತಿ ವಿಜೇತರನ್ನು ಅಭಿನಂದಿಸುತ್ತಾ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.

ಬೆಂಗಳೂರು: ಜವಳಿ, ಎಂಜಿನಿಯರಿಂಗ್ ಸರಕುಗಳು ಮತ್ತು ಐಟಿ-ಆಧಾರಿತ ಸೇವೆಗಳಂತಹ ವಲಯಗಳ ಮೇಲೆ ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತದ ಸುಂಕ ಹೇರಿಕೆಯಿಂದ ಅನೇಕ ಸವಾಲುಗಳು ಉಂಟಾಗಿವೆ ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ವಿವರಿಸಿದರು.

ಈ ವಲಯಗಳಿಗೆ ಆಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಕೇಂದ್ರ ಸರ್ಕಾರವು ಪ್ರೋತ್ಸಾಹ ಅಥವಾ ಪರಿಹಾರ ಕ್ರಮಗಳನ್ನು ಘೋಷಿಸುತ್ತದೆ ಎಂಬ ಭರವಸೆ ನಮಗಿದೆ, ರಾಜ್ಯ ಸರ್ಕಾರವು ಸಾಧ್ಯವಿರುವ ಎಲ್ಲ ಬೆಂಬಲವನ್ನು ಈ ವಲಯಗಳಿಗೆ ನೀಡುುವುದನ್ನು ಮುಂದುವರಿಸುತ್ತದೆ ಎಂದು ಭರವಸೆ ನೀಡಿದರು.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟ (fkcci) ಆಯೋಜಿಸಿದ್ದ ಅತ್ಯುತ್ತಮ ರಫ್ತುದಾರರಿಗೆ ಪ್ರಶಸ್ತಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಭಾರತದ ರಫ್ತು ಯಶಸ್ಸಿಗೆ ಕರ್ನಾಟಕದ ಕೊಡುಗೆ ಬಹಳಷ್ಟಿದೆ ಎಂದರು. ರಾಜ್ಯದ ಸಾಮರ್ಥ್ಯಗಳು ಐಟಿ, ಏರೋಸ್ಪೇಸ್, ಜೈವಿಕ ತಂತ್ರಜ್ಞಾನ, ಕಾಫಿ, ಜವಳಿ ಮತ್ತು ಉತ್ಪಾದನೆ ವಲಯಗಳಲ್ಲಿವೆ. 2024–25ನೇ ಹಣಕಾಸು ವರ್ಷದಲ್ಲಿ ಕರ್ನಾಟಕವು 159,019 ಮಿಲಿಯನ್ ಯುಎಸ್ ಡಾಲರ್ ಮೌಲ್ಯದ ರಫ್ತುಗಳನ್ನು ದಾಖಲಿಸಿದ್ದು, ರಾಷ್ಟ್ರೀಯವಾಗಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ ಎಂದು ಹೇಳಿದರು.

ರಫ್ತು ಎಂದರೆ ಕೇವಲ ವಿದೇಶಿ ವಿನಿಮಯ ಗಳಿಕೆಯ ಬಗ್ಗೆ ಅಲ್ಲ; ಅವು ಉದ್ಯೋಗ ಸೃಷ್ಟಿ, ಸ್ಪರ್ಧಾತ್ಮಕತೆ ಮತ್ತು ಭಾರತದ ಜಾಗತಿಕ ಸ್ಥಾನೀಕರಣದ ಬಗ್ಗೆಯಾಗಿದೆ. ಕರ್ನಾಟಕವು ರಫ್ತಿನಲ್ಲಿ ತನ್ನದೇ ಆದ ಕೊಡುಗೆ ನೀಡುತ್ತದೆ. ರಾಜ್ಯ ಸರ್ಕಾರವು ರಫ್ತು ಪ್ರಗತಿಯಲ್ಲಿ ಬದ್ಧ ಪಾಲುದಾರನಾಗಿ ಉಳಿದಿದೆ ಎಂದು ಪ್ರಶಸ್ತಿ ವಿಜೇತರನ್ನು ಅಭಿನಂದಿಸುತ್ತಾ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.

ರಾಜ್ಯ ನೀತಿಗಳ ಕುರಿತು ಮಾತನಾಡುತ್ತಾ ಸಚಿವ ರಾಮಲಿಂಗಾ ರೆಡ್ಡಿ ಸರ್ಕಾರದ ಖಾತರಿ ಯೋಜನೆಗಳನ್ನು ಸಮರ್ಥಿಸಿಕೊಂಡರು, ಹಣಕಾಸಿನ ಶಿಸ್ತನ್ನು ದುರ್ಬಲಗೊಳಿಸುವ ಬದಲು, ಆರ್ಥಿಕತೆಗೆ 96,000 ಕೋಟಿ ರೂಪಾಯಿಗೂ ಹೆಚ್ಚು ಹಣ ಖಾತರಿ ಯೋಜನೆಗಳಿಂದ ಸೇರ್ಪಡೆಯಾಗಿದೆ, GST ಸಂಗ್ರಹ ಹೆಚ್ಚಿಕೆಯಾಗಿದೆ ಮಹಿಳಾ ಕಾರ್ಯಪಡೆಯ ಭಾಗವಹಿಸುವಿಕೆ ಕೂಡ ಶೇಕಡಾ 23ರಷ್ಟು ಹೆಚ್ಚಾಗಿದೆ ಎಂದರು,

ಸಾರಿಗೆ ಸಚಿವರಾಗಿ, ಸಾರಿಗೆ ಮೂಲಸೌಕರ್ಯವನ್ನು ಆಧುನೀಕರಿಸಲು, ಹೆದ್ದಾರಿಗಳನ್ನು ವಿಸ್ತರಿಸಲು, ಮಲ್ಟಿಮೋಡಲ್ ಲಾಜಿಸ್ಟಿಕ್ಸ್ ಪಾರ್ಕ್‌ಗಳನ್ನು ಹೆಚ್ಚಿಸಲು ಮತ್ತು ಬಂದರುಗಳಿಗೆ ರೈಲು ಸಂಪರ್ಕವನ್ನು ಬಲಪಡಿಸಲು ಕರ್ನಾಟಕದ ನಿರಂತರ ಪ್ರಯತ್ನಗಳು ನಡೆಯುತ್ತಿವೆ ಎಂದರು.

ಸಾರ್ವಜನಿಕ ಸಾರಿಗೆ ಬಳಕೆಯನ್ನು ಹೆಚ್ಚಿಸುವಲ್ಲಿ ಮತ್ತು ಪರಿಸರ ಒತ್ತಡವನ್ನು ಕಡಿಮೆ ಮಾಡುವಲ್ಲಿ ಪರಿವರ್ತಕ ಹೆಜ್ಜೆಯಾಗಿ ಈಗ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಗುರುತಿಸಲ್ಪಟ್ಟಿರುವ ಶಕ್ತಿ ಯೋಜನೆಯನ್ನು ಸಚಿವರು ಈ ಸಂದರ್ಭದಲ್ಲಿ ಉಲ್ಲೇಖಿಸಿದರು.

ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರು ಸ್ಥಾಪಿಸಿದ ಎಫ್‌ಕೆಸಿಸಿಐನ 109 ವರ್ಷಗಳ ಪರಂಪರೆಯನ್ನು ಸರ್ಕಾರ ಮತ್ತು ಕೈಗಾರಿಕೆಗಳ ನಡುವಿನ ಸೇತುವೆ ಎಂದು ಸಚಿವರು ಶ್ಲಾಘಿಸಿದರು. ಕರ್ನಾಟಕದ ರಫ್ತುದಾರರನ್ನು ಅಭಿನಂದಿಸಿದ ಅವರು, "ಜಾಗತಿಕ ವೇದಿಕೆಯಲ್ಲಿ ಬ್ರಾಂಡ್ ಕರ್ನಾಟಕ ಮತ್ತು ಬ್ರಾಂಡ್ ಇಂಡಿಯಾದ ರಾಯಭಾರಿಗಳು" ಎಂದು ಕರೆದರು.

ಟ್ರಂಪ್ ಎಫೆಕ್ಟ್: ರಫ್ತು ವೈವಿಧ್ಯೀಕರಣಕ್ಕೆ ಮಾರ್ಗಸೂಚಿ ಸಿದ್ಧಪಡಿಸಿದ ಎಫ್‌ಕೆಸಿಸಿಐ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿರುವ 'ಅಸಮಂಜಸ ಸುಂಕ'ಗಳ ಹಿನ್ನೆಲೆಯಲ್ಲಿ, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘಗಳ ಒಕ್ಕೂಟ (FKCCI) ರಫ್ತು ವೈವಿಧ್ಯೀಕರಣದ ಮಾರ್ಗಸೂಚಿಯನ್ನು ರೂಪಿಸಿದೆ.

ಮುಂದಿನ ಸವಾಲುಗಳನ್ನು ಪರಿಗಣಿಸಿ ಎಫ್ ಕೆಸಿಸಿಐ ಸದಸ್ಯರು ತೆಗೆದುಕೊಳ್ಳಬೇಕಾದ ಕ್ರಮಗಳನ್ನು FKCCI ಅಧ್ಯಕ್ಷ ಎಂ.ಜಿ. ಬಾಲಕೃಷ್ಣ ವಿವರಿಸಿದರು. "ಯುಎಸ್‌ನಿಂದ ಸುಂಕಗಳ ಹೇರಿಕೆಯು ನಮ್ಮ ರಫ್ತುದಾರರ ಸ್ಪರ್ಧಾತ್ಮಕತೆಗೆ ನಿಜವಾದ ಬೆದರಿಕೆಯನ್ನು ಒಡ್ಡುತ್ತದೆ. ಇದು ದೊಡ್ಡ ಕಂಪನಿಗಳಿಗೆ ಮಾತ್ರವಲ್ಲ, ವಿಶೇಷವಾಗಿ ಸಣ್ಣ ಲಾಭದಲ್ಲಿ ನಡೆಯುವ ಸಣ್ಣ ರಫ್ತುದಾರರಿಗೆ ಸಮಸ್ಯೆಯಾಗಿದೆ." ಎಂದರು.

'ಸುಂಕದ ಸವಾಲನ್ನು' ಎದುರಿಸಲು ಸದಸ್ಯರು ಏನು ಮಾಡಬೇಕೆಂದು ಎಫ್ ಕೆಸಿಸಿಐ ಪಟ್ಟಿ ಮಾಡಿದ್ದು, ರಫ್ತಿನ ಆವೇಗ ಹಳಿತಪ್ಪದಂತೆ ನೋಡಿಕೊಳ್ಳಲು ಭಾರತ ಸರ್ಕಾರವು ಉತ್ತೇಜಕ ಪ್ಯಾಕೇಜ್ ಅಥವಾ ಪರಿಹಾರ ಕ್ರಮಗಳೊಂದಿಗೆ ಹೆಜ್ಜೆ ಹಾಕುವಂತೆ ಒತ್ತಾಯಿಸಿದರು.

ರಫ್ತಿನ ಆವೇಗ ಹಳಿತಪ್ಪದಂತೆ ನೋಡಿಕೊಳ್ಳಿ.

ಕರ್ನಾಟಕದ ಗುರಿ, ಭಾರತದ ರಫ್ತಿಗೆ ಮತ್ತಷ್ಟು ಕೊಡುಗೆ ನೀಡುವುದಾಗಿದೆ ಎಂದು ಅವರು ಹೇಳಿದರು. ಕರ್ನಾಟಕವು ನಿರಂತರವಾಗಿ ಅಗ್ರ ಮೂರು ರಫ್ತು ರಾಜ್ಯಗಳಲ್ಲಿ ಸ್ಥಾನ ಪಡೆದಿದ್ದು, ಭಾರತದ ಒಟ್ಟು ಸಾಫ್ಟ್‌ವೇರ್ ರಫ್ತಿನ ಸುಮಾರು ನಾಲ್ಕನೇ ಒಂದು ಭಾಗವನ್ನು ಹೊಂದಿದೆ, ಆದರೆ ಏರೋಸ್ಪೇಸ್, ​​ಯಂತ್ರೋಪಕರಣಗಳು, ಬಯೋಟೆಕ್, ಕಾಫಿ, ರೇಷ್ಮೆ ಮತ್ತು ಎಂಜಿನಿಯರಿಂಗ್ ಸರಕುಗಳಂತಹ ವಲಯಗಳು ಅಭಿವೃದ್ಧಿ ಹೊಂದುತ್ತಲೇ ಇವೆ.

ಕರ್ನಾಟಕವು ಈಗ ನವೀನ ರೀತಿಯಲ್ಲಿ ರಫ್ತು ಮಾರುಕಟ್ಟೆಗಳನ್ನು ಪ್ರವೇಶಿಸುತ್ತಿರುವ ನವೋದ್ಯಮಗಳಿಗೆ ಕೇಂದ್ರವಾಗಿ ಹೊರಹೊಮ್ಮಿದೆ. ನಿಜಕ್ಕೂ, ನಮ್ಮ ರಾಜ್ಯವು ಜಾಗತಿಕ ವ್ಯಾಪಾರದಲ್ಲಿ ಸಂಪ್ರದಾಯ ಮತ್ತು ಆಧುನಿಕತೆ ಎರಡನ್ನೂ ಪ್ರತಿನಿಧಿಸುತ್ತದೆ.

ಎಫ್‌ಕೆಸಿಸಿಐ ತನ್ನ ಸದಸ್ಯರನ್ನು ರಫ್ತು ನೆಲೆಗಳನ್ನು ವೈವಿಧ್ಯಗೊಳಿಸುವಂತೆ ಸಲಹೆ ನೀಡಿದೆ. ಈ ಮೂಲಕ ಅಮೆರಿಕ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಬಹುದು. ಸಿಇ ಪ್ರಮಾಣೀಕರಣ, ಸುಸ್ಥಿರತೆ ಲೇಬಲ್‌ಗಳು ಮತ್ತು ಗುಣಮಟ್ಟದ ಮಾನದಂಡಗಳನ್ನು ಪಡೆಯುವ ಮೂಲಕ ರಫ್ತು ಸಮುದಾಯವು ಯುರೋಪಿಯನ್ ಒಕ್ಕೂಟದ ಮಾನದಂಡಗಳೊಂದಿಗೆ ಹೊಂದಿಕೊಳ್ಳಬೇಕೆಂದು ಅದು ಸೂಚಿಸಿದೆ.

ನಮ್ಮ ರಫ್ತಿನ ಗಮನವು ವಿಯೆಟ್ನಾಂ, ಇಂಡೋನೇಷ್ಯಾ, ದಕ್ಷಿಣ ಕೊರಿಯಾ ಮುಂತಾದ ಹೆಚ್ಚಿನ ಬೆಳವಣಿಗೆಯ ಆರ್ಥಿಕತೆ ಹೊಂದಿದ ದೇಶಗಳ ಮೇಲೆ ಗಮನ ಹರಿಸಬೇಕು. ಚೀನಾ+1 ತಂತ್ರವನ್ನು ಬಳಸಿಕೊಂಡು ಭಾರತವನ್ನು ಜಾಗತಿಕ ಪೂರೈಕೆ ಸರಪಳಿಗಳಿಗೆ ಸ್ಥಿರ ಪರ್ಯಾಯವಾಗಿ ಇರಿಸುವ ಸಮಯ ಇದು ಎಂದು ವಿವರಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

"ಸ್ವತಂತ್ರ ಭಾರತದ ಅತಿದೊಡ್ಡ ಸುಧಾರಣೆ"- GST ಸುಧಾರಣೆ ಶ್ಲಾಘಿಸಿದ ಪ್ರಧಾನಿ ಮೋದಿ

ಜಿಎಸ್‌ಟಿ ಕಡಿತ ಲಾಭ ಗ್ರಾಹಕರಿಗೆ ವರ್ಗಾಯಿಸುವುದಾಗಿ ಮುಖೇಶ್ ಅಂಬಾನಿ ಭರವಸೆ

ಕನಕಪುರದಲ್ಲಿ ಮೆಡಿಕಲ್ ಕಾಲೇಜ್; ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆಗೆ ಸಂಪುಟ ಅಸ್ತು

ADR report: ದೇಶದಲ್ಲಿ ಶೇ. 47 ರಷ್ಟು ಸಚಿವರ ಮೇಲೆ ಕ್ರಿಮಿನಲ್ ಆರೋಪ, ಬಿಲಿಯನೇರ್ ಪೈಕಿ ಕರ್ನಾಟಕಕ್ಕೆ ಮೊದಲ ಸ್ಥಾನ, ಡಿಕೆಶಿ ಎಷ್ಟನೇ ಶ್ರೀಮಂತ?

ಉಕ್ರೇನ್‌ನಲ್ಲಿ ಶಾಂತಿ ನೆಲೆಸಲು ಭಾರತದ ಮೇಲಿನ 'ಸುಂಕಾಸ್ತ್ರ' ನಿರ್ಣಾಯಕ: US ಸುಪ್ರೀಂ ಕೋರ್ಟ್‌ಗೆ ಡೊನಾಲ್ಡ್ ಟ್ರಂಪ್ ಮಾಹಿತಿ

SCROLL FOR NEXT