ವಿಶ್ವವಿಖ್ಯಾತ ಮೈಸೂರು ದಸರಾ ಆಚರಣೆಗೆ ಮುನ್ನ ಸಾಂಸ್ಕೃತಿಕ ನಗರಿಯ ಮಹತ್ವ, ದಸರಾ ಸಂಭ್ರಮದ ಸಾರವನ್ನು ಸಾರುವ ಅಧಿಕೃತ ಗೀತೆಯನ್ನು ಸರ್ಕಾರ ಬಿಡುಗಡೆ ಮಾಡಿದೆ. ನಾಡಹಬ್ಬ ದಸರೆಯ ಗೀತೆಯನ್ನು ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ ಮಾರ್ಗದರ್ಶನದಲ್ಲಿ ರಚಿಸಲಾಗಿದೆ. ಅಪರ ಜಿಲ್ಲಾಧಿಕಾರಿ ಡಾ ಶಿವರಾಜ್ ಸಾಹಿತ್ಯ, ಪರಿಕಲ್ಪನೆ ಹಾಗೂ ನಿರ್ದೇಶನದಲ್ಲಿ ದಸರಾ ಗೀತೆ ಮೂಡಿಬಂದಿದೆ. ಕನ್ನಡದ ಗಾಯಕ ರಾಜೇಶ್ ಕೃಷ್ಣನ್ ಗೀತೆ ಹಾಡಿದ್ದಾರೆ. ಜಂಬೂಸವಾರಿ, ಮೈಸೂರು ಅರಮನೆ, ಚಾಮುಂಡಿಬೆಟ್ಟ, ದಸರಾ ಕಾರ್ಯಕ್ರಮಗಳ ವಿಡಿಯೋಗಳು ಹಾಡಿನಲ್ಲಿವೆ.