ಸಿಎಂ ಸಿದ್ದರಾಮಯ್ಯ ಸಾಂದರ್ಭಿಕ ಚಿತ್ರ 
ರಾಜ್ಯ

ತುಂಗಭದ್ರಾ ಜಲಾಶಯದ ಕ್ರೆಸ್ಟ್​ ಗೇಟ್'ಗಳು ಶೀಘ್ರದಲ್ಲೇ ದುರಸ್ತಿ: ಸಿಎಂ ಸಿದ್ದರಾಮಯ್ಯ

ಜಲಾಶಯದ ಕ್ರೆಸ್ಟ್ ಗೇಟ್ ಸಂಖ್ಯೆ 19 ರಲ್ಲಿ ಸ್ಟಾಪ್‌ಲಾಗ್ ಅನ್ನು ಯಶಸ್ವಿಯಾಗಿ ಅಳವಡಿಸಲಾಗಿದೆ. ಕಳೆದ ವರ್ಷ ಗೇಟ್ ಕೊಚ್ಚಿ ಹೋಗಿತ್ತು. ಗೇಟ್ ಅನ್ನು ಸರಿಪಡಿಸಲು ನಮ್ಮ ಸರ್ಕಾರ ತ್ವರಿತವಾಗಿ ಪ್ರತಿಕ್ರಿಯಿಸಿದೆ.

ಕೊಪ್ಪಳ: ತುಂಗಭದ್ರಾ ಅಣೆಕಟ್ಟಿನ ಕ್ರೆಸ್ಟ್ ಗೇಟ್‌ಗಳನ್ನು ಶೀಘ್ರದಲ್ಲೇ ದುರಸ್ತಿ ಮಾಡಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಲಾಶಯದ ಕ್ರೆಸ್ಟ್ ಗೇಟ್ ಸಂಖ್ಯೆ 19 ರಲ್ಲಿ ಸ್ಟಾಪ್‌ಲಾಗ್ ಅನ್ನು ಯಶಸ್ವಿಯಾಗಿ ಅಳವಡಿಸಲಾಗಿದೆ. ಕಳೆದ ವರ್ಷ ಗೇಟ್ ಕೊಚ್ಚಿ ಹೋಗಿತ್ತು. ಗೇಟ್ ಅನ್ನು ಸರಿಪಡಿಸಲು ನಮ್ಮ ಸರ್ಕಾರ ತ್ವರಿತವಾಗಿ ಪ್ರತಿಕ್ರಿಯಿಸಿದೆ ಎಂದು ಹೇಳಿದರು.

ಜಲಾಶಯವು ಹಳೆಯದಾಗಿದ್ದು, ಗೇಟ್‌ಗಳಲ್ಲಿ ಸಮಸ್ಯೆಗಳು ಎದುರಾಗಿವೆ. ಮಳೆ ಕಡಿಮೆಯಾದ ನಂತರ ದುರಸ್ತಿ ಕಾರ್ಯವನ್ನು ಕೈಗೊಳ್ಳಲಾಗುವುದು. ನಮ್ಮ ಸರ್ಕಾರ ಜನಪರವಾಗಿದ್ದು, ನಾವು ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದ್ದೇವೆಂದು ತಿಳಿಸಿದರು.

ಇದೇ ವೇಳೆ ಕೊಪ್ಪಳ ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಕಾರ್ಯಕ್ರಮಗಳ ದಿನಾಂಕಗಳನ್ನು ಶೀಘ್ರದಲ್ಲೇ ನಿಗದಿಪಡಿಸಲಾಗುವುದು ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

10 ವರ್ಷಗಳಲ್ಲಿ ಗುಜರಾತ್ ಬಿಜೆಪಿ ಸಂಸದರ ಆಸ್ತಿ ಹಲವು ಪಟ್ಟು ಹೆಚ್ಚಳ: ADR ವರದಿ

'ಗಂಡಸರ ಮನಸ್ಸೂ ಅರ್ಥವಾಗಲ್ಲ, ಯಾವಾಗ ರೇಪ್‌/ಕೊಲೆ ಮಾಡ್ತಾರೋ ಗೊತ್ತಿಲ್ಲ': ನಟಿ ರಮ್ಯಾ ವಿವಾದಾತ್ಮಕ ಪೋಸ್ಟ್

ನಟ ವಿಜಯ್ ಅಭಿನಯದ Jana Nayagan ಚಿತ್ರ ಬಿಡುಗಡೆ ಮುಂದೂಡಿಕೆ, ಕಾರಣ ಸೆನ್ಸಾರ್!

ಮಲಯಾಳಂ ಕಡ್ಡಾಯ ಮಸೂದೆ: ಕಾಸರಗೋಡು ಕನ್ನಡ ಭಾಷಿಕರ ಮೇಲೆ ಪರಿಣಾಮ; ರಾಜ್ಯ ನಿಯೋಗದಿಂದ ಕೇರಳ ರಾಜ್ಯಪಾಲರ ಭೇಟಿ!

ಇನ್ನೆಷ್ಟು ದಿನ ಇರ್ತಿನೋ ಗೊತ್ತಿಲ್ಲ: ಅರಸು ದಾಖಲೆ ಮುರಿದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅಚ್ಚರಿ ಹೇಳಿಕೆ

SCROLL FOR NEXT