ಈದ್ ಮಿಲಾದ್ ಮೆರವಣಿಗೆ 
ರಾಜ್ಯ

ಶಿವಮೊಗ್ಗ: ಈದ್ ಮಿಲಾದ್ ವೇಳೆ ಭದ್ರಾವತಿಯಲ್ಲಿ ಪಾಕ್ ಪರ ಘೋಷಣೆ; ವಿಡಿಯೋ ವೈರಲ್

ಸೋಮವಾರ ರಾತ್ರಿ ಭದ್ರಾವತಿ ಹಳೆಯ ಪಟ್ಟಣದಲ್ಲಿ ಮುಸ್ಲಿಂ ಸಂಘಟನೆಯೊಂದು ಆಚರಣೆಯನ್ನು ಆಯೋಜಿಸಿತ್ತು. ವೈರಲ್ ಆಗಿರುವ ವೀಡಿಯೊದಲ್ಲಿ ಯುವಕರ ಗುಂಪು "ಪಾಕಿಸ್ತಾನ ಜಿಂದಾಬಾದ್" ಎಂದು ಕೂಗುತ್ತಿರುವುದು ಕೇಳುತ್ತದೆ.

ಶಿವಮೊಗ್ಗ: ಕೋಮು ಸೂಕ್ಷ್ಮ ಪ್ರದೇಶವಾದ ಭದ್ರಾವತಿ ಪಟ್ಟಣದಲ್ಲಿ ಈದ್-ಎ-ಮಿಲಾದ್ ಆಚರಣೆಯ ಸಂದರ್ಭದಲ್ಲಿ ಪಾಕಿಸ್ತಾನ ಪರ ಘೋಷಣೆಗಳು ಮೊಳಗಿವೆ ಎಂದು ಪೊಲೀಸ್ ಮೂಲಗಳು ಮಂಗಳವಾರ ತಿಳಿಸಿವೆ.

ಸೋಮವಾರ ರಾತ್ರಿ ಭದ್ರಾವತಿ ಹಳೆಯ ಪಟ್ಟಣದಲ್ಲಿ ಮುಸ್ಲಿಂ ಸಂಘಟನೆಯೊಂದು ಆಚರಣೆಯನ್ನು ಆಯೋಜಿಸಿತ್ತು. ವೈರಲ್ ಆಗಿರುವ ವೀಡಿಯೊದಲ್ಲಿ ಯುವಕರ ಗುಂಪು "ಪಾಕಿಸ್ತಾನ ಜಿಂದಾಬಾದ್" ಎಂದು ಕೂಗುತ್ತಿರುವುದನ್ನು ತೋರಿಸಲಾಗಿದೆ. ಈ ಘಟನೆ ಜಿಲ್ಲೆಯಲ್ಲಿ ಕಳವಳವನ್ನು ಹುಟ್ಟುಹಾಕಿದೆ, ಈ ಹಿಂದೆಯೂ ಭದ್ರಾವತಿ ಕೋಮು ಗಲಭೆಗಳಿಗೆ ಸಾಕ್ಷಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಡಿಯೊ ಸಂಬಂಧ ಭದ್ರಾವತಿಯ ಓಲ್ಡ್ ಟೌನ್ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ವಿಡಿಯೊದ ಸತ್ಯಾಸತ್ಯತೆ ಪರಿಶೀಲಿಸಲಾಗುತ್ತಿದೆ. ಅದು ಎಲ್ಲಿ ಹಾಗೂ ಯಾವಾಗ ಚಿತ್ರೀಕರಣಗೊಂಡಿದೆ. ನೈಜತೆ ದೃಢಪಟ್ಟರೆ ಘೋಷಣೆ ಕೂಗಿದವರು ಯಾರು ಎಂಬುದರ ಬಗ್ಗೆಯೂ ತನಿಖೆ ನಡೆಸಿದ್ದೇವೆ ಎಂದು ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದ್ದಾರೆ.

ಕೃತ್ಯದಲ್ಲಿ ಭಾಗಿಯಾಗಿರುವವರನ್ನು ಗುರುತಿಸಲು ಮೂವರು ಇನ್ಸ್‌ಪೆಕ್ಟರ್‌ಗಳ ನೇತೃತ್ವದಲ್ಲಿ ಮೂರು ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ಎಸ್‌ಪಿ ಹೇಳಿದರು. ನಮ್ಮಲ್ಲಿ ಡ್ರೋನ್‌ಗಳಿಂದ ಚಿತ್ರೀಕರಿಸಿದ ದೃಶ್ಯಗಳು, ಸಿಸಿಟಿವಿಗಳು ಮತ್ತು ನಮ್ಮ ವೀಡಿಯೊ ತಂಡವು ತೆಗೆದ ವೀಡಿಯೊಗಳಿವೆ" ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ತನಿಖೆಯು ಸತ್ಯಗಳನ್ನು ಪರಿಶೀಲಿಸಿದ ನಂತರ ಕಠಿಣ ಕ್ರಮ ಕೈಗೊಳ್ಳಲಾಗುವುದು, ಘಟನೆಯನ್ನು ನಾವು ಗಂಭೀರವಾಗಿ ಗಮನಿಸಿದ್ದೇವೆ" ಎಂದು ಎಸ್‌ಪಿ ಹೇಳಿದ್ದಾರೆ.

ಇಂತಹ ಘೋಷಣೆಗಳನ್ನು ಕೂಗುವ ಹಿಂದಿನ ಮನಸ್ಥಿತಿಯನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಖಂಡಿಸಿದ್ದಾರೆ. ಚಿಕ್ಕಬಳ್ಳಾಪುರ ಬಿಜೆಪಿ ಸಂಸದ ಕೆ ಸುಧಾಕರ್ ಮಾತನಾಡಿ ಈ ಘಟನೆಯು ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ದೇಶ ವಿರೋಧಿ ಚಟುವಟಿಕೆಗಳು ಪ್ರಬಲವಾಗಿವೆ ಎಂದು ತೋರಿಸುತ್ತದೆ ಎಂದು ಹೇಳಿದರು. ಎರಡು ವರ್ಷಗಳ ಹಿಂದೆ ವಿಧಾನಸೌಧ ಕಾರಿಡಾರ್‌ಗಳಲ್ಲಿ ಇದೇ ರೀತಿಯ ಘೋಷಣೆಗಳೊಂದಿಗೆ ಪ್ರಾರಂಭವಾಯಿತು ಎಂದು ಅವರು ಹೇಳಿದರು. ಪಾಕ್ ಪರ ಘೋಷಣೆ ಕೂಗಿರುವ ದುಷ್ಕರ್ಮಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್ ಒತ್ತಾಯಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಾಡಿಗೆದಾರರಿಗೆ ಸಿಹಿ ಸುದ್ದಿ: ಕರ್ನಾಟಕ 'ಬಾಡಿಗೆ ತಿದ್ದುಪಡಿ ವಿಧೇಯಕ' 2025 ವಿಧಾನಸಭೆಯಲ್ಲಿ ಮಂಡನೆ!

ವಿಧಾನಸಭೆಯಲ್ಲಿ 'ಸಿಎಂ ಕುರ್ಚಿ ಕದನ' ಸದ್ದು: ಆರ್. ಅಶೋಕ್ ಮಾತಿಗೆ ಕೆರಳಿದ ಬೈರತಿ; ತೀವ್ರ ಮಾತಿನ ಚಕಮಕಿ!

EVMs ಅಲ್ಲವೇ ಅಲ್ಲ, ಪ್ರಧಾನಿ ಮೋದಿ ಇದನ್ನೇ 'ಹ್ಯಾಕ್' ಮಾಡಿದ್ದಾರೆ! ಲೋಕಸಭೆಯಲ್ಲಿ ಕಂಗನಾ

ಸರ್ಕಾರದ ವಿರುದ್ಧ ಹೋರಾಡಿ ಗೆದ್ದ ಅಲೋಕ್ ಕುಮಾರ್​​ಗೆ DGP ಆಗಿ ಮುಂಬಡ್ತಿ: ADGP ಬಿ.ದಯಾನಂದ್ ವರ್ಗಾವಣೆ

25 ವರ್ಷ ವಯಸ್ಸಿನ ಅವಿವಾಹಿತ ಮಹಿಳೆಯರು..: ಅನಿರುದ್ಧಾಚಾರ್ಯ ವಿರುದ್ಧ ಕೇಸ್ ದಾಖಲು! 'ಪೂಕಿ ಬಾಬಾ' ಹೇಳಿದ್ದೇನು ಗೊತ್ತಾ?

SCROLL FOR NEXT