ಬೆಂಗಳೂರು: ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದಲ್ಲಿ ಮನೆಯ ಮಹಡಿಯಿಂದ ಆಯತಪ್ಪಿ ಬಿದ್ದು 19 ವರ್ಷದ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟಿದ್ದಾಳೆ. ಪ್ರಿಯಾಂಕಾ ಮನೆಯ ಎರಡನೇ ಮಹಡಿಯಲ್ಲಿ ನಿಂತಿದ್ದಳು. ಆದರೆ ಏಕಾಏಕಿ ಆಯ ತಪ್ಪಿ ಕೆಳಗೆ ಬಿದ್ದು ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೆಂಗಳೂರು: ಮಹಿಳೆ ಮೇಲೆ ಹಲ್ಲೆ; BMTC ಡ್ರೈವರ್ ತಾತ್ಕಾಲಿಕ ವಜಾ
ಬೆಂಗಳೂರಿನಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಿದ್ದ ಆರೋಪದ ಹಿನ್ನೆಲೆಯಲ್ಲಿ ಬಿಎಂಟಿಸಿ ಬಸ್ ಚಾಲಕ ರವಿ ಎಂಬಾತನನ್ನು ತಾತ್ಕಾಲಿಕವಾಗಿ ವಜಾ ಮಾಡಲಾಗಿದೆ. ಚಾಲಕ ಮತ್ತು ಮಹಿಳಾ ಪ್ರಯಾಣಿಕರ ನಡುವೆ ತೀವ್ರ ಜಗಳವಾಗಿದ್ದು ನಂತರ ಚಾಲಕ ಮಹಿಳೆ ಕಪಾಳಕ್ಕೆ ಹೊಡೆದಿದ್ದಾನೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ. ಮೊದಲಿಗೆ ಮಹಿಳೆ ಚಾಲಕನ ಮೇಲೆ ಕೈ ಎತ್ತಿದ್ದಾಳೆ ಕೂಡಲೇ ಚಾಲಕ ತಡಮಾಡದೆ ಮಹಿಳೆಗೆ ಹೊಡೆದಿದ್ದಾನೆ. ಇದರಿಂದಾಗಿ ವಾತಾವರಣ ಉದ್ವಿಗ್ನಗೊಳ್ಳುತ್ತದೆ.
ಈ ಸಂಪೂರ್ಣ ಘಟನೆಯನ್ನು ಬಸ್‌ನ ಹೊರಗೆ ಇದ್ದ ವ್ಯಕ್ತಿಯೊಬ್ಬರು ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿದ್ದಾರೆ. ಬಸ್‌ನ ಹೊರಗಿನಿಂದ ರೆಕಾರ್ಡ್ ಮಾಡಲಾದ ಈ ವೀಡಿಯೊದಲ್ಲಿ, ವಾಹನ ಸಂಖ್ಯೆ KA51AK4276 ಎಂದು ಬರೆಯಲಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಬಿಎಂಟಿಸಿ ಇದನ್ನು ಗಂಭೀರವಾಗಿ ಪರಿಗಣಿಸಿದ್ದು ಚಾಲಕ ರವಿಯನ್ನು ತಾತ್ಕಾಲಿಕವಾಗಿ ವಜಾ ಮಾಡಿದೆ.
ಮುತ್ತಿಕ್ಕುವಂತೆ ಪೀಡಿಸಿದ ಚಾಲಕ ಆರೀಫ್‍ಗೆ ಧರ್ಮದೇಟು!
ಮತ್ತೊಂದೆಡೆ, ಖಾಸಗಿ ಬಸ್ ನಲ್ಲಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ವರದಿಯಾಗಿದೆ. ಹೈದರಾಬಾದ್‌ನಿಂದ ಬೆಂಗಳೂರಿಗೆ ಸ್ಲೀಪರ್ ಕೋಚ್ ಬಸ್ ನಲ್ಲಿ ಬರುತ್ತಿದ್ದ ಅಪ್ರಾಪ್ತೆಗೆ ಚಾಲಕ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ಬಾಲಕಿಯ ಕುಟುಂಬಸ್ಥರು ಬೆಂಗಳೂರಿನ ಚಾಲುಕ್ಯ ಸರ್ಕಲ್ ಬಳಿ ಬಸ್ ನಿಲ್ಲಿಸಿ ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಾಲಕಿ ಡ್ರೈವರ್ ಸೀಟ್ ಬಳಿ ತನ್ನ ಮೊಬೈಲ್ ಚಾರ್ಚ್ ಹಾಕಿದ್ದಳು.
ಮೊಬೈಲ್ ಹಿಂಪಡೆಯಲು ಹೋಗಿದ್ದಾಗ ಹೆಚ್ಚುವರಿ ಚಾಲಕ ಆರೀಫ್ ಬಾಲಕಿಗೆ ಮುತ್ತು ಕೊಡುವಂತೆ ಒತ್ತಾಯಿಸಿದ್ದಾನೆ. ಮುತ್ತು ಕೊಟ್ಟರೆ ಮಾತ್ರ ಮೊಬೈಲ್ ಕೊಡುತ್ತೇನೆ ಎಂದು ಆತ ಪೀಡಿಸಿದ್ದಾನೆ. ಕೊನೆಗೆ ಬಾಲಕಿ ಮೊಬೈಲ್ ತೆಗೆದುಕೊಂಡು ತನ್ನ ಅಣ್ಣನಿಗೆ ಕರೆ ಮಾಡಿ ನಡೆದ ಘಟನೆ ತಿಳಿಸಿದ್ದಾಳೆ. ಇದರಿಂದ ಆಕ್ರೋಶಗೊಂಡ ಪೋಷಕರು ಬಸ್ ಚಾಲುಕ್ಯ ಸರ್ಕಲ್ ಬಳಿ ಬರುತ್ತಿದ್ದಂತೆಯೇ ನಿಲ್ಲಿಸಿ ಚಾಲಕ ಆರೀಫ್ ನ ಬಟ್ಟೆ ಬಿಚ್ಚಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ.