ಪುನೀತ್ ಕೆರೆಹಳ್ಳಿ 
ರಾಜ್ಯ

14 ಅಪರಾಧ ಕೃತ್ಯಗಳಲ್ಲಿ ಭಾಗಿ: ಹಿಂದೂ ಹೋರಾಟಗಾರ ಪುನೀತ್ ಕೆರೆಹಳ್ಳಿಗೆ ನ್ಯಾಯಾಂಗ ಬಂಧನ

ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗದಂತೆ ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಪುನೀಕ್ ಕೆರೆಹಳ್ಳಿ ಅವರನ್ನು ಬಿಎನ್‌ಎಸ್‌ಎಸ್‌ನ ಸೆಕ್ಷನ್ 127 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ದಕ್ಷಿಣ ವಿಭಾಗದ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದರು.

ಬೆಂಗಳೂರು: 14 ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪ ಎದುರಿಸುತ್ತಿರುವ ಗೋರಕ್ಷಕ. ಹಿಂದೂ ಹೋರಾಟಗಾರ ಪುನೀತ್ ಕೆರೆಹಳ್ಳಿ ಅವರನ್ನು ಬಸವನಗುಡಿ ಪೊಲೀಸರು ಬುಧವಾರ ಬಂಧನಕ್ಕೊಳಪಡಿಸಿದ್ದಾರೆ.

ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗದಂತೆ ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಪುನೀಕ್ ಕೆರೆಹಳ್ಳಿ ಅವರನ್ನು ಬಿಎನ್‌ಎಸ್‌ಎಸ್‌ನ ಸೆಕ್ಷನ್ 127 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ದಕ್ಷಿಣ ವಿಭಾಗದ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದರು.

ಇನ್ನು ಮುಂದೆ ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುವುದಿಲ್ಲ, ಸಾರ್ವಜನಿಕ ಶಾಂತಿ ಮತ್ತು ಸಾಮರಸ್ಯವನ್ನು ಭಂಗಗೊಳಿಸುವುದಿಲ್ಲ ಅಥವಾ ಸಮಾಜಕ್ಕೆ ಅಪಾಯವನ್ನುಂಟು ಮಾಡುವುದಿಲ್ಲ ಎಂದು ಖಾತರಿಪಡಿಸುವ ಬಾಂಡ್ ಸಲ್ಲಿಸುವಂತೆ ದಂಡಾಧಿಕಾರಿಗಳು ಸೂಚನೆ ನೀಡಿದರು.

ಆದರೆ, ಮುಚ್ಚಳಿಕೆ ಬರೆದುಕೊಡಲು ಪುನೀತ್ ಕೆರೆಹಳ್ಳಿಯವರು ನಿರಾಕರಿಸಿದ್ದರಿಂದ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದ್ದಾರೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಸೇನೆಗೆ ಭಾರತೀಯ ಪ್ರಜೆಗಳ ಸೇರ್ಪಡೆ: ನೇಮಕಾತಿ ಕೈಬಿಟ್ಟು, ನಮ್ಮ ನಾಗರೀಕರ ಬಿಡುಗಡೆಗೊಳಿಸಿ; ರಷ್ಯಾಗೆ ಭಾರತ ಆಗ್ರಹ

Donald Trump ಆಪ್ತ ಬೆಂಬಲಿಗ ಚಾರ್ಲಿ ಕಿರ್ಕ್ ನ ಗುಂಡಿಕ್ಕಿ ಹತ್ಯೆ: ಅಮೆರಿಕಾ ಅಧ್ಯಕ್ಷ ತೀವ್ರ ಸಂತಾಪ

ABVP ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾದ ವಿಚಾರ, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದೇನು?

ನೇಪಾಳ ಜೈಲುಗಳಿಂದ ತಪ್ಪಿಸಿಕೊಂಡು ಬಂದ 35 ಕೈದಿಗಳನ್ನು ಬಂಧಿಸಿದ ಭಾರತ

BJP ಸರ್ಕಾರವೇ ಮತಪತ್ರ ಬಳಕೆಗೆ ಕಾನೂನಿನಲ್ಲಿ ಅವಕಾಶ ನೀಡಿದೆ; ಸಿ.ಟಿ ರವಿ ಭಾಷೆ, ಅವರ ಸಂಸ್ಕೃತಿ ತೋರುತ್ತದೆ: ಡಿ.ಕೆ ಶಿವಕುಮಾರ್; Video

SCROLL FOR NEXT