ಚಾಮುಂಡೇಶ್ವರಿ ದರ್ಶನ ಪಡೆದ ಯತ್ನಾಳ್ 
ರಾಜ್ಯ

ಇಸ್ಲಾಂ ಪ್ರಕಾರ ಮೂರ್ತಿ ಪೂಜೆ ಮಾಡುವವರು ಕಾಫೀರರು; ಬಾನು ಮುಷ್ತಾಕ್ ನಾನು 'ಎಕ್ಸ್ ಮುಸ್ಲಿಂ' ಎಂದು ಘೋಷಿಸಿಕೊಳ್ಳಲಿ: ಯತ್ನಾಳ್ ಆಗ್ರಹ

ಬಾನು ಮುಷ್ತಾಕ್ ನಾನೀಗ ಮುಸ್ಲಿಂ ಧರ್ಮದಲ್ಲಿಲ್ಲ (ಎಕ್ಸ್ ಮುಸ್ಲಿಂ) ಎಂದಾದರೂ ಘೋಷಿಸಿಕೊಳ್ಳಬೇಕು. ಇಸ್ಲಾಂ ಬಗ್ಗೆ ನನಗೆ ನಂಬಿಕೆ ಇಲ್ಲವೆಂದು ತಿಳಿಸಿ ಉದ್ಘಾಟಿಸಲಿ. ಇಲ್ಲವೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾತ್ರವೇ ಉದ್ಘಾಟಿಸಲಿ ಎಂದು ಒತ್ತಾಯಿಸಿದರು.

ಮೈಸೂರು: ದಸರಾ ಉದ್ಘಾಟನೆಯಿಂದ ಬೂಕರ್ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್ ಹಿಂದೆ ಸರಿಯಲಿ ಎಂದು ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ.

ಮೈಸೂರಿನ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಯತ್ನಾಳ್, ಇಸ್ಲಾಂ ಪ್ರಕಾರ ಮೂರ್ತಿ ಪೂಜೆ ಮಾಡುವವರು ಕಾಫೀರರು. ಮೂರ್ತಿ ಪೂಜೆ ಮಾಡುವವರನ್ನು ಕೊಲ್ಲಿ ಎಂದು ಇಸ್ಲಾಮ್ ಹೇಳುತ್ತದೆ. ಈಗ ಬಾನು ಮುಷ್ತಾಕ್ ಚಾಮುಂಡೇಶ್ವರಿ ಮೂರ್ತಿಗೆ ಪುಷ್ಪಾರ್ಚನೆ ಮಾಡಲು ಮುಂದಾಗಿದ್ದಾರೆ. ಮೌಲ್ವಿಗಳು ಈ ಬಗ್ಗೆ ಮಾತನಾಡಬೇಕು. ಮೂರ್ತಿ ಪೂಜೆಗೆ ಬರುತ್ತಿರುವ ಬಾನು ಮುಷ್ತಾಕ್ ವಿರುದ್ಧ ಏನು ಕ್ರಮ ಕೈಗೊಳ್ಳುತ್ತೀರಾ? ಮೌಲ್ವಿಗಳು ಈ ಬಗ್ಗೆ ಉತ್ತರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಅಲ್ಲದೆ ಬಾನು ಮುಷ್ತಾಕ್ ನಾನೀಗ ಮುಸ್ಲಿಂ ಧರ್ಮದಲ್ಲಿಲ್ಲ (ಎಕ್ಸ್ ಮುಸ್ಲಿಂ) ಎಂದಾದರೂ ಘೋಷಿಸಿಕೊಳ್ಳಬೇಕು. ಇಸ್ಲಾಂ ಬಗ್ಗೆ ನನಗೆ ನಂಬಿಕೆ ಇಲ್ಲವೆಂದು ತಿಳಿಸಿ ಉದ್ಘಾಟಿಸಲಿ. ಇಲ್ಲವೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾತ್ರವೇ ಉದ್ಘಾಟಿಸಲಿ ಎಂದು ಒತ್ತಾಯಿಸಿದರು.

ಇದೇ ವೇಳೆ ಸಿದ್ದರಾಮಯ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ ಯತ್ನಾಳ್, ನೇಪಾಳದ ಪರಿಸ್ಥಿತಿ ಇಲ್ಲೂ ಬರಲಿದ್ದು, ಜನರಿಂದ ಕ್ರಾಂತಿ ಆಗಲಿದೆ. ಸಿದ್ದರಾಮಯ್ಯ ಇದೇ ಧೋರಣೆ ಮುಂದುವರೆಸಿದರೆ ಸರ್ಕಾರ ಪತನವಾಗಲಿದೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Charlie Kirk ಶೂಟರ್ ನಮ್ಮ ವಶದಲ್ಲಿದ್ದಾನೆ: ಅಮೆರಿಕ ಅಧ್ಯಕ್ಷ Donald Trump

Grihalakshmi: ಆಗಸ್ಟ್‌-ಸೆಪ್ಟೆಂಬರ್‌ ಹಣ ಶೀಘ್ರ ಬಿಡುಗಡೆ; "ಅಕ್ಕ" ಪಡೆ ಕುರಿತು Lakshmi Hebbalkar ಮಾತು!

ಹೇಮಾವತಿ ಲಿಂಕ್ ಕೆನಾಲ್ ಯೋಜನೆ: ಪೈಪ್ ಗಳ ಖರೀದಿಗೆ 400 ಕೋಟಿ ರೂ ಬಿಡುಗಡೆ; ನಾಲ್ಕೈದು ತಿಂಗಳಲ್ಲಿ ಕಾಮಗಾರಿ ಪೂರ್ಣ!

Bengaluru Pothole: ರಸ್ತೆ ಗುಂಡಿಗೆ ಸಿಲುಕಿ ಮಗುಚಿದ ಶಾಲಾ ಬಸ್..! 20 ಮಕ್ಕಳು ಪಾರು; Video

ಪ್ರಧಾನಿ ಮೋದಿ ಈಗ ಮಣಿಪುರ ಭೇಟಿ 'ದೊಡ್ಡ ವಿಷಯ'ವಲ್ಲ; 'ವೋಟ್ ಚೋರಿ' ದೇಶದ ಪ್ರಮುಖ ವಿಷಯ: ರಾಹುಲ್ ಗಾಂಧಿ; Video

SCROLL FOR NEXT