ಮಂಡ್ಯ: ಇಲ್ಲಿನ ಕೃಷ್ಣರಾಜ ಪೇಟೆ ಪಟ್ಟಣದ ಹಿಂದೂ ಮಹಿಳೆಯರು ಗರ್ಭಿಣಿಯಾಗಿದ್ದ ಮುಸ್ಲಿಂ ಮಹಿಳೆಗೆ 'ಸೀಮಂತ' ಆಚರಣೆ ಮಾಡುವ ಮೂಲಕ ಕೋಮು ಸೌಹಾರ್ದತೆಯನ್ನು ಮೆರೆದಿರುವ ಘಟನೆ ನಡೆದಿದೆ.
ಹೆರಿಗೆಗೆ ಕೆಲವು ದಿನಗಳು ಇರುವಾಗ ಗರ್ಭಿಣಿಯರಿಗೆ ಸಾಮಾನ್ಯವಾಗಿ ಸೀಮಂತ ಶಾಸ್ತ್ರವನ್ನು ಮಾಡಲಾಗುತ್ತದೆ. ಉತ್ತರ ಭಾರತದಲ್ಲಿ ಇದನ್ನು 'ಗೋಧ್ ಭರೈ' ಎಂದೂ ಕರೆಯುತ್ತಾರೆ. ಗರ್ಭಿಣಿ ಮತ್ತು ಹುಟ್ಟಲಿರುವ ಮಗುವನ್ನು ಆಶೀರ್ವದಿಸಲು ನಡೆಸಲಾಗುತ್ತದೆ.
ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣ ಮತ್ತು ರಾಜ್ಯದ ಇತರ ಕೆಲವು ಭಾಗಗಳಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಗಳ ಸಂದರ್ಭದಲ್ಲಿ ನಡೆಯುತ್ತಿದ್ದ ಕೋಮು ಕಲಹದ ಮಧ್ಯೆ ಈ ಘಟನೆ ವರದಿಯಾಗಿದೆ.
ಶನಿವಾರ ಪಟ್ಟಣದ ಪದವೀಧರರ ಸಾಲ ಸಹಕಾರ ಸಂಘದ ವಾರ್ಷಿಕ ಸಭೆಯಲ್ಲಿ ಸೀಮಂತ ಸಮಾರಂಭವನ್ನು ಆಯೋಜಿಸಲಾಗಿತ್ತು.
ಸಂಘದ ಸಿಬ್ಬಂದಿ ನಗ್ಮಾ ಭಾನು ಅವರಿಗೆ ಹಿಂದೂ ಪದ್ಧತಿಗಳ ಪ್ರಕಾರ ಸೀಮಂತ ನೆರವೇರಿಸಿದ್ದು, ಇದು ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆಗೆ ಕಾರಣವಾಗಿದೆ.