ಬಂಗ್ಲೆಗುಡ್ಡದಲ್ಲಿ ಎಸ್ಐಟಿ ಅಧಿಕಾರಿಗಳ ಶೋಧ 
ರಾಜ್ಯ

ಧರ್ಮಸ್ಥಳ ಪ್ರಕರಣ: ಬಂಗ್ಲೆಗುಡ್ಡದಲ್ಲಿ ಪತ್ತೆಯಾದ ಬಹುತೇಕ ಮಾನವ ಅವಶೇಷಗಳು ಪುರುಷರದ್ದು, ಇತ್ತೀಚಿನವುಗಳು! Video

ಬಂಗ್ಲೆಗುಡ್ಡದೊಳಗಿನ 10 ಎಕರೆಗೂ ಹೆಚ್ಚು ವಿಶಾಲವಾದ ಪ್ರದೇಶದಲ್ಲಿ, ನಮ್ಮ ತಂಡಗಳು ಸುಮಾರು 5 ಎಕರೆ ಪ್ರದೇಶದಲ್ಲಿ ಶೋಧ ನಡೆಸಿವೆ. ಇಂದು ಉಳಿದ 5 ಎಕರೆ ಪ್ರದೇಶದಲ್ಲಿ ಶೋಧ ಮುಂದುವರಿಸುತ್ತೇವೆ' ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ಮಂಗಳೂರು: ಧರ್ಮಸ್ಥಳ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ಮೂಲಗಳು, ಬಂಗ್ಲೆಗುಡ್ಡ ಮೀಸಲು ಅರಣ್ಯ ಪ್ರದೇಶದಲ್ಲಿ ಮಹಜರು ಸಮಯದಲ್ಲಿ ಪತ್ತೆಯಾಗಿದ್ದ ತಲೆಬುರುಡೆಗಳು ಪುರುಷರದ್ದಾಗಿದ್ದು, ಅವು ಇತ್ತೀಚಿನವುಗಳಾಗಿರುವ ಸಾಧ್ಯತೆ ಹೆಚ್ಚಿದೆ ಎಂದು ಬಹಿರಂಗಪಡಿಸಿವೆ.

ಬಂಗ್ಲೆಗುಡ್ಡದಲ್ಲಿ ಪತ್ತೆಯಾಗಿರುವ ಐದು ತಲೆಬುರುಡೆಗಳು ಮತ್ತು ಇತರ ಅಸ್ಥಿಪಂಜರದ ಅವಶೇಷಗಳು ಇತ್ತೀಚಿನವುಗಳಾಗಿದ್ದು, ಅವು ಪುರುಷರದ್ದಾಗಿರಬಹುದು. ಪ್ರಾಥಮಿಕವಾಗಿ ಅವರು ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ವಿಧಿವಿಜ್ಞಾನ ವೈದ್ಯರು ಅಭಿಪ್ರಾಯಪಟ್ಟಿರುವುದಾಗಿ ಎಸ್‌ಐಟಿಯೊಂದಿಗೆ ಸಂಪರ್ಕ ಹೊಂದಿರುವ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ. ಆದಾಗ್ಯೂ, 'ಅವು ಆತ್ಮಹತ್ಯೆ ಪ್ರಕರಣಗಳೆಂದು ನಮಗೆ ಖಚಿತವಿಲ್ಲ' ಎಂದು ಅಧಿಕಾರಿ ಹೇಳಿದರು.

'ಬಂಗ್ಲೆಗುಡ್ಡದೊಳಗಿನ 10 ಎಕರೆಗೂ ಹೆಚ್ಚು ವಿಶಾಲವಾದ ಪ್ರದೇಶದಲ್ಲಿ, ನಮ್ಮ ತಂಡಗಳು ಸುಮಾರು 5 ಎಕರೆ ಪ್ರದೇಶದಲ್ಲಿ ಶೋಧ ಮುಗಿಸಿವೆ. ಅವಶೇಷಗಳ ಹುಡುಕಾಟ ಮತ್ತು ಅವುಗಳನ್ನು ವಶಪಡಿಸಿಕೊಳ್ಳಲು ಪ್ರತ್ಯೇಕ ತಂಡಗಳನ್ನು ರಚಿಸಲಾಗಿತ್ತು. ತಲೆಬುರುಡೆ, ದವಡೆ, ಮೂಳೆಗಳು ಎಲ್ಲವೂ ಆ ಪ್ರದೇಶದಲ್ಲಿ ಹರಡಿದ್ದವು. ಅವಶೇಷಗಳು ಪತ್ತೆಯಾದ ಪ್ರದೇಶದ ಸುತ್ತಲೂ ನಾವು ಪುರಾವೆ ಗೆರೆಗಳನ್ನು ಹಾಕಿದ್ದೇವೆ' ಎಂದು ಅಧಿಕಾರಿ ಹೇಳಿದರು.

'ನಾವು ಇಂದು ಬಂಗ್ಲೆಗುಡ್ಡದಲ್ಲಿ ಉಳಿದ 5 ಎಕರೆ ಪ್ರದೇಶದಲ್ಲಿ ಶೋಧ ಮುಂದುವರಿಸುತ್ತೇವೆ' ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣದಲ್ಲಿ ಸುಳ್ಳು ಸಾಕ್ಷ್ಯ ನುಡಿದ ಆರೋಪದಲ್ಲಿ ಈಗ ನ್ಯಾಯಾಂಗ ಬಂಧನದಲ್ಲಿರುವ 45 ವರ್ಷದ ಸಾಕ್ಷಿ ದೂರುದಾರ ಚಿನ್ನಯ್ಯ ನ್ಯಾಯಾಲಯದ ಮುಂದೆ ಇಟ್ಟಿದ್ದ ತಲೆಬುರುಡೆಯನ್ನು ಹೊರತೆಗೆದದ್ದು ನಾನಲ್ಲ ಎಂದು ಹೇಳಿಕೆ ನೀಡಿದ್ದ. ಧರ್ಮಸ್ಥಳದ ಸ್ನಾನಘಟ್ಟದ ಪಕ್ಕದ ಬಂಗ್ಲೆಗುಡ್ಡೆಯ ಕಾಡಿನಿಂದ ಅದನ್ನು ಹೊರತೆಗೆಯಲಾಗಿತ್ತು. ತಲೆಬುರುಡೆ ಇದ್ದ ಆ ಜಾಗವನ್ನು ಧರ್ಮಸ್ಥಳ ಗ್ರಾಮದ ಪಾಂಗಾಳದ ವಿಠ್ಠಲ್ ಗೌಡ ತೋರಿಸಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿತ್ತು. ಎಸ್ಐಟಿ ಅಧಿಕಾರಿಗಳು ಕೆಲ ದಿನಗಳ ಹಿಂದೆ ವಿಠ್ಠಲ್ ಗೌಡ ಅವರನ್ನು ಕಾಡಿನೊಳಗೆ ಕರೆದೊಯ್ದು ಮಹಜರು ನಡೆಸಿದ್ದರು. ಈ ವೇಳೆ ಕೆಲವು ಕಡೆಗಳಲ್ಲಿ ನೆಲದ ಮೇಲೆ ಮೂಳೆಗಳು ಕಂಡುಬಂದಿತ್ತು ಎಂದು ಎಸ್ಐಟಿ ಮೂಲಗಳು ತಿಳಿಸವೆ.

'ಬುರುಡೆ ಸಿಕ್ಕಿದ ಸ್ಥಳದ ಮಹಜರಿಗೆ ತೆರಳಿದ್ದಾಗ ಮತ್ತಷ್ಟು ಅವಶೇಷಗಳು ಕಾಣಿಸಿವೆ. ಎಸ್ಐಟಿ ಅಧಿಕಾರಿಗಳೂ ಅವುಗಳನ್ನು ನೋಡಿದ್ದಾರೆ' ಎಂದು ವಿಠ್ಠಲ್ ಗೌಡ ಹೇಳಿದ್ದ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಬಳಿಕ ಎಸ್ಐಟಿ ಅಧಿಕಾರಿಗಳು ಆ ಕಾಡಿನಲ್ಲಿ ಶೋಧ ನಡೆಸಲು ಮುಂದಾಗಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬಾನು ಮುಷ್ತಾಕ್​ರಿಂದ ದಸರಾ ಉದ್ಘಾಟನೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಅರ್ಜಿ; ನಾಳೆ ವಿಚಾರಣೆ

BlackBuck: 'ಹೋಗೋರನ್ನ ತಡೆಯಲ್ಲ.. ಸರ್ಕಾರವನ್ನ ಬ್ಲ್ಯಾಕ್‌ಮೇಲ್‌ ಮಾಡೋಕೆ ಬರಬೇಡಿ': DCM DK Shivakumar

ಆಳಂದದಲ್ಲಿ ಅಲ್ಪಸಂಖ್ಯಾತ, ಎಸ್‌ಸಿ ಮತ ಡಿಲೀಟ್ ಮಾಡುವ ಗುರಿ: ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್

ಕೀಪರ್ ಎಸೆದ ಚೆಂಡು ತಲೆಗೆ ಬಡಿದು ಅಂಪೈರ್ ನೋವಿನಲ್ಲಿದ್ದರೆ ನಾಚಿಕೆ ಇಲ್ಲದೆ ನಗುತ್ತಿದ್ದ Pakistan ನಾಯಕ, Video!

ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ: ದೇವಾಲಯ ಪ್ರಕರಣದ ಬಗ್ಗೆ CJI ಹೇಳಿಕೆ

SCROLL FOR NEXT