ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ 
ರಾಜ್ಯ

ಹೊಸ ನೀತಿ ಮೂಲಕ ಕ್ರೀಡಾಪಟುಗಳಿಗೆ ಉದ್ಯೋಗ ಮೀಸಲಾತಿ ಖಚಿತಪಡಿಸಲಾಗುವುದು: ಸಿಎಂ ಸಿದ್ದರಾಮಯ್ಯ

ರಾಜ್ಯ ಸರ್ಕಾರ ಪೊಲೀಸ್ ಮತ್ತು ಇತರ ಸರ್ಕಾರಿ ಇಲಾಖೆಗಳಲ್ಲಿ ಕ್ರೀಡಾ ಕೋಟಾವನ್ನು ಒದಗಿಸಿದೆ. 6 ಕೋಟಿ ರೂ. ಖರ್ಚು ಮಾಡಿ 60 ಯುವ ಪ್ರತಿಭೆಗಳಿಗೆ ತರಬೇತಿ ನೀಡುತ್ತಿದೆ.

ಮೈಸೂರು: ಯುವ ಪ್ರತಿಭೆಗಳನ್ನು ಬೆಂಬಲಿಸಲು ರಾಜ್ಯ ಸರ್ಕಾರ ಬದ್ಧವಾಗಿದ್ದು, ಸರ್ಕಾರಿ ಉದ್ಯೋಗಗಳಲ್ಲಿ ಕ್ರೀಡಾಪಟುಗಳಿಗೆ ಶೇ.3ರಷ್ಟು ಮೀಸಲಾತಿ ನೀಡುವ ನೀತಿಯನ್ನು ಜಾರಿಗೆ ತಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಹೇಳಿದರು.

ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಿದ ನಂತರ ಮಾತನಾಡಿದ ಸಿಎಂ, ರಾಜ್ಯ ಸರ್ಕಾರ ಪೊಲೀಸ್ ಮತ್ತು ಇತರ ಸರ್ಕಾರಿ ಇಲಾಖೆಗಳಲ್ಲಿ ಕ್ರೀಡಾ ಕೋಟಾವನ್ನು ಒದಗಿಸಿದೆ. 6 ಕೋಟಿ ರೂ. ಖರ್ಚು ಮಾಡಿ 60 ಯುವ ಪ್ರತಿಭೆಗಳಿಗೆ ತರಬೇತಿ ನೀಡುತ್ತಿದೆ. 2028 ರಲ್ಲಿ ಕರ್ನಾಟಕದ ಒಲಿಂಪಿಕ್ ಪದಕ ವಿಜೇತರಿಗೆ 6 ಕೋಟಿ ರೂ. ನಗದು ಬಹುಮಾನವನ್ನು ಘೋಷಿಸಿದೆ. ವಿಸ್ತೃತ ಕೆಲಸಗಳಿಗಾಗಿ ಮತ್ತು ಚಾಮುಂಡಿ ವಿಹಾರ ಕ್ರೀಡಾಂಗಣದ ಅಭಿವೃದ್ಧಿಗಾಗಿ ಸರ್ಕಾರ 20 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ ಎಂದು ಹೇಳಿದರು.

ರಾಜ್ಯಾದ್ಯಂತ ಸುಮಾರು 3,600 ಜನರು ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದ್ದಾರೆ, ಇದು ಕ್ರೀಡಾ ಮನೋಭಾವವನ್ನು ಹೆಚ್ಚಿಸುತ್ತದೆ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಕೊಡುಗೆ ನೀಡುತ್ತದೆ ಎಂದು ತಿಳಿಸಿದರು.

ಇದೇ ವೇಳೆ ವಿದ್ಯಾರ್ಥಿಗಳು ಅಧ್ಯಯನ ಮತ್ತು ಕ್ರೀಡಾಕೂಟಗಳತ್ತ ಗಮನಹರಿಸುವಂತೆ ಮುಖ್ಯಮಂತ್ರಿಗಳು ಸಲಹೆ ನೀಡಿದರು.

ಬಳಿಕ ಕುಸ್ತಿಪಟು ವಿಘ್ನೇಶ್ ಫೋಗಟ್ ಅವರ ಕೊಡುಗೆಗಳನ್ನು ಶ್ಲಾಘಿಸಿದ ಸಿಎಂ, ದೇಶಕ್ಕಾಗಿ ಅನೇಕ ಮಹಿಳೆಯರು ಪದಕಗಳನ್ನು ಗೆದ್ದಿರುವುದರಿಂದ ಕುಸ್ತಿ ಇನ್ನು ಮುಂದೆ ಪುರುಷ ಪ್ರಧಾನ ಕ್ರೀಡೆಯಾಗಿ ಉಳಿದಿಲ್ಲ ಎಂದರು. ಇದೇ ವೇಳೆ ವಿಘ್ನೇಶ್ ಫೋಗಟ್ ಅವರನ್ನು ಸನ್ಮಾನಿಸಿದರು.

ಈ ಸಂದರ್ಭಧಲ್ಲಿ ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ​​ಅಧ್ಯಕ್ಷ ಗೋವಿಂದರಾಜು, ಸಚಿವ ಕೆ. ವೆಂಕಟೇಶ್, ಶಾಸಕರಾದ ತನ್ವೀರ್ ಸೇಠ್, ರವಿಶಂಕರ್, ಅನಿಲ್ ಚಿಕ್ಕಮಾದು, ತಿಮ್ಮಯ್ಯ, ಸಂಸದ ಸುನಿಲ್ ಬೋಸ್ ಮತ್ತು ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೆಹಲಿ ಸ್ಫೋಟ ಪ್ರಕರಣದಲ್ಲಿ ಮೊದಲ ಬಂಧನ: i20 ಕಾರಿನ ಮಾಲೀಕ ಆಮಿರ್ Arrest; ಡಾ. ಉಮರ್ ಜೊತೆ ಸೇರಿ ದಾಳಿಗೆ ಸಂಚು!

KPCC ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ?: ದೆಹಲಿಯಲ್ಲಿ ಸಿಡಿದೆದ್ದ ಡಿಸಿಎಂ ಡಿ.ಕೆ ಶಿವಕುಮಾರ್!

ಹೂಕೋಸು ಫೋಟೋ ಹಾಕಿ ಬಿಹಾರದ NDA ಗೆಲುವು ಸಂಭ್ರಮಿಸಿದ ಅಸ್ಸಾಂ ಬಿಜೆಪಿ ಸಚಿವ!: ಮುಸ್ಲಿಮ್ ನರಮೇಧ ನೆನಪಿಸಿದ್ದಕ್ಕೆ ಕಾಂಗ್ರೆಸ್ ಕೆಂಡ!

ಕುಟುಂಬದ ಮೇಲೆ ದಾಳಿ ಮಾಡುವವರನ್ನು...: ಸಹೋದರಿ ರೋಹಿಣಿಗೆ ಆದ ಅಪಮಾನಕ್ಕೆ ಸಿಡಿದ ತೇಜ್ ಪ್ರತಾಪ್ ಯಾದವ್; ತಂದೆ ಲಾಲು ಪ್ರಸಾದ್ ಗೆ ಹೇಳಿದ್ದೇನು?

ಬೆಂಗಳೂರಿನಲ್ಲಿ ಲೈವ್ ಕಾರ್ಯಕ್ರಮದ ವೇಳೆ ಗಾಯಕನ ಪ್ಯಾಂಟ್ ಎಳೆದು ಅವಮಾನ, Video Viral!

SCROLL FOR NEXT