ಸಂಗ್ರಹ ಚಿತ್ರ 
ರಾಜ್ಯ

ಅನಾರೋಗ್ಯ ಪೀಡಿತ ತಂದೆಯ ಚಿಕಿತ್ಸೆಗಾಗಿ ಬೈಕ್'ಗಳ ಕಳ್ಳತನ: ವ್ಯಕ್ತಿ ಬಂಧನ

ಆರೋಪಿ ವೈಟ್‌ಫೀಲ್ಡ್ ಬಳಿಯ ಅನುಗೊಂಡನಹಳ್ಳಿಯಲ್ಲಿ ತನ್ನ ಪತ್ನಿ ಮತ್ತು ಮಗುವಿನೊಂದಿಗೆ ವಾಸವಿದ್ದು, ಈತನ ತಂದೆ ಮೊಹಮ್ಮದ್ ಬಾಷಾ ಕದಿರಿಯಲ್ಲಿ ವಾಸವಿದ್ದಾರೆ. ಮೊಹಮ್ಮದ್ ಬಾಷಾ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಹಣ ಹೊಂದಿಸಲು ಸಾಧ್ಯವಾಗದೆ ಫಿರೋಜ್ ಕಳ್ಳತನಕ್ಕಿಳಿದಿದ್ದ.

ಬೆಂಗಳೂರು: ವೈಟ್‌ಫೀಲ್ಡ್‌ನಲ್ಲಿ 20 ಬೈಕ್‌ಗಳನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ವೈಟ್‌ಫೀಲ್ಡ್ ಪೊಲೀಸರು ಮಂಗಳವಾರ ಬಂಧನಕ್ಕೊಳಪಡಿಸಿದ್ದಾರೆ.

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಕದಿರಿ ಮೂಲಕ ಬಿ.ಫಿರೋಜ್ (24) ಬಂಧಿತ ಆರೋಪಿ. ಈತನಿಂದ ಸುಮಾರು 20 ಲಕ್ಷ ರೂ. ಮೌಲ್ಯದ 20 ಬೈಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿ ವೈಟ್‌ಫೀಲ್ಡ್ ಬಳಿಯ ಅನುಗೊಂಡನಹಳ್ಳಿಯಲ್ಲಿ ತನ್ನ ಪತ್ನಿ ಮತ್ತು ಮಗುವಿನೊಂದಿಗೆ ವಾಸವಿದ್ದು, ಈತನ ತಂದೆ ಮೊಹಮ್ಮದ್ ಬಾಷಾ ಕದಿರಿಯಲ್ಲಿ ವಾಸವಿದ್ದಾರೆ. ಮೊಹಮ್ಮದ್ ಬಾಷಾ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಹಣ ಹೊಂದಿಸಲು ಸಾಧ್ಯವಾಗದೆ ಫಿರೋಜ್ ಕಳ್ಳತನಕ್ಕಿಳಿದಿದ್ದ ಎಂದು ತಿಳಿದುಬಂದಿದೆ.

ತಂದೆ ಚಿಕಿತ್ಸೆಗಾಗಿ ಮೊದಲು ವೈಟ್ ಫೀಲ್ಡ್ ನಲ್ಲಿ ಬೈಕ್ ಕಳ್ಳತನ ಮಾಡಿದ್ದ ಈತ, ನಂತರ ಕ್ರಮೇಣ ಇದನ್ನು ವೃತ್ತಿಯನ್ನಾಗಿ ಮಾಡಿಕೊಂಡಿದ್ದ. ಇದರಂತೆ ಕಾಡುಗೋಡಿ, ವೈಟ್‌ಫೀಲ್ಡ್ ಮತ್ತು ಮೆಟ್ರೋ ನಿಲ್ದಾಣಗಳ ಬಳಿಯ ಇತರ ಪಾರ್ಕಿಂಗ್ ಪ್ರದೇಶಗಳಿಂದ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿದ್ದಾರೆ.

ಈ ನಡುವೆ ವಾಹನಗಳ ಕಳ್ಳತನ ಪ್ರಕರಣಗಳು ಹೆಚ್ಚು ವರದಿಯಾದ ಬೆನ್ನಲ್ಲೇ ಕಳ್ಳನಿಗಾಗಿ ಬಲೆ ಬೀಸಿದ ಪೊಲೀಸರು, ಸ್ಥಳೀಯ ಅಂಗಡಿಗಳಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಗಳನ್ನು ಪರಿಶೀಲನೆ ನಡೆಸಿದ್ದಾರೆ. ಇದರಿಂದ ಕಳ್ಳನ ಗುರುತು ಪತ್ತೆಯಾಗಿದೆ. ಇದರಂತೆ ಫಿರೋಜ್ ನನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಆರೋಪಿಯು ಮದ್ದೂರಿನಲ್ಲಿ ಪರಿಚಯಸ್ಥನಿಗೆ ಐದು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ್ದು, ಕದಿರಿಯಲ್ಲಿರುವ ತನ್ನ ಸಂಬಂಧಿಕರಿಗೆ ಒಂಬತ್ತು ದ್ವಿಚಕ್ರ ವಾಹನಗಳನ್ನು ನೀಡಿದ್ದಾನೆ. ವೈಟ್‌ಫೀಲ್ಡ್‌ನ ಖಾಲಿ ಜಾಗದಲ್ಲಿ ಆರು ದ್ವಿಚಕ್ರ ವಾಹನಗಳನ್ನು ನಿಲ್ಲಿಸಿದ್ದಾನೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

CWC ಸಭೆ: ಬಿಹಾರ ವಿಧಾನಸಭಾ ಚುನಾವಣೆ ಮೋದಿ ಸರ್ಕಾರದ 'ಭ್ರಷ್ಟ ಆಡಳಿತ' ಅಂತ್ಯಕ್ಕೆ ನಾಂದಿಯಾಗಲಿದೆ; ಮಲ್ಲಿಕಾರ್ಜುನ ಖರ್ಗೆ

'ತಮ್ಮದೇ ಜನರ ಮೇಲೆ ಬಾಂಬ್ ದಾಳಿ': ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನ AIRSTRIKE ಕುರಿತು ಭಾರತ ವ್ಯಂಗ್ಯ

ಹಿರಿಯ ಸಾಹಿತಿ sl bhyrappa ನಿಧನ

ಸೌದಿ-ಪಾಕಿಸ್ತಾನ ನಡುವಣ ರಕ್ಷಣಾ ಒಪ್ಪಂದ ಭಾರತಕ್ಕೆ ತಲೆನೋವಾ? (ತೆರೆದ ಕಿಟಕಿ)

ವಿಶ್ವಸಂಸ್ಥೆ ನಿರ್ಣಯಗಳ ಆಧಾರದ ಮೇಲೆ ಕಾಶ್ಮೀರ ಸಮಸ್ಯೆ ಪರಿಹರಿಸಬೇಕು: ಭಾರತದ ವಿರುದ್ಧ ಮತ್ತೆ ಕ್ಯಾತೆ ತೆಗೆದ ಟರ್ಕಿ ಅಧ್ಯಕ್ಷ..!

SCROLL FOR NEXT