ಬೆಂಗಳೂರು: ಮರ ಬಿದ್ದು ಸಾವುನೋವು ಮತ್ತು ಆಸ್ತಿ ಹಾನಿಯಾದಾಗಲೆಲ್ಲಾ ಪಾಲಿಕೆ ಹಾಗೂ ಪೊಲೀಸ್ ಅಧಿಕಾರಿಗಳು ಕೈಗೊಳ್ಳುವ ಕ್ರಮಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಅರಣ್ಯ ಇಲಾಖೆ ಅಧಿಕಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್) ಅವರಿಗೆ ಪತ್ರ ಬರೆದಿದ್ದು, ಈ ಕುರಿತು ಪರಿಶೀಲನೆ ನಡೆಸುವಂತೆ ಸೂಚನೆ ನೀಡಿದ್ದಾರೆ.
ಮರ ಬಿದ್ದ ಘಟನೆಗಳಿಗೆ ಸಂಬಂಧಿಸಿದಂತೆ ಪೊಲೀಸರು ಎಫ್‌ಐಆರ್‌ಗಳನ್ನು ದಾಖಲಿಸುತ್ತಿದ್ದು, ಇದರಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಅರಣ್ಯ ಇಲಾಖೆ ಅಧಿಕಾರಿಗಳು ಬೇಸತ್ತಿದ್ದಾರೆಂದು ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಹಿರಿಯ ಅರಣ್ಯ ಸಿಬ್ಬಂದಿಯೊಬ್ಬರು, ಹಣ ನೀಡದಿದ್ದರೆ ಎಫ್ಐಆರ್ ದಾಖಲಿಸುವುದಾಗಿಯೂ ಪೊಲೀಸರು ಕೆಲವೊಮ್ಮೆ ಬೆದರಿಕೆ ಹಾಕುತ್ತಾರೆ. ಈ ರೀತಿಯ ಕಿರುಕುಳವನ್ನು ಎದುರಿಸುತ್ತಿದ್ದೇವೆಂದು ಹೇಳಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಐದು ನಿಗಮಗಳಾಗಿ ವಿಂಗಡಿಸಲ್ಪಟ್ಟಿದ್ದು, ಸಿಬ್ಬಂದಿಯ ಅಗತ್ಯತೆ ದ್ವಿಗುಣಗೊಂಡಿದೆ. ಆದರೆ, ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ಮತ್ತು ಕೇಡರ್ ಮತ್ತು ನೇಮಕಾತಿ ನಿಯಮಗಳಲ್ಲಿರುವ ರೇಂಜ್ ಫಾರೆಸ್ಟ್ ಅಧಿಕಾರಿಗಳ ಪಾತ್ರದ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲದಂತಾಗಿದೆ. ಈ ಸಿಬ್ಬಂದಿಗಳು ಮೇಲ್ವಿಚಾರಣೆ ಮತ್ತು ಕೌಂಟರ್‌ಸೈನ್ ಅಧಿಕಾರ, ಎಫ್‌ಐಆರ್ ಮತ್ತು ಚಾರ್ಜ್‌ಶೀಟ್ ಸಲ್ಲಿಸುವುದು ಮತ್ತು ಸಾಮಗ್ರಿಗಳನ್ನು ವಶಪಡಿಸಿಕೊಳ್ಳುವುದು ಮತ್ತು ವನ್ಯಜೀವಿಗಳನ್ನು ರಕ್ಷಿಸುವಂತಹ ನಿರ್ದಿಷ್ಟ ಪಾತ್ರವನ್ನು ಹೊಂದಿದ್ದಾರೆ ಎಂದು ಇಲಾಖೆಯ ಸಿಬ್ಬಂದಿ ಸಚಿವ ಈಶ್ವರ್ ಖಂಡ್ರೆ ಅವರಿಗೆ ತಿಳಿಸಿದ್ದಾರೆ.
ಡಿಸಿಎಫ್ ಅಥವಾ ಅರಣ್ಯ ಅಧಿಕಾರಿಯ ಕರ್ತವ್ಯಗಳು ಮರದ ಮೇಲಾವರಣ ನಿರ್ವಹಣೆ, ಅನುಮತಿಯಿಲ್ಲದೆ ಮರ ಕಡಿಯುವುದರ ವಿರುದ್ಧ ಎಫ್‌ಐಆರ್‌ಗಳನ್ನು ನೋಂದಾಯಿಸುವ ಮೂಲಕ ನಿಯಮಗಳ ಅನುಷ್ಠಾನ, ಸಂಯುಕ್ತಗೊಳಿಸುವಿಕೆ (ವಶಪಡಿಸಿಕೊಳ್ಳುವುದು) ಮತ್ತು ಪ್ರತಿ-ಸಹಿ ಮಾಡುವುದು ಜವಾಬ್ದಾರಿ ಹೊಂದಿದ್ದಾರೆ, ಈ ಎಲ್ಲಾ ಅಂಶಗಳ ಕುರಿತು ಜಿಬಿಎ ಅಡಿಯಲ್ಲಿ ಯಾವುದೇ ಸ್ಪಷ್ಟತೆಗಳೂ ಸಿಕ್ಕಿಲ್ಲ.
ಒಂದು ವೇಳೆ ಡಿಸಿಎಫ್ ಜಿಬಿಎಯಲ್ಲಿಯೇ ಉಳಿದು ಹೊಸ ಪಾಲಿಕೆಗಳಲ್ಲಿ ಯೋಜನೆಗಳಿಗೆ ಮರ ಕಡಿಯಲು ಅನುಮತಿಯನ್ನು ಪರಿಶೀಲಿಸಲು ಎಲಿಎಫ್ ಅಥವಾ ಆರ್'ಎಫ್ಒಗೆ ಅಧಿಕಾರ ನೀಡಿದರೆ, ಅಲ್ಲಿ ಸಂಪೂರ್ಣ ದೋಷ ಉಂಟಾಗಬಹುದು ಮತ್ತು ಅಧಿಕಾರಿಗಳು ತಪ್ಪುಗಳನ್ನು ಮಾಡಬಹುದು, ಆದ್ದರಿಂದ ಎಲ್ಲಾ ಅಧಿಕಾರಗಳು ಮತ್ತು ಅರಣ್ಯ ಸಂಬಂಧಿತ ಕಾರ್ಯಾಚರಣೆಗಳನ್ನು ಕೇಂದ್ರೀಕೃತಗೊಳಿಸಬೇಕು ಅಥವಾ ಕರ್ನಾಟಕ ಅರಣ್ಯ ಇಲಾಖೆಗೆ ವರ್ಗಾಯಿಸಬೇಕು ಎಂದು ಹಿರಿಯ ಅರಣ್ಯ ಅಧಿಕಾರಿಯೊಬ್ಬರು ಹೇಳಿದ್ದಾರೆ.