ಆರ್. ಬಿ. ತಿಮ್ಮಾಪುರ್ ಸಾಂದರ್ಭಿಕ ಚಿತ್ರ 
ರಾಜ್ಯ

Liquor Auction: ಮದ್ಯದ ಅಂಗಡಿಗಳ ಹರಾಜು ಪ್ರಕ್ರಿಯೆಯಲ್ಲಿ ಮೀಸಲಾತಿ; ಸಚಿವ ಆರ್.ಬಿ ತಿಮ್ಮಾಪುರ ಹೇಳಿದ್ದೇನು?

ಹರಾಜು ಪ್ರಕ್ರಿಯೆಗೆ ತಯಾರಿ ಆಗುತ್ತಿದೆ. ಹರಾಜು ಪ್ರಕ್ರಿಯೆಯಲ್ಲಿ ಮೀಸಲಾತಿ ಕೊಡಬೇಕು ಎಂದು ಅಂದುಕೊಳ್ಳಲಾಗಿದೆ. ಈಗಾಗಲೇ ಹರಾಜು ಪ್ರಕ್ರಿಯೆಯ ಕರಡು ನಿಯಮ ಸಿದ್ಧವಾಗಿದ್ದು, ಸಹಿ ಕೂಡಾ ಆಗಿದೆ

ಬೆಂಗಳೂರು: ಅವಧಿ ಮುಗಿದಿರೋ ಮದ್ಯದ ಅಂಗಡಿಗಳನ್ನ ಹರಾಜು ಮೂಲಕ ಹಂಚಿಕೆ ಮಾಡುವ ಪ್ರಕ್ರಿಯೆ ಶುರುವಾಗಿದೆ. ಕರಡು ನಿಯಮ ಬಿಡುಗಡೆ ಮಾಡಲಾಗಿದ್ದು, ಶೀಘ್ರದಲ್ಲೇ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಅಬಕಾರಿ ಸಚಿವ ಆರ್. ಬಿ. ತಿಮ್ಮಾಪುರ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹರಾಜು ಪ್ರಕ್ರಿಯೆಗೆ ತಯಾರಿ ಆಗುತ್ತಿದೆ. ಹರಾಜು ಪ್ರಕ್ರಿಯೆಯಲ್ಲಿ ಮೀಸಲಾತಿ ಕೊಡಬೇಕು ಎಂದು ಅಂದುಕೊಳ್ಳಲಾಗಿದೆ. ಈಗಾಗಲೇ ಹರಾಜು ಪ್ರಕ್ರಿಯೆಯ ಕರಡು ನಿಯಮ ಸಿದ್ಧವಾಗಿದ್ದು, ಸಹಿ ಕೂಡಾ ಆಗಿದೆ. ಆದಷ್ಟೂ ಬೇಗ ಹರಾಜು ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದಿದ್ದಾರೆ.

ಸಾಮಾನ್ಯವಾಗಿ ಹರಾಜು ಹಾಕಬೇಕಾ? ಮೀಸಲಾತಿ ಕೊಡಬೇಕಾ ಅಂತಾ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ನಾಳೆ ಚರ್ಚೆ ಮಾಡ್ತೀನಿ. ಹರಾಜು ಪ್ರಕ್ರಿಯೆಯಿಂದ 2 ಸಾವಿರ ಕೋಟಿ ರೂ. ಲಾಭ ಬರಬಹುದು ಅಂತ ನಿರೀಕ್ಷೆ ಇದೆ ಎಂದು ಸಚಿವರು ತಿಳಿಸಿದರು.

ಮೀಸಲಾತಿ ಕೊಟ್ಟರೆ ನೆರವಾಗುತ್ತದೆ ಅಂತ ಚರ್ಚೆ ನಡೆಯುತ್ತಿದೆ. ಅಂತಿಮವಾಗಿ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳುತ್ತೇವೆ. ಯಾವುದೇ ಕಾರಣಕ್ಕೂ ಹೊಸ ಲೈಸೆನ್ಸ್ ಕೊಡಲ್ಲ. ಈಗ ಯಾವುದು ಇದೆಯೋ ಅದಕ್ಕೆ ಮಾತ್ರ ಹರಾಜು ಮೂಲಕ ಲೈಸೆನ್ಸ್ ಕೊಡ್ತೀವಿ ಎಂದು ಸ್ಪಷ್ಟಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Cockroach Janata Party ಕಾರ್ಯಕರ್ತರನ್ನು ಅಟ್ಟಾಡಿಸಿ ಹೊಡೆದ ಗ್ರಾಮಸ್ಥರು; CJPಯ ಸ್ಕೂಲ್ ಟೀಕ್ ಕರೋ ಅಭಿಯಾನದ ವೇಳೆ ಆಗಿದ್ದಾದರೂ ಏನು?

ಶೀಘ್ರದಲ್ಲೇ ಕರ್ನಾಟಕದ 43 ಲಕ್ಷಕ್ಕೂ ಹೆಚ್ಚು ಮತದಾರರಿಗೆ ಚುನಾವಣಾ ಆಯೋಗದ ನೋಟಿಸ್! ಯಾರಿಗೆಲ್ಲ ಬರಲಿದೆ ನೋಟಿಸ್ ?

Yemen, Somalia ಕರಾವಳಿಯಲ್ಲಿ ಕಡಲ್ಗಳ್ಳರ ಅಟ್ಟಹಾಸ: 22 ಮಂದಿ ಭಾರತೀಯರಿದ್ದ 2 ಹಡಗುಗಳ ಅಪಹರಣ..!

ಭಾರತ-ಚೀನಾ ಗಡಿ ಉದ್ವಿಗ್ನತೆ ನಡುವೆ ಅಮೆರಿಕ ರಾಯಭಾರಿ ಲಡಾಖ್ ಭೇಟಿ; ಬೀಜಿಂಗ್ ಗೆ ಪ್ರಬಲ ಸಂದೇಶ

'Pak ಜೊತೆ ಯುದ್ಧ ಮಾಡಿದ್ದರೂ...' ಭಾರತದ ಅಸಲಿ ಕಾಂಪಿಟೇಟರ್ China; ಮಾಜಿ ಸೇನಾ ಮುಖ್ಯಸ್ಥ ಜನರಲ್ ನರವಾಣೆ..!