ಧರ್ಮಸ್ಥಳ ವೀರೇಂದ್ರ ಹೆಗ್ಗಡೆ 
ರಾಜ್ಯ

ಧರ್ಮಸ್ಥಳ ಕೇಸ್: ಸಂಚುಕೋರರ ಕುತಂತ್ರ ಬಹಿರಂಗ; ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ

ಎಸ್‌ಐಟಿ ರಚಿಸಿದ್ದಕ್ಕಾಗಿ ರಾಜ್ಯ ಸರ್ಕಾರಕ್ಕೆ ನಾನು ಧನ್ಯವಾದ ಹೇಳುತ್ತೇನೆ. ಎಸ್ಐಟಿ ರಚನೆಯಾಗಿರದಿದ್ದರೆ, ಸತ್ಯ ಹೊರಬರುತ್ತಿರಲಿಲ್ಲ. ಮೊದಲ ದಿನವೇ ಎಸ್‌ಐಟಿ ರಚನೆಯನ್ನು ನಾವು ಸ್ವಾಗತಿಸಿದ್ದೆವು.

ಮಂಗಳೂರು: ಧರ್ಮಸ್ಥಳಕ್ಕೆ ಭಕ್ತರು ಭೇಟಿ ನೀಡುವುದನ್ನು ತಡೆಯುವ ಸಂಚುಕೋರರ ಉದ್ದೇಶ ಎಸ್ಐಟಿಯಿಂದ ಬಹಿರಂಗವಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಭಾನುವಾರ ಹೇಳಿದ್ದಾರೆ.

ಧರ್ಮಸ್ಥಳದಲ್ಲಿ ಚಂಡಿಕಾ ಹೋಮ ನಡೆಸಿದ ನಂತರ ಬೆಳ್ತಂಗಡಿ ತಾಲ್ಲೂಕಿನ 81 ಗ್ರಾಮಸ್ಥರು ಆಯೋಜಿಸಿದ್ದ ಸತ್ಯ ದರ್ಶನ ಸಮಾವೇಶದಲ್ಲಿ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಎಸ್‌ಐಟಿ ರಚಿಸಿದ್ದಕ್ಕಾಗಿ ರಾಜ್ಯ ಸರ್ಕಾರಕ್ಕೆ ನಾನು ಧನ್ಯವಾದ ಹೇಳುತ್ತೇನೆ. ಎಸ್ಐಟಿ ರಚನೆಯಾಗಿರದಿದ್ದರೆ, ಸತ್ಯ ಹೊರಬರುತ್ತಿರಲಿಲ್ಲ. ಮೊದಲ ದಿನವೇ ಎಸ್‌ಐಟಿ ರಚನೆಯನ್ನು ನಾವು ಸ್ವಾಗತಿಸಿದ್ದೆವು. ಇದೀಗ ಸಂಚುಕೋರರು ಯಾರು ಎಂಬುದು ಬಹಿರಂಗವಾಗಿದೆ ಎಂದು ಹೇಳಿದರು.

ಧರ್ಮಸ್ಥಳಕ್ಕೆ ಭಕ್ತರು ಭೇಟಿ ನೀಡುವುದನ್ನು ನಿಲ್ಲಿಸಿ, ಕ್ಷೇತ್ರವನ್ನು ನಾಶಪಡಿಸುವುದು ಅವರ (ಪಿತೂರಿಗಾರರ) ಉದ್ದೇಶವಾಗಿತ್ತು. ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಮಂಜುನಾಥ ಸ್ವಾಮಿ ಮತ್ತು ಅಣ್ಣಪ್ಪ ಸ್ವಾಮಿಯಿಂದ ಮಾತ್ರ ಸಾಧ್ಯ. ಚಿನ್ನವನ್ನು ಬೆಂಕಿಗೆ ಹಾಕಿದರೆ ಅದು ಇನ್ನಷ್ಟು ಕಂಗೊಳಿಸುವಂತೆ, ಧರ್ಮಸ್ಥಳವೂ ಈ ಸವಾಲಿನ ನಡುವೆ ಇನ್ನಷ್ಟು ಬೆಳಗುತ್ತಿದೆ. ಇದೀಗ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಬೇರೆ ಬೇರೆ ಜಿಲ್ಲೆಗಳಿಂದ ಸಾವಿರಾರು ಜನರು ಬಂದು ಬೆಂಬಲ ತೋರಿಸಿದ್ದಾರೆ. ನಮ್ಮ ತಾಲೂಕಿನಿಂದ ಜನರು ಬರಲಿಲ್ಲ ಎಂಬ ಮಾತು ಮೊದಲು ಇದ್ದರೂ, ಇಂದು ಬೆಳ್ತಂಗಡಿ ತಾಲೂಕಿನ ಜನರು ಸಹ ಆಗಮಿಸಿ ಕೃತಜ್ಞತೆ ತೋರಿದ್ದಾರೆ ಎಂದು ತಿಳಿಸಿದರು.

ಶೀಘ್ರದಲ್ಲೇ, ಧರ್ಮಸ್ಥಳದಿಂದ ಹಲವಾರು ಸಮಾಜ ಪರ ಕಲ್ಯಾಣ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗುವುದು. ಭಕ್ತರ ಬೆಂಬಲ ನಮ್ಮ ಬಾಂಧವ್ಯವನ್ನು ಬಲಪಡಿಸಿದೆ ಎಂದು ಹೇಳಿದರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಸ್ಪಾದಲ್ಲಿ ಅಕ್ರಮ ಚಟುವಟಿಕೆ' ಎಂದು ಆರೋಪಿಸಿ ದಾಂಧಲೆ; 5 ಲಕ್ಷ ರೂ ಗೆ ಬೇಡಿಕೆ, 1 ಲಕ್ಷ ವಸೂಲಿ! ಶಾಕಿಂಗ್ ಘಟನೆ

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!