10 ಸೆಂ.ಮೀ ಗಿಂತ ಹೆಚ್ಚಿನ ಗಾತ್ರದ ಸುಮಾರು 50,000 ಅಂತರಿಕ್ಷ ಕಸದ ವಸ್ತುಗಳನ್ನು ಗುರುತಿಸಲಾಗಿದೆ 
ರಾಜ್ಯ

2030ರ ವೇಳೆಗೆ ಅಂತರಿಕ್ಷದಲ್ಲಿ 1 ಲಕ್ಷ ವಸ್ತುಗಳು ಸಂಗ್ರಹ: ಇಸ್ಟ್ರಾಕ್ ಮುಖ್ಯಸ್ಥ ಎ.ಕೆ ಅನಿಲ್ ಕುಮಾರ್

SMOPS-2026 ಅಂತಾರಾಷ್ಟ್ರೀಯ ಸಮ್ಮೇಳನದ ವೇಳೆ ಮಾತನಾಡಿದ ಅವರು, ಈ ಪೋರ್ಟಲ್ ಅಭಿವೃದ್ಧಿಯಲ್ಲಿ ಅನೇಕ ದೇಶಗಳು ಮತ್ತು ಸಂಸ್ಥೆಗಳು ಸಹಕರಿಸುತ್ತಿವೆ ಎಂದು ತಿಳಿಸಿದರು.

ಬೆಂಗಳೂರು: ಜಗತ್ತಿನ ವಿವಿಧ ಅಂತರಿಕ್ಷ ಸಂಸ್ಥೆಗಳ ಕಾರ್ಯಾಚರಣೆಗಳು ಹೆಚ್ಚುತ್ತಿರುವ ಹಿನ್ನೆಲೆ, 2030ರ ವೇಳೆಗೆ ಅಂತರಿಕ್ಷದಲ್ಲಿ ಸುಮಾರು ಒಂದು ಲಕ್ಷ ವಸ್ತುಗಳು ಇರಲಿವೆ ಎಂದು ಅಂದಾಜಿಸಲಾಗಿದೆ. ಉಪಗ್ರಹಗಳು ಸಂಚರಿಸುವ ಕಕ್ಷೆಗಳ (orbital shells) ಸಾಮರ್ಥ್ಯ ಸೀಮಿತವಾಗಿರುವುದರಿಂದ, ಅಂತರಿಕ್ಷದ ಸಾಮರ್ಥ್ಯ ಮತ್ತು ಲಭ್ಯತೆಯನ್ನು ಅರ್ಥಮಾಡಿಕೊಳ್ಳಲು “ಸ್ಪೇಸ್ ಕ್ಯಪಾಸಿಟಿ ಇಂಡೆಕ್ಸ್” ಪೋರ್ಟಲ್ ಸಿದ್ಧಪಡಿಸಲಾಗುತ್ತಿದೆ ಎಂದು ಇಸ್ರೋ ಟೆಲಿಮೆಟ್ರಿ ಟ್ರ್ಯಾಕಿಂಗ್ ಅಂಡ್ ಕಮಾಂಡ್ ನೆಟ್‌ವರ್ಕ್ (ISTRAC) ನಿರ್ದೇಶಕ ಎ.ಕೆ. ಅನಿಲ್ ಕುಮಾರ್ ಹೇಳಿದ್ದಾರೆ.

SMOPS-2026 ಅಂತಾರಾಷ್ಟ್ರೀಯ ಸಮ್ಮೇಳನದ ವೇಳೆ ಮಾತನಾಡಿದ ಅವರು, ಈ ಪೋರ್ಟಲ್ ಅಭಿವೃದ್ಧಿಯಲ್ಲಿ ಅನೇಕ ದೇಶಗಳು ಮತ್ತು ಸಂಸ್ಥೆಗಳು ಸಹಕರಿಸುತ್ತಿವೆ ಎಂದು ತಿಳಿಸಿದರು.

ಮುಂದಿನ ವರ್ಷಗಳಲ್ಲಿ 50 ಸಾವಿರದಿಂದ 60 ಸಾವಿರವರೆಗೆ ದೊಡ್ಡ ಮಟ್ಟದ ಅಂತರಿಕ್ಷ ಕಾರ್ಯಾಚರಣೆಗಳು ಮತ್ತು ಉಪಗ್ರಹ ಗುಂಪುಗಳು (constellations) ಹೆಚ್ಚಾಗುವ ಸಾಧ್ಯತೆ ಇದೆ ಎಂದರು.

ಆದರೆ, ಸಾಮರ್ಥ್ಯದ ಜೊತೆಗೆ ಡಿಕ್ಕಿ (collision) ಮತ್ತು ಅಂತರಿಕ್ಷ ಕಸದ (space debris) ಸಮಸ್ಯೆಯೂ ಹೆಚ್ಚುತ್ತಿದೆ. 10 ಸೆಂ.ಮೀ ಗಿಂತ ದೊಡ್ಡ ಗಾತ್ರದ ಸುಮಾರು 50 ಸಾವಿರ ಅಂತರಿಕ್ಷ ಕಸದ ವಸ್ತುಗಳನ್ನು ಈಗಾಗಲೇ ಗುರುತಿಸಲಾಗಿದೆ ಎಂದು ಅವರು ಹೇಳಿದರು. ಕಾರ್ಯನಿರ್ವಹಣೆಯಲ್ಲಿರುವ ಉಪಗ್ರಹಗಳು ಡಿಕ್ಕಿಯಾಗದಂತೆ ನೋಡಿಕೊಳ್ಳಲು ಅಂತರಿಕ್ಷ ಸಂಸ್ಥೆಗಳ ನಡುವಿನ ಸಮನ್ವಯವನ್ನು ಹೆಚ್ಚಿಸುವ ಅಗತ್ಯವಿದೆ ಎಂದರು.

2015ರ ವೇಳೆಗೆ ಅಂತರಿಕ್ಷದಲ್ಲಿದ್ದ ವಸ್ತುಗಳಲ್ಲಿ 95 ಶೇಕಡಾ ಕಸದ ವಸ್ತುಗಳು ಮತ್ತು 5 ಶೇಕಡಾ ಮಾತ್ರ ಕಾರ್ಯನಿರ್ವಹಣೆಯಲ್ಲಿರುವ ಉಪಗ್ರಹಗಳಾಗಿದ್ದವು. 2020ರಲ್ಲಿ ಕಾರ್ಯನಿರ್ವಹಣೆಯ ಉಪಗ್ರಹಗಳು 25 ಶೇಕಡಾ ಆಗಿದ್ದು, ಕಸದ ವಸ್ತುಗಳು 75 ಶೇಕಡಾ ಆಗಿದ್ದವು. 2030ರ ವೇಳೆಗೆ ಈ ಅನುಪಾತ 50-50 ಆಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್