ನಾಡೋಜ ಡಾ. ಎಸ್‌ ಆರ್‌ ರಾಮಸ್ವಾಮಿ(ಸಂಗ್ರಹ ಚಿತ್ರ) 
ರಾಜ್ಯ

ಡಿವಿಜಿ ಒಡನಾಡಿ,ಹಿರಿಯ ಪತ್ರಕರ್ತ, ಸಾಹಿತಿ ಡಾ.ಎಸ್‌ಆರ್ ರಾಮಸ್ವಾಮಿ ನಿಧನ

ಇಂದು ಮಧ್ಯಾಹ್ನ 12:00ರ ವರೆಗೆ ರಾಷ್ಟ್ರೋತ್ಥಾನದ ಕೇಂದ್ರ ಕಚೇರಿ, ಕೇಶವಶಿಲ್ಪದಲ್ಲಿ ಪಾರ್ಥಿವ ಶರೀರದ ಅಂತಿಮದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ರಾಷ್ಟ್ರೋತ್ಥಾನ ಪರಿಷತ್‌ನ ನಿಕಟಪೂರ್ವ ಅಧ್ಯಕ್ಷರು ಹಾಗೂ ರಾಷ್ಟ್ರೋತ್ಥಾನ ಸಾಹಿತ್ಯದ ಗೌರವ ಸಂಪಾದಕರಾಗಿದ್ದ ನಾಡೋಜ ಡಾ. ಎಸ್‌ ಆರ್‌ ರಾಮಸ್ವಾಮಿ (88 ವ) ಇಂದು ಶುಕ್ರವಾರ ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ. ರಾಮಸ್ವಾಮಿಯವರು ಬೆಂಗಳೂರಿನ ಶಂಕರಪುರಂನ ರಂಗರಾವ್ ರಸ್ತೆಯಲ್ಲಿರುವ ತಮ್ಮ ಸ್ವಗೃಹದಲ್ಲಿ ವಿಧಿವಶರಾಗಿದ್ದಾರೆ.

ಇಂದು ಮಧ್ಯಾಹ್ನ 12:00ರ ವರೆಗೆ ರಾಷ್ಟ್ರೋತ್ಥಾನದ ಕೇಂದ್ರ ಕಚೇರಿ, ಕೇಶವಶಿಲ್ಪದಲ್ಲಿ ಪಾರ್ಥಿವ ಶರೀರದ ಅಂತಿಮದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ನಾಡೋಜ ಎಸ್‌.ಆರ್‌.ರಾಮಸ್ವಾಮಿ ಅವರು ಪತ್ರಕರ್ತರಾಗಿ, ಲೇಖಕರಾಗಿ, ಚಿಂತಕರಾಗಿ, ವಿಮರ್ಶಕರಾಗಿ, ಸಾಮಾಜಿಕ ಕಾರ್ಯಕರ್ತರಾಗಿ ನಾಡಿನಲ್ಲಿ ಸುಪರಿಚಿತರು. ಮೂಲತಃ ಬೆಂಗಳೂರಿನವರೇ ಆದ ರಾಮಸ್ವಾಮಿ ಅವರು ಕನ್ನಡ, ತೆಲುಗು, ಸಂಸ್ಕೃತ, ಹಿಂದಿ, ಇಂಗ್ಲಿಷ್, ಜರ್ಮನ್, ಫ್ರೆಂಚ್ ಭಾಷೆಗಳಲ್ಲಿ ಪ್ರಾವೀಣ್ಯತೆ ಹೊಂದಿದವರು.

1950ರ ದಶಕದಲ್ಲಿ ಪತ್ರಿಕೋದ್ಯಮ ಪ್ರವೇಶಿಸಿದ ಇವರು, 1972 ರಿಂದ 79ರ ವರೆಗೆ ಸುಧಾ ವಾರಪತ್ರಿಕೆಯ ಮುಖ್ಯ ಉಪಸಂಪಾದಕರಾಗಿ ಸೇವೆ ಸಲ್ಲಿಸಿದರು. 1980ರಲ್ಲಿ ರಾಷ್ಟೋತ್ಥಾನ ಸಾಹಿತ್ಯ ಮತ್ತು ಉತ್ಥಾನ ಮಾಸಪತ್ರಿಕೆಯ ಗೌರವ ಪ್ರಧಾನ ಸಂಪಾದಕರಾಗಿ ನಿಧನರಾಗುವವರೆಗೂ ಆ ಹುದ್ದೆಯಲ್ಲಿ ಸೇವಾನಿರತರಾಗಿದ್ದರು.

ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸುಮಾರು 55 ಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿರುವ ಅವರು ಸಾವಿರಾರು ಲೇಖನ ಬರೆದಿದ್ದಾರೆ. ಐದು ದಶಕಗಳ ಸಾಹಿತ್ಯ ಮತ್ತು ಪತ್ರಿಕೋದ್ಯಮ ಜೀವನದ ನಡುವೆ ಸ್ವದೇಶಿ ಚಳವಳಿಯ ಬಲವಾದ ಪ್ರತಿಪಾದಕರೂ ಆಗಿದ್ದರು.

ಡಿ.ವಿ.ಗುಂಡಪ್ಪ ಮತ್ತಿತರ ಶ್ರೇಷ್ಠ ಚಿಂತಕರ ಒಡನಾಟ ಇವರಿಗೆ ಲಭಿಸಿತ್ತು. ಡಿ.ವಿ.ಜಿ. ಅವರೊಂದಿಗೆ ಅತ್ಯಂತ ನಿಕಟ ಸಂಪರ್ಕ ಹೊಂದಿದ್ದ ಅವರು, ಡಿವಿಜಿಯವರ ಅತ್ಯಮೂಲ್ಯ ಗ್ರಂಥವಾದ ’ಜೀವನಧರ್ಮಯೋಗ’ ಸೇರಿದಂತೆ ಅನೇಕ ಗ್ರಂಥಗಳ ಪ್ರಕಾಶನಕ್ಕೆ ಬಹುಮುಖವಾಗಿ ಶ್ರಮಿಸಿದವರು.

ಹಲವು ಪ್ರಶಸ್ತಿ, ಗೌರವಗಳು

ಇವರು ಬರೆದ ’ಶತಮಾನದ ತಿರುವಿನಲ್ಲಿ ಭಾರತ’ ಕೃತಿಗೆ 1992ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. 2006ರಲ್ಲಿ 'ಆರ್ಯಭಟ' ಪ್ರಶಸ್ತಿ, 2008ರಲ್ಲಿ ರಾಜ್ಯಮಟ್ಟದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2009ರಲ್ಲಿ ಮಿಥಿಕ್ ಸೊಸೈಟಿ ಶತಮಾನದ ಪ್ರಶಸ್ತಿ, 2011ರಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ, 2011ರಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ 'ವರ್ಷದವ್ಯಕ್ತಿ' ಪ್ರಶಸ್ತಿ, ಮೈಸೂರಿನ ಡಿವಿಜಿ ಬಳಗದಿಂದ 'ಡಿವಿಜಿ ಪ್ರಶಸ್ತಿ' ಹಾಗೂ 2015ರಲ್ಲಿ ಹಂಪಿ ವಿಶ್ವವಿದ್ಯಾನಿಲಯದಿಂದ ಪ್ರತಿಷ್ಠಿತ 'ನಾಡೋಜ' ಪ್ರಶಸ್ತಿಗಳಿಂದ ರಾಮಸ್ವಾಮಿ ಅವರು ಪುರಸ್ಕೃತರಾಗಿದ್ದಾರೆ. 2022-23ನೇ ಸಾಲಿ‌ನ ಪಂಪ ಪ್ರಶಸ್ತಿಗೆ ಡಾ.ಎಸ್.ಆರ್.ರಾಮಸ್ವಾಮಿ ಪಾತ್ರವಾಗಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕ ಮಧ್ಯಸ್ಥಿಕೆಯಲ್ಲಿ ಇಸ್ರೇಲ್–ಲೆಬನಾನ್ ಶಾಂತಿ ಪ್ರಯತ್ನ: ಕದನ ವಿರಾಮವಿಲ್ಲದೆ ಮಾತುಕತೆ ಸಾಧ್ಯವಿಲ್ಲ; ಹಿಜ್ಬುಲ್ಲಾ ಷರತ್ತು, ಉದ್ವಿಗ್ನತೆ ಮುಂದುವರಿಕೆ ಸಾಧ್ಯತೆ

‘ಮಾನವಕುಲಕ್ಕೆ ಶಾಪ’ ನೀವು, ನರಕದಲ್ಲಿ ಬೆಂದು ಹೋಗಿ; ಇಸ್ರೇಲ್'ಗೆ ಪಾಕ್ ಶಾಪ, ಶಾಂತಿ ಮಾತುಕತೆ ಮಧ್ಯಸ್ಥಿಕೆ ನಡುವೆಯೇ ಶಾಕಿಂಗ್ ಹೇಳಿಕೆ..!

ತಮಿಳುನಾಡಿನಲ್ಲಿ ದ್ರಾವಿಡ ಪಕ್ಷಗಳ ನೇರ ಸೆಣಸಾಟ ಮುಂದುವರಿಯಲಿದೆಯೇ? ತೃತೀಯ ಶಕ್ತಿ ಉದಯಿಸುತ್ತದೆಯೇ? (ನೇರ ನೋಟ)

ಹಾರ್ಮುಜ್ ಟ್ಯಾಂಕರ್ ಶುಲ್ಕ ವಿವಾದ: ಕೂಡಲೇ ನಿಲ್ಲಿಸಿ...; ಇರಾನ್ ವಿರುದ್ಧ ಗುಡುಗಿದ ಟ್ರಂಪ್, ಕಠಿಣ ಎಚ್ಚರಿಕೆ

ಶಾಂತಿ ಮಾತುಕತೆ ಮಧ್ಯಸ್ಥಿಕೆ ವಹಿಸಿ, ವಿನಾಶ ಬಯಸಿದರೆ ಒಪ್ಪಲಾಗದು: ಪಾಕ್ ವಿರುದ್ಧ ಗುಡುಗಿದ ಇಸ್ರೇಲ್..!

SCROLL FOR NEXT