ವಚನಾನಂದ ಶ್ರೀಗಳು 
ರಾಜ್ಯ

ಲೆಕ್ಕಾ ಕೊಡಿ.. ಹೈ ಡ್ರಾಮಾ: ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಿಂದ ವಚನಾನಂದ ಶ್ರೀ ಉಚ್ಛಾಟನೆ

ಗುರುಪೀಠದಲ್ಲಿ ನಡೆದ ಧರ್ಮದರ್ಶಿ ಸಭೆಯಲ್ಲಿ 12 ಜನ ಧರ್ಮದರ್ಶಿಗಳಿಂದ ಅಂತಿಮ ನಿರ್ಧಾರ ಕೈಗೊಳ್ಳಲಾಗಿದೆ.

ದಾವಣಗೆರೆ: ಪ್ರಮುಖ ಬೆಳವಣಿಗೆಯಲ್ಲಿ ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಿಂದ ಖ್ಯಾತ ಯೋಗಗುರು ವಚನಾನಂದ ಶ್ರೀ ಅವರನ್ನು ಉಚ್ಚಾಟನೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಕೆಲವ ವಾರಗಳ ಹಿಂದಷ್ಟೇ ಕೂಡಲಸಂಗಮದಲ್ಲಿರುವ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್ ನಡೆಸುವ ಪೀಠದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ಉಚ್ಚಾಟನೆ ಮಾಡಲಾಗಿತ್ತು. ಲೈಂಗಿಕ ಕಿರುಕುಳ ಆರೋಪದ ಮೇರೆಗೆ ಅವರನ್ನು ಪದಚ್ಯುತಗೊಳಿಸಲಾಗಿತ್ತು. ಇದೀಗ ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಿಂದ ವಚನಾನಂದ ಶ್ರೀಗಳನ್ನು ಕೂಡ ಅಮಾನತು ಮಾಡಲಾಗಿದೆ.

ಮೂಲಗಳ ಪ್ರಕಾರ ಹರಿಹರ ತಾಲೂಕಿನ ಹನಗವಾಡಿ ಬಳಿಯ ಗುರುಪೀಠದಲ್ಲಿ ನಡೆದ ಧರ್ಮದರ್ಶಿ ಸಭೆಯಲ್ಲಿ 12 ಜನ ಧರ್ಮದರ್ಶಿಗಳಿಂದ ಅಂತಿಮ ನಿರ್ಧಾರ ಕೈಗೊಳ್ಳಲಾಗಿದ್ದು, ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಿಂದ ವಚನಾನಂದ ಶ್ರೀ ಅವರನ್ನು ಪದಚ್ಯುತಿ ಮಾಡಿರುವ ಬಗ್ಗೆ ಹರಿಹರ ಪಂಚಮಸಾಲಿ ಪೀಠದ ಟ್ರಸ್ಟಿ ಬಸವರಾಜ ದಿಂಡೂರ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಹರಿಹರ ಪಂಚಮಸಾಲಿ ಪೀಠದಲ್ಲಿ ಟ್ರಸ್ಟಿ ಬಸವರಾಜ ದಿಂಡೂರ ಅವರು ನೀಡಿರುವ ಮಾಹಿತಿ ಪ್ರಕಾರ, ವಚನಾನಂದ ಶ್ರೀಗೆ ಶ್ವಾಸಪೀಠ ಅಥವಾ ಹರಿಹರ ಪಂಚಮಸಾಲಿ ಪೀಠದ ಪೈಕಿ ಎರಡರಲ್ಲಿ ಒಂದನ್ನು ಆಯ್ಕೆ ಮಾಡುವಂತೆ ಹೇಳಿದ್ದರಂತೆ. ಆದರೆ ಇದಕ್ಕೆ ತದ್ವಿರುದ್ಧವಾಗಿ ನಡೆದುಕೊಂಡ ಕಾರಣವಾಗಿ ವಚನಾನಂದ ಶ್ರೀಗಳನ್ನು ಪದಚ್ಯುತಿ ಮಾಡಿದ್ದೇವೆ ಎಂದ ಬಸವರಾಜ ದಿಂಡೂರ ಹೇಳಿದ್ದಾರೆ.

ವೈಯುಕ್ತಿಕ ನಿರ್ಧಾರ ಅಲ್ಲ.. ಸಮಾಜದ ನಿರ್ಧಾರ

ಇದೇ ವೇಳೆ ಈ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಟ್ರಸ್ಟಿ ಜಿ.ಪಿ.ಪಾಟೀಲ್ ಅವರು, ಟ್ರಸ್ಟಿಗಳ ಸಭೆ ಬಳಿಕ ಮಾತನಾಡಿ, ಇದು ಟ್ರಸ್ಟ್ ನ ವೈಯಕ್ತಿಕ ನಿರ್ಧಾರ ಅಲ್ಲ, ಸಮಾಜದ ನಿರ್ಧಾರ. ಸ್ವಾಮೀಜಿಗಳು ನಮ್ಮನ್ನು ಒಳಗೆ ಕರೆಯೋಕೆ ತಯಾರಿಲ್ಲ, ಶ್ವಾಸಗುರು ಪೀಠ ಬಿಡದೇ ಇರೋದು ಮುಖ್ಯ ಕಾರಣ. ಉಳಿದ ಕಾರಣ ಏನು ಎಂಬುದನ್ನು ಸದ್ಯದಲ್ಲೇ ಹೇಳುತ್ತೇವೆ ಎಂದು ಹೇಳಿದರು.

ಪ್ರತಿಕ್ರಿಯೆ ನೀಡದ ಶ್ರೀಗಳು

ಇನ್ನು ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಿಂದ ತನ್ನನ್ನು ಉಚ್ಚಾಟನೆ ಮಾಡಿರುವ ಬಗ್ಗೆ ವಚನಾನಂದ ಶ್ರೀ ಪ್ರತಿಕ್ರಿಯೆ ನೀಡಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪಶ್ಚಿಮ ಬಂಗಾಳದಲ್ಲಿ ಮುಂದುವರಿದ ರಾಜಕೀಯ ಹಿಂಸಾಚಾರ: ಅಭಿಷೇಕ್ ಬೆನ್ನಲ್ಲೇ ಕಲ್ಯಾಣ್ ಬ್ಯಾನರ್ಜಿ ಮೇಲೂ ದಾಳಿ, BJP ವಿರುದ್ಧ ಆರೋಪ..!

ಇರಾನ್ ಜೊತೆ ಶಾಂತಿ ಒಪ್ಪಂದದತ್ತ ಅಮೆರಿಕಾ; ಅಣ್ವಸ್ತ್ರ ತ್ಯಜಿಸಲು ಒಪ್ಪಿದ ಟೆಹ್ರಾನ್, ಟ್ರಂಪ್ ಮಹತ್ವದ ಹೇಳಿಕೆ..!

T-20 ಮ್ಯಾಚ್ ನಂತೆ ಹೊಸ ಸರ್ಕಾರ: ಡಿಕೆ ಶಿವಕುಮಾರ್ ಆಕ್ಷನ್-ಪ್ಯಾಕ್ ಇನ್ನಿಂಗ್ಸ್; 'ಬಂಡೆ' 'ಪವರ್ ಪ್ಲೇ'- ಆಕ್ರಮಣಕಾರಿ ಬ್ಯಾಟಿಂಗ್!

ಭಾರತೀಯ ಸೇನೆಗೆ ನೂತನ ಸಾರಥಿ: CDS ಆಗಿ ಎನ್‌ಎಸ್ ರಾಜಾ ಸುಬ್ರಮಣಿ ಅಧಿಕಾರ ಸ್ವೀಕಾರ..!

US-Iran war: ಶಾಂತಿ ಕರಡು ಪ್ರತಿಗೆ ತಿದ್ದುಪಡಿ: ಪರಮಾಣು ಮುಕ್ತ ಇರಾನ್‌ಗೆ ಟ್ರಂಪ್ ಪಟ್ಟು, ಕೊನೆ ಕ್ಷಣದಲ್ಲಿ ಬಿಗ್ ಶಾಕ್ ಕೊಟ್ಟ ಅಮೆರಿಕಾ..!

SCROLL FOR NEXT