ರಾಹುಲ್ ಗಾಂಧಿ-ಕೆಎನ್ ರಾಜಣ್ಣ 
ರಾಜ್ಯ

'ದೊರೆ ಮಾಡಿದ್ರೆ ಶಿಕ್ಷೆ ಇಲ್ವಾ': ಕೆ.ಎನ್ ರಾಜಣ್ಣ ಆಕ್ರೋಶ

ಸಿಎಂ ಸಿದ್ದರಾಮಯ್ಯ ಪರವಾಗಿ ಧ್ವನಿ ಎತ್ತಿದ ನಾಯಕರನ್ನೇ ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವ ಸ್ಥಾನದಿಂದ ಉಚ್ಛಾಟನೆಗೊಂಡಿರುವ ಕೆಎನ್​ ರಾಜಣ್ಣ ಶಾಕಿಂಗ್ ಹೇಳಿಕೆ ನೀಡಿದ್ದು ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಆಕ್ರೋಶ ಹೊರಹಾಕಿದರು.

ತುಮಕೂರು: ಸಿಎಂ ಸಿದ್ದರಾಮಯ್ಯ ಪರವಾಗಿ ಧ್ವನಿ ಎತ್ತಿದ ನಾಯಕರನ್ನೇ ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವ ಸ್ಥಾನದಿಂದ ಉಚ್ಛಾಟನೆಗೊಂಡಿರುವ ಕೆಎನ್​ ರಾಜಣ್ಣ ಶಾಕಿಂಗ್ ಹೇಳಿಕೆ ನೀಡಿದ್ದು ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಆಕ್ರೋಶ ಹೊರಹಾಕಿದರು.

ಕಾಂಗ್ರೆಸ್ ಪಕ್ಷ ಶಿಸ್ತಿನ ಪಕ್ಷ. ಈ ಹಿಂದೆ ಸದ್ಗುರು, ರಾಹುಲ್ ಗಾಂಧಿ ಯಾರು, ನನಗೆ ಗೊತ್ತಿಲ್ಲ ಎಂದು ಹೇಳಿದ್ದರು. ಇದೀಗ ರಾಹುಲ್​ ಗಾಂಧಿಯೇ ಸದ್ಗುರು ಜೊತೆ ಹೋಗಿ ಕುಳಿತುಕೊಳ್ಳುತ್ತಾರೆ. ಇದು ಶಿಸ್ತು ಮೀರಿದಂತೆ ಅಲ್ವಾ ಎಂದು ರಾಜಣ್ಣ ಪ್ರಶ್ನೆ ಮಾಡಿದ್ದಾರೆ. ದೊರೆ ಮಾಡಿದ್ದಕ್ಕೆ ದಂಡ ಇಲ್ಲ ಅನ್ನೋ ಗಾದೆ ಮಾತಿದೆ. ಹಾಗೆಯೇ ನಡೆಯುತ್ತಿದೆ ಎನ್ನುವ ಮೂಲಕ ಕೆಎನ್​ ರಾಜಣ್ಣ ಕಾಂಗ್ರೆಸ್ ಶಿಸ್ತು ಕ್ರಮದ ವಿರುದ್ಧ ಅಸಮಾಧಾನ ಹೊರಹಾಕಿದರು.

ನಾನು ಪಕ್ಷಕ್ಕಾಗಿ ದುಡಿಯುವವನು, ನಾನು ಯಾವತ್ತು ಅಧಿಕಾರ ಹುಡುಕಿಕೊಂಡು‌ ಹೋದವನಲ್ಲ. ಅಧಿಕಾರ ಸಿಕ್ಕರೆ ಸ್ವೀಕರಿಸುತ್ತೇನೆ. ಅಧಿಕಾರದ ಲಾಭ ಬಡಜನರಿಗೆ ತಲುಪಿಸುತ್ತೇನೆ. ಅದನ್ನ ಸ್ವಂತಕ್ಕೆ ಬಳಸಿಕೊಳ್ಳಲ್ಲ ಎಂದು ರಾಜಣ್ಣ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾವೇರಿಗೆ ಸಂಧಾನ ಸೂತ್ರ: ಆಗಸ್ಟ್ 3 ರಂದು ತಮಿಳುನಾಡು ಸಿಎಂ ವಿಜಯ್ ಬೆಂಗಳೂರಿಗೆ ಬರುವುದು ಡೌಟು? ಇದೇ ಕಾರಣ...!

ಪರೀಕ್ಷಾ ವ್ಯವಸ್ಥೆ ಸುಧಾರಣೆ: ನಂದನ್ ನಿಲೇಕಣಿ ನೇತೃತ್ವದಲ್ಲಿ ಉನ್ನತ ಮಟ್ಟದ ಟಾಸ್ಕ್ ಫೋರ್ಸ್ ರಚನೆ; ಪ್ರಧಾನಿ ಮೋದಿ ಘೋಷಣೆ! Video

CWG 2026: ಗ್ಲಾಸ್ಗೋದಲ್ಲಿ ಮೀರಾಬಾಯಿ ಚಾನು ಐತಿಹಾಸಿಕ ಸಾಧನೆ; ದೇಶದಾದ್ಯಂತ ಸಂಭ್ರಮ, ಪ್ರಧಾನಿ ಮೋದಿ ಶ್ಲಾಘನೆ

3rd T20: ಜಿಂಬಾಬ್ವೆ ವಿರುದ್ಧ 35 ರನ್ ಗೆಲುವು; 3-0 ಅಂತರದಿಂದ ಸರಣಿ 'ಕ್ಲೀನ್ ಸ್ವೀಪ್' ಮಾಡಿದ ಭಾರತ!

ತುಮಕೂರು: ನಡುರಸ್ತೆಯಲ್ಲಿ ರೌಡಿಶೀಟರ್‌ ಬರ್ಬರ ಹತ್ಯೆ!