ಎತ್ತಿನಹೊಳೆ ಯೋಜನೆ 
ರಾಜ್ಯ

ಎತ್ತಿನಹೊಳೆ ಯೋಜನೆ: ವಿದ್ಯುತ್‌ ಪೂರೈಸಿದ ಸೆಸ್ಕಾಂಗೆ ಕೋಟ್ಯಂತರ ರೂ. ಬಿಲ್‌ ಬಾಕಿ, ನೋಟಿಸ್‌ ಕೊಟ್ಟರೂ ಕ್ಯಾರೆ ಎನ್ನುತ್ತಿಲ್ಲ ಸರ್ಕಾರ..!

ಹಾನುಬಾಳ್ಳು, ದೊಡ್ಡನಗರ, ಕುಂಬಾರಡಿ, ಕಾಡುಗರಹಳ್ಳಿ, ಎತ್ತಿನಹೊಳೆ 1 ಮತ್ತು 2 ಕೇಂದ್ರಗಳು ಪ್ರಮುಖವಾಗಿದ್ದು, ಈ ಎಲ್ಲಾ ಘಟಕಗಳ ವಿದ್ಯುತ್ ಬಳಕೆ ಭಾರೀ ಪ್ರಮಾಣದಲ್ಲಿದೆ. ಆದರೆ ಇವುಗಳ ವಿದ್ಯುತ್ ಬಿಲ್‌ಗಳು ಹಲವು ತಿಂಗಳುಗಳಿಂದ ಪಾವತಿಯಾಗದೇ ಬಾಕಿ ಉಳಿದಿದೆ.

ಹಾಸನ: ಎತ್ತಿನಹೊಳೆ ಸಮಗ್ರ ಕುಡಿಯುವ ನೀರು ಯೋಜನೆಗೆ ಸಂಬಂಧಿಸಿದ ವಿದ್ಯುತ್ ಬಾಕಿ ಹಣದ ಸಮಸ್ಯೆ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆಯುತ್ತಿದೆ. ಯೋಜನೆಗೆ ವಿದ್ಯುತ್ ಒದಗಿಸಿದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿ (ಸೆಸ್ಕಾಂ)ಗೆ ರೂ. 232.11 ಕೋಟಿ ಪಾವತಿ ಬಾಕಿ ಬರಬೇಕಿದ್ದು, ಸಂಕಷ್ಟ ಎದುರಿಸುವಂತಾಗಿದೆ.

ಯತ್ತಿನಹೊಳೆ ಯೋಜನೆ ರಾಜ್ಯದ ಅತ್ಯಂತ ದೊಡ್ಡ ಕುಡಿಯುವ ನೀರಿನ ಯೋಜನೆಗಳಲ್ಲಿ ಒಂದಾಗಿದ್ದು, ಏಳು ಜಿಲ್ಲೆಗಳ 47 ತಾಲೂಕುಗಳಿಗೆ ನೀರು ಪೂರೈಸುವ ಉದ್ದೇಶ ಹೊಂದಿದೆ. ಈ ಯೋಜನೆಯಡಿ ಹಲವಾರು ಹಂತಗಳಲ್ಲಿ ನೀರನ್ನು ಎತ್ತುವ (ಪಂಪಿಂಗ್) ಕೇಂದ್ರಗಳನ್ನು ನಿರ್ಮಿಸಲಾಗಿದೆ.

ಹಾನುಬಾಳ್ಳು, ದೊಡ್ಡನಗರ, ಕುಂಬಾರಡಿ, ಕಾಡುಗರಹಳ್ಳಿ, ಎತ್ತಿನಹೊಳೆ 1 ಮತ್ತು 2 ಕೇಂದ್ರಗಳು ಪ್ರಮುಖವಾಗಿದ್ದು, ಈ ಎಲ್ಲಾ ಘಟಕಗಳ ವಿದ್ಯುತ್ ಬಳಕೆ ಭಾರೀ ಪ್ರಮಾಣದಲ್ಲಿದೆ. ಆದರೆ ಇವುಗಳ ವಿದ್ಯುತ್ ಬಿಲ್‌ಗಳು ಹಲವು ತಿಂಗಳುಗಳಿಂದ ಪಾವತಿಯಾಗದೇ ಬಾಕಿ ಉಳಿದಿದೆ.

ಇತ್ತೀಚೆಗೆ ಸೆಸ್ಕಾಂ ಇಂಜಿನಿಯರ್‌ಗಳು ವಿವಿಧ ಯೋಜನೆಗಳ ಬಾಕಿ ವಿದ್ಯುತ್ ಬಿಲ್‌ಗಳ ಕುರಿತು ಸಮಗ್ರ ವರದಿ ಸಿದ್ಧಪಡಿಸಿ, ರಾಜ್ಯ ಇಂಧನ ಇಲಾಖೆಯ ಕಾರ್ಯದರ್ಶಿಗೆ ಸಲ್ಲಿಸಿದ್ದಾರೆ. ಈ ವರದಿಯಲ್ಲಿ ಎತ್ತಿನಹೊಳೆ ಯೋಜನೆಯ ಬಾಕಿ ಮೊತ್ತವೇ ಹೆಚ್ಚು ಉಳಿದಿದೆ ಎಂಬುದು ಗಮನಾರ್ಹ ವಿಚಾರವಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2024ರ ಸೆಪ್ಟೆಂಬರ್ 6ರಂದು ಈ ಯೋಜನೆಯ ಮೊದಲ ಹಂತವನ್ನು ಉದ್ಘಾಟಿಸಿದ್ದರು. ಆದರೆ ಉದ್ಘಾಟನೆಯ ಬಳಿಕವೂ ಯೋಜನೆಯ ಹಣಕಾಸು ನಿರ್ವಹಣೆ ಪ್ರಶ್ನಾರ್ಥಕವಾಗಿದೆ. ತಿಂಗಳಿಗೆ ಸರಾಸರಿ ರೂ. 8 ಕೋಟಿ ವಿದ್ಯುತ್ ವೆಚ್ಚವಾಗುತ್ತಿರುವುದರಿಂದ, ಬಾಕಿ ಮೊತ್ತ ವೇಗವಾಗಿ ಏರಿಕೆಯಾಗುತ್ತಿದೆ.

ಇದೇ ವೇಳೆ ಹೊಳೆನರಸೀಪುರ ಮತ್ತು ಚನ್ನರಾಯಪಟ್ಟಣ ತಾಲೂಕುಗಳಲ್ಲಿ ಇರುವ ಏತ ನೀರಾವರಿ ಯೋಜನೆಗಳು, ನಗರಸಭೆ ಮತ್ತು ಗ್ರಾಮ ಪಂಚಾಯಿತಿಗಳ ಬೀದಿ ದೀಪಗಳು ಹಾಗೂ ಕುಡಿಯುವ ನೀರಿನ ಯೋಜನೆಗಳ ವಿದ್ಯುತ್ ಬಾಕಿಯೂ ಸೆಸ್ಕಾಂಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಎಲ್ಲಾ ಬಾಕಿ ಮೊತ್ತಗಳು ಸೇರಿ ಸಂಸ್ಥೆಯ ಆರ್ಥಿಕ ಸ್ಥಿತಿಗೆ ಹೊಡೆತ ನೀಡುತ್ತಿವೆ.

ಸೆಸ್ಕಾಂಗೆ ಅಧಿಕಾರಿಗಳು ಮಾತನಾಡಿ, ಸರ್ಕಾರದ ಯೋಜನೆಗಳಾಗಿರುವುದರಿಂದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲು ಸಾಧ್ಯವಿಲ್ಲ. ಇದರಿಂದಾಗಿ ಬಾಕಿ ವಸೂಲಿ ಮಾಡುವುದು ಕಷ್ಟಕರವಾಗಿದೆ ಎಂದು ಹೇಳಿದ್ದಾರೆ.

ಬಾಕಿದಾರರಿಗೆ ನೋಟಿಸ್ ನೀಡಲು ನಿರ್ಧರಿಸಲಾಗಿದ್ದು, ಸಂಬಂಧಪಟ್ಟ ಇಲಾಖೆಗಳ ಗಮನಕ್ಕೂ ವಿಷಯ ತರಲಾಗಿದೆ ಎಂದು ತಿಳಿಸಿದ್ದಾರೆ.

ಸೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಕೃಷ್ಣಪ್ಪ ಅವರು ಮಾತನಾಡಿ, “ವಿದ್ಯುತ್ ಕಡಿತ ಮಾಡುವ ಅಧಿಕಾರ ನಮಗೆ ಇಲ್ಲ. ಆದ್ದರಿಂದ ನೋಟಿಸ್ ನೀಡುವುದು ಮತ್ತು ಮೇಲ್ದರ್ಜೆಯ ಅಧಿಕಾರಿಗಳ ಗಮನಕ್ಕೆ ತರುವುದು ಮಾತ್ರ ಸಾಧ್ಯ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ವಿರುದ್ಧ ಪ್ರತೀಕಾರ: ರಷ್ಯಾ ತೈಲ ವಿನಾಯಿತಿ ವಿಸ್ತರಣೆ ಇಲ್ಲ ಎಂದ ಅಮೆರಿಕಾ; ಜಾಗತಿಕ ಮಾರುಕಟ್ಟೆಗೆ ಶಾಕ್, ಭಾರತದ ಮೇಲೂ ಪರಿಣಾಮ ಸಾಧ್ಯತೆ..!

ಹಾರ್ಮುಜ್ ಜಲಸಂಧಿ ದಿಗ್ಬಂಧನ: ಹಿಂದೆ ಸರಿಯದಿದ್ದರೆ ಗಲ್ಪ್ ವ್ಯಾಪಾರ ಸಂಪೂರ್ಣ ಅಸ್ತವ್ಯಸ್ತ; ಅಮೆರಿಕಾಗೆ ಇರಾನ್ ಖಡಕ್ ಎಚ್ಚರಿಕೆ..!

SSLC ಯಲ್ಲಿ ತೃತೀಯ ಭಾಷೆಗೆ ಗ್ರೇಡ್ ನೀಡುವ ಸರ್ಕಾರದ ನಿರ್ಧಾರಕ್ಕೆ ಭಾರೀ ಮುಖಭಂಗ: ಅಂಕಗಳನ್ನೇ ನೀಡಲು ಹೈಕೋರ್ಟ್ ಮಹತ್ವದ ಆದೇಶ

ದ್ವಿಪಕ್ಷೀಯ ವಾಣಿಜ್ಯ ಒಪ್ಪಂದ: ಜಂಟಿ ಕಾರ್ಯದರ್ಶಿ ದರ್ಪಣ್ ಜೈನ್ ನೇತೃತ್ವದ ನಿಯೋಗ ಏ.20ಕ್ಕೆ ಅಮೆರಿಕಾಕ್ಕೆ..!

ನಾನೇನು ಕೇರಳದಲ್ಲಿ ಮೋಜು- ಮಸ್ತಿಗೆ ಹೋಗಿರಲಿಲ್ಲ: ನನ್ನ ಹಣೆಬರಹ ಬರೆಯಲು ಯಾರಿಂದಲೂ ಸಾಧ್ಯವಿಲ್ಲ; ಆಪ್ತರ ತಲೆದಂಡ- ಜಮೀರ್ ಕೆಂಡ!

SCROLL FOR NEXT