ಶಾಸಕ ವಿನಯ್ ಕುಲಕರ್ಣಿ 
ರಾಜ್ಯ

ಯೋಗೀಶ್ ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ, ಶಾಸಕ ಸ್ಥಾನ ರದ್ದು!

ಜನಪ್ರತಿನಿಧಿ ಕಾಯ್ದೆ, 1951 ರ ಪ್ರಕಾರ ಕೊಲೆ ಕೇಸ್‌ನಲ್ಲಿ ಶಾಸಕರೊಬ್ಬರು ದೋಷಿ ಎಂದು ಸಾಬೀತಾಗಿ, ಶಿಕ್ಷೆ ಜಾರಿಯಾದ ನಂತರ ಅವರ ಶಾಸಕ ಸ್ಥಾನ ಅಧಿಕೃತವಾಗಿ ರದ್ದಾಗುತ್ತದೆ.

ಬೆಂಗಳೂರು: ಧಾರವಾಡದ ಜಿಪಂ ಮಾಜಿ ಸದಸ್ಯ ಯೋಗೀಶ್‌ ಗೌಡ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್‌ ಶಾಸಕ ವಿನಯ್ ಕುಲಕರ್ಣಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಇದರಿಂದಾಗಿ ಅವರು ಶಾಸಕ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಹೌದು. ಬುಧವಾರ ಶಾಸಕರು ಸೇರಿದಂತೆ 16 ಮಂದಿಯನ್ನು ದೋಷಿ ಎಂದು ತೀರ್ಪು ಪ್ರಕಟಿಸಿದ್ದ ಕೋರ್ಟ್‌ ಇಂದು ಶಿಕ್ಷೆಯ ಪ್ರಮಾಣ ಪ್ರಕಟಿಸಿದೆ. ಜೀವವಾಧಿ ಶಿಕ್ಷೆಯ ಕೋರ್ಟ್ ಆದೇಶದಿಂದಾಗಿ ಜನಪ್ರತಿನಿಧಿಗಳ ಕಾಯ್ದೆಯ ಸೆಕ್ಷನ್ 8(4) ರ ಪ್ರಕಾರ ತಕ್ಷಣದಿಂದಲೇ ವಿನಯ್‌ ಕುಲಕರ್ಣಿ ಅವರ ಶಾಸಕ ಸ್ಥಾನ ರದ್ದಾಗಿದೆ.

ಜನಪ್ರತಿನಿಧಿ ಕಾಯ್ದೆ, 1951 ರ ಪ್ರಕಾರ ಕೊಲೆ ಕೇಸ್‌ನಲ್ಲಿ ಶಾಸಕರೊಬ್ಬರು ದೋಷಿ ಎಂದು ಸಾಬೀತಾಗಿ, ಶಿಕ್ಷೆ ಜಾರಿಯಾದ ನಂತರ ಅವರ ಶಾಸಕ ಸ್ಥಾನ ಅಧಿಕೃತವಾಗಿ ರದ್ದಾಗುತ್ತದೆ.

ಯಾವುದೇ ಶಾಸಕ ಅಥವಾ ಸಂಸದರು ಕ್ರಿಮಿನಲ್ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗಿ, ಅವರಿಗೆ ನ್ಯಾಯಾಲಯವು ಕನಿಷ್ಠ 2 ವರ್ಷ ಅಥವಾ ಅದಕ್ಕಿಂತ ಹೆಚ್ಚು ಅವಧಿಯ ಜೈಲು ಶಿಕ್ಷೆ ವಿಧಿಸಿದರೆ, ಅವರು ತಕ್ಷಣವೇ ತಮ್ಮ ಸ್ಥಾನದಿಂದ ಅನರ್ಹಗೊಳ್ಳುತ್ತಾರೆ.

ಕೊಲೆ ಪ್ರಕರಣಗಳಲ್ಲಿ (ಐಪಿಸಿ ಸೆಕ್ಷನ್ 302 ಅಥವಾ ಬಿಎನ್‌ಎಸ್‌ ಸೆಕ್ಷನ್ 103) ಅಪರಾಧ ಸಾಬೀತಾದರೆ ಕನಿಷ್ಠ ಶಿಕ್ಷೆ ಜೀವಾವಧಿ ಕಾರಾಗೃಹ ವಾಸ ಅಥವಾ ಗರಿಷ್ಠ ಮರಣದಂಡನೆ ಆಗಿರುತ್ತದೆ. ಇದು 2 ವರ್ಷಗಳಿಗಿಂತ ಬಹಳ ಹೆಚ್ಚಿರುವುದರಿಂದ, ಕೊಲೆ ಪ್ರಕರಣದಲ್ಲಿ ದೋಷಿಯಾದ ತಕ್ಷಣ ಶಾಸಕ ಸ್ಥಾನ ರದ್ದಾಗುತ್ತದೆ. ಕೇವಲ ಶಾಸಕ ಸ್ಥಾನ ರದ್ದಾಗುವುದು ಮಾತ್ರವಲ್ಲ, ಅವರು ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾದ ದಿನದಿಂದ ಮುಂದಿನ 6 ವರ್ಷಗಳ ಕಾಲ ಯಾವುದೇ ಚುನಾವಣೆಗೆ ಸ್ಪರ್ಧಿಸುವಂತಿಲ್ಲ.

ಮುಂದಿನ ದಾರಿ ಯಾವುದು? ಜನಪ್ರತಿನಿಧಿ ನ್ಯಾಯಾಲಯವು ಶಿಕ್ಷೆ ಪ್ರಕಟಿಸಿದ ತಕ್ಷಣವೇ ಶಾಸಕರು ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬಹುದು. ಮೇಲಿನ ನ್ಯಾಯಾಲಯವು ಕೇವಲ ಅವರ ಜೈಲು ಶಿಕ್ಷೆಯ ಮೇಲಷ್ಟೇ ಅಲ್ಲದೇ, ಅವರ ಮೇಲಿನ ಅಪರಾಧ ನಿರ್ಣಯದ ಮೇಲೂ ತಡೆಯಾಜ್ಞೆ ನೀಡಿದರೆ ಮಾತ್ರ ಅವರ ಶಾಸಕ ಸ್ಥಾನ ಮರಳಿ ಸಿಗುತ್ತದೆ. ಕೇವಲ ಜಾಮೀನು ಸಿಕ್ಕರೆ ಸ್ಥಾನ ಉಳಿಯುವುದಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯೋಗೇಶ್ ಗೌಡ ಹತ್ಯೆ ಪ್ರಕರಣ: Congress ಶಾಸಕ ವಿನಯ್ ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ, ಮಹತ್ವದ ತೀರ್ಪು!

ಟಿ20 ವಿಶ್ವಕಪ್‌ಗೆ ಕಳಂಕ: ಚೆನ್ನೈ ಪಂದ್ಯದಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪ? ತನಿಖೆ ಕೈಗೊಂಡ ICC!

ಮಕ್ಕಳಿಂದ `ಮಸಾಜ್': ವಚನಾನಂದ ಶ್ರೀಗಳ ವಿರುದ್ಧ ಹಾಸ್ಟೇಲ್ ವಿದ್ಯಾರ್ಥಿಗಳಿಂದಲೇ ದೂರು

ಪೌರತ್ವ ಪ್ರಕರಣ: Rahul Gandhi ಗೆ ಮತ್ತೆ ಸಂಕಷ್ಟ, ತನಿಖೆಗೆ ಹೈಕೋರ್ಟ್ ಆದೇಶ!

ನಾನು 20 ವರ್ಷದಲ್ಲಿ ಮಾಡಲಾಗದ್ದನ್ನು ನನ್ನ ತಂಗಿ 5 ನಿಮಿಷದಲ್ಲಿ ಮಾಡಿ ತೋರಿದಳು, ನಮ್ ಇಬ್ರಿಗೂ ಹೆಂಡ್ತಿ ಸಮಸ್ಯೆ ಇಲ್ಲ: ನಗೆಗಡಲಲ್ಲಿ ತೇಲಿಸಿದ Rahul gandhi

SCROLL FOR NEXT