ಬೆಳ್ಳಂದೂರು ಫ್ಲೈಓವರ್ ಕೆಳಭಾಗಕ್ಕೆ ಹೊಸ ರೂಪ 
ರಾಜ್ಯ

ಗಬ್ಬೆದ್ದು ನಾರುತ್ತಿದ್ದ ತಾಣವೀಗ ಸುಂದರ ಸ್ಥಳ: ಬೆಳ್ಳಂದೂರು ಫ್ಲೈಓವರ್ ಕೆಳಭಾಗಕ್ಕೆ ಹೊಸ ರೂಪ..!

ಇಂಟೆಲ್ ಇಂಡಿಯಾ ಕಂಪನಿಯ ಸಿ.ಎಸ್.ಆರ್ ಅನುದಾನದಡಿ ಮತ್ತು ರೈಸಿಂಗ್ ಇಂಡಿಯಾ ಟ್ರಸ್ಟ್ ಸಹಯೋಗದೊಂದಿಗೆ ಈ ಜಾಗದಲ್ಲಿ ಗಿಡಗಳನ್ನು ಬೆಳೆಸಿ, ಕಲಾತ್ಮಕ ವಿನ್ಯಾಸ ಮತ್ತು ಆಸನ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.

ಬೆಂಗಳೂರು: ನಗರದ ಫ್ಲೈಓವರ್‌ಗಳ ಕೆಳಭಾಗದಲ್ಲಿ ಕಸದ ರಾಶಿ, ಧೂಳು, ಅನಾಥವಾಗಿ ನಿಂತ ವಾಹನಗಳು ಕಾಣಿಸುವುದು ಸಾಮಾನ್ಯ. ಇದೇ ರೀತಿ ಬೆಳ್ಳಂದೂರು ಫ್ಲೈಓವರ್ ಕೂಡ ಕಸದ ರಾಶಿಯಿಂದ ಗಬ್ಬೆದ್ದು ನಾರುತ್ತಿತ್ತು. ಆದರೀಗ ಇಲ್ಲಿನ ಸಂಪೂರ್ಣ ಚಿತ್ರಣವೇ ಬದಲಾಗಿದೆ.

ಈ ಹಿಂದೆ ಕಸ ಮತ್ತು ಧೂಳಿನಿಂದ ಕೂಡಿದ್ದ ಬೆಳ್ಳಂದೂರು ಫ್ಲೈಓವರ್ ಕೆಳಭಾಗದ ಜಾಗವನ್ನು ಈಗ ಸುಂದರವಾದ ಸಾರ್ವಜನಿಕ ಸ್ಥಳವಾಗಿ ಅಭಿವೃದ್ಧಿಪಡಿಸಲಾಗಿದೆ.

ಇಂಟೆಲ್ ಇಂಡಿಯಾ ಕಂಪನಿಯ ಸಿ.ಎಸ್.ಆರ್ ಅನುದಾನದಡಿ ಮತ್ತು ರೈಸಿಂಗ್ ಇಂಡಿಯಾ ಟ್ರಸ್ಟ್ ಸಹಯೋಗದೊಂದಿಗೆ ಈ ಜಾಗದಲ್ಲಿ ಗಿಡಗಳನ್ನು ಬೆಳೆಸಿ, ಕಲಾತ್ಮಕ ವಿನ್ಯಾಸ ಮತ್ತು ಆಸನ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.

ಪಾದಚಾರಿ ಮೊದಲು' (Pedestrian First) ಎಂಬ ವಿನ್ಯಾಸದಡಿ ವಿಶಾಲವಾದ ಫುಟ್‌ಪಾತ್‌ಗಳನ್ನು ನಿರ್ಮಿಸಲಾಗಿದೆ. ಸಾರ್ವಜನಿಕರಿಗೆ ವಿಶ್ರಮಿಸಲು ಆಸನ ವ್ಯವಸ್ಥೆಗಳು, ಹಸಿರು ಗಿಡಗಳು ಮತ್ತು ಕಲಾತ್ಮಕ ಗೋಡೆ ವಿನ್ಯಾಸಗಳನ್ನು ಅಳವಡಿಸಲಾಗಿದೆ.

ಈ ಜಾಗದಲ್ಲಿ ಪೌರಕಾರ್ಮಿಕರಿಗಾಗಿ ಪ್ರತ್ಯೇಕ 'ಸುವಿಧಾ' (Suvidha) ಕ್ಯಾಬಿನ್‌ಗಳನ್ನು ಸ್ಥಾಪಿಸಲಾಗಿದ್ದು, ಇದರಲ್ಲಿ ಅವರಿಗೆ ಮೂಲಭೂತ ಸೌಕರ್ಯಗಳು ಮತ್ತು ಸುಧಾರಿತ ಕೆಲಸದ ವಾತಾವರಣ ಸಿಗಲಿದೆ.

ಏಪ್ರಿಲ್ 15, 2026 ರಂದು ಬಿಬಿಎಂಪಿ ಹೆಚ್ಚುವರಿ ಆಯುಕ್ತರಾದ (ಅಭಿವೃದ್ಧಿ) ಲೋಖಂಡೆ ಸ್ನೇಹಲ್ ಸುಧಾಕರ್ ಅವರು ಈ ಜಾಗವನ್ನು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, "ಇದು ಪಾದಚಾರಿ ಸುರಕ್ಷತೆ, ನಗರ ಸೌಂದರ್ಯವನ್ನು ಹೆಚ್ಚಿಸುವ ಮತ್ತು ನಾಗರಿಕರಿಗೆ ಸುರಕ್ಷಿತ ಸಾರ್ವಜನಿಕ ಸ್ಥಳಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ" ಎಂದು ಹೇಳಿದರು.

ಈ ಯೋಜನೆಯು ನಗರದ ಇತರ ಕಡೆಗಳಲ್ಲೂ ಇಂತಹ ಬಳಕೆಯಿಲ್ಲದ ಜಾಗಗಳನ್ನು ಹೇಗೆ ಸಾರ್ವಜನಿಕ ಉಪಯೋಗಕ್ಕೆ ಬಳಸಿಕೊಳ್ಳಬಹುದು ಎಂಬುದಕ್ಕೆ ಒಂದು ಉತ್ತಮ ಉದಾಹರಣೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel