ದೇವಿ ವಿಲ್ಲಾ ಹೋಂಸ್ಟೇ 
ರಾಜ್ಯ

ಕೊಡಗು: ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಆರೋಪ; ಹೋಂಸ್ಟೇ ಮಾಲೀಕ ಸೇರಿ ಇಬ್ಬರ ಬಂಧನ

ಅಮೆರಿಕದ ವಾಶಿಂಗ್ಟನ್ ಮೂಲದ ಮಹಿಳೆ ಮೊನ್ನೆ ಏಪ್ರಿಲ್ 19ರಂದು ದೇವಿ ವಿಲ್ಲಾ ಎಂಬ ಹೋಂಸ್ಟೇನಲ್ಲಿ ವಾಸ್ತವ್ಯ ಹೂಡಿದ್ದ ವೇಳೆ, ಜಾರ್ಖಂಡ್ ಮೂಲದ ವೃಜೇಶ್ ಕುಮಾರ್ ಎಂಬಾತ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಕೊಡಗು: ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕುಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಕುಟ್ಟ ಗ್ರಾಮದಲ್ಲಿರುವ ಖಾಸಗಿ ಹೋಂಸ್ಟೇನಲ್ಲಿ ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ನಡೆದಿದೆ.

ದೇವಿ ವಿಲ್ಲಾ ಎಂಬ ಹೋಂಸ್ಟೇ

ಅಮೆರಿಕದ ವಾಶಿಂಗ್ಟನ್ ಮೂಲದ ಮಹಿಳೆ ಮೊನ್ನೆ ಏಪ್ರಿಲ್ 19ರಂದು ದೇವಿ ವಿಲ್ಲಾ ಎಂಬ ಹೋಂಸ್ಟೇನಲ್ಲಿ ವಾಸ್ತವ್ಯ ಹೂಡಿದ್ದ ವೇಳೆ, ಜಾರ್ಖಂಡ್ ಮೂಲದ ವೃಜೇಶ್ ಕುಮಾರ್ ಎಂಬಾತ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಈ ಸಂಬಂಧ ಕುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯಾಗಿರುವ ವೃಜೇಶ್ ಕುಮಾರ್​ನನ್ನು ಪೊಲೀಸರು ಬಂಧಿಸಿದ್ದಾರೆ. ಇದೇ ಪ್ರಕರಣದಲ್ಲಿ ಹೋಂಸ್ಟೇ ಮಾಲೀಕ ವಿಶಾಲ್ ಮೇಲೂ ಆರೋಪಗಳಿದ್ದು, ಅವರನ್ನು ಸಹ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಹಿನ್ನೆಲೆ ಹಾಗೂ ಆರೋಪಗಳ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಪೊಲೀಸರಿಗೆ ನೀಡಿದ ದೂರು ಪ್ರಕಾರ, ಮಹಿಳೆಗೆ ಪಾನೀಯದಲ್ಲಿ ಮಾದಕ ಪದಾರ್ಥಗಳನ್ನು ಮಿಶ್ರಣ ಮಾಡಿ ಕುಡಿಯಲು ನೀಡಿ ಮತ್ತು ಬರಿಸಿ ಅತ್ಯಾಚಾರವೆಸಗಲಾಯಿತು ಎಂದು ಆರೋಪಿಸಿದ್ದಾರೆ. ಈ ಘಟನೆ ಮರೆಮಾಚಲು ಹೋಂಸ್ಟೇ ಮಾಲೀಕರು ಯತ್ನಿಸಿದ್ದು, ಪೊಲೀಸರಿಗೆ ದೂರು ನೀಡಲು ಸಹಾಯ ಮಾಡಿಲ್ಲ ಎಂದು ಆರೋಪಿಸಿದ್ದಾರೆ.

ಹೋಂಸ್ಟೇಯಿಂದ ಹೊರಟ ನಂತರ, ಮಹಿಳೆ ರಾಯಭಾರ ಕಚೇರಿ ಅಧಿಕಾರಿಗಳನ್ನು ಸಂಪರ್ಕಿಸಿದ ನಂತರ ಕೊಡಗು ಪೊಲೀಸರು ಪ್ರಕರಣ ದಾಖಲಿಸಿದರು. ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರು ಇಬ್ಬರ ಬಂಧನ ದೃಢಪಡಿಸಿದ್ದಾರೆ.

ಆರೋಪಿ ಹೋಂಸ್ಟೇನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯಾಗಿದ್ದು, ಜಾರ್ಖಂಡ್‌ನ ಮೂಲದವನಾಗಿದ್ದಾನೆ; ಅವನನ್ನು ಬಂಧಿಸಲಾಗಿದೆ. ಹೋಂಸ್ಟೇ ಮಾಲೀಕರನ್ನೂ ಸಹಾಯ ನೀಡದೆ ಅಪರಾಧವನ್ನು ಮರೆಮಾಚಲು ಯತ್ನಿಸಿದ ಆರೋಪದಲ್ಲಿ ಬಂಧಿಸಲಾಗಿದೆ. ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.


ಸಿಟಿ ರವಿ ಖಂಡನೆ

ಎಂಎಲ್​ಸಿ ಸಿಟಿ ರವಿ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದು, ಕೊಡಗಿನ ಕುಟ್ಟ ಗ್ರಾಮದಲ್ಲಿ ವಿದೇಶಿ ಮಹಿಳೆಯ ಮೇಲೆ ನಡೆದ ಭೀಕರ ಹಲ್ಲೆ ಅತ್ಯಂತ ನಾಚಿಕೆಗೇಡಿನ ಸಂಗತಿ ಇಂತಹ ಘಟನೆಗಳು ಭಾರತದ ‘ಅತಿಥಿ ದೇವೋ ಭವ’ ಎಂಬ ಸಂಸ್ಕೃತಿಯ ಆತ್ಮಕ್ಕೆ ಏಟು ನೀಡುತ್ತವೆ.ಇದು ಕೇವಲ ವ್ಯಕ್ತಿಯ ವಿರುದ್ಧದ ಅಪರಾಧವಲ್ಲ, ಬದಲಾಗಿ ನಮ್ಮ ರಾಷ್ಟ್ರದ ಪ್ರತಿಷ್ಠೆ ಮತ್ತು ಮೌಲ್ಯಗಳ ಮೇಲಿನ ಕಳಂಕ.ರಾಜ್ಯ ಸರ್ಕಾರವು ಭಾಗಿಯಾಗಿರುವ ಎಲ್ಲರ ವಿರುದ್ಧ ತ್ವರಿತ ಮತ್ತು ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ವಿಳಂಬವಿಲ್ಲದೆ ನ್ಯಾಯ ದೊರಕಿಸಿಕೊಡಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಫಾರಂ-7 ದುರ್ಬಳಕೆ ಆರೋಪ: ಕ್ರಮಕ್ಕೆ ಚು.ಆಯೋಗ ಸೂಚನೆ, ಐತಿಹಾಸಿಕ ದಿನ ಎಂದ ಸಿಎಂ ಡಿಕೆಶಿ

‘ನಿಮ್ಮ ಪ್ರಾರ್ಥನೆಗೆ ಧನ್ಯವಾದ’: ಭಾರತದ ಹೀರೋ ಪೈಲಟ್ ಸ್ಮಿತ್ ಮಚ್ಚರ್ ಅಪಾಯದಿಂದ ಪಾರು!

ರಕ್ತದ ಮಡುವಿನಲ್ಲಿ ಪೈಲಟ್`ಗಳು, ಫ್ಲೈಟ್ ಲ್ಯಾಂಡ್ ಮಾಡಿದ ಪ್ಲಂಬರ್; FlyDubai ವಿಮಾನ ಪತನವಾಗದಿದ್ದದ್ದೇ ಅಚ್ಚರಿ!

ICC Cricket World Cup 2027 ವೇಳಾಪಟ್ಟಿ; ಅ.7ರಿಂದ ಭಾರತದ ಅಭಿಯಾನ ಆರಂಭ, 3 ಬಾರಿ ಬದ್ಧ ಶತ್ರುಗಳ ಕದನ?

‘ನೈಸ್ ಅಕ್ರಮ ಮರೆಮಾಚಲು ಈ ಡ್ರಾಮಾ’: ಚುನಾವಣಾ ಆಯೋಗದ ಮುಂದೆ ಸಿಎಂ, ಸಚಿವರ ಧರಣಿಗೆ ಕುಮಾರಸ್ವಾಮಿ ಕಿಡಿ