ರಾಜ್ಯ

ಬೆಂಗಳೂರು: ಅಣ್ಣ ಅಣ್ಣ ಅಂತ ಕರೆಯುತ್ತಿದ್ದಳು; ಈಗ ಪ್ರೀತಿಸಿ ಮದುವೆಯಾಗಿದ್ದ ಗಂಡನಿಗೆ ಕೈಕೊಟ್ಟು ಸ್ನೇಹಿತನ ಜೊತೆ ಪತ್ನಿ ಎಸ್ಕೇಪ್!

ಪ್ರೀತಿಸಿ, ಕೊನೆಗೆ ಮನೆಯವರನ್ನು ಒಪ್ಪಿಸಿ ಮದುವೆಯಾಗಿದ್ದ ಮಹಿಳೆಯೊಬ್ಬರು ಇದೀಗ ಗಂಡನನ್ನು ಬಿಟ್ಟು ಆತನ ಸ್ನೇಹಿತನ ಜೊತೆ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು: ಪ್ರೀತಿಸಿ, ಕೊನೆಗೆ ಮನೆಯವರನ್ನು ಒಪ್ಪಿಸಿ ಮದುವೆಯಾಗಿದ್ದ ಮಹಿಳೆಯೊಬ್ಬರು ಇದೀಗ ಗಂಡನನ್ನು ಬಿಟ್ಟು ಆತನ ಸ್ನೇಹಿತನ ಜೊತೆ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಜಿಮ್ ಟ್ರೈನರ್ ನಿತೇಶ್ ಎಂಬುವರನ್ನು ನಂದಿನಿ (ಹೆಸರು ಬದಲಾಯಿಸಲಾಗಿದೆ) ವಿವಾಹವಾಗಿದ್ದಳು. ಆದರೆ ಈಗ ಗಂಡನಿಗೆ ಕೈಕೊಟ್ಟು ಅಣ್ಣನ ಸಮಾನ ಎಂದು ಹೇಳುತ್ತಿದ್ದನ ಜೊತೆ ಮಹಿಳೆ ಓಡಿಹೋಗಿರುವುದು ಸಂಚಲನ ಮೂಡಿಸಿದೆ.

ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ನಿತೇಶ್ ಮತ್ತು ನವೀನ್ ಸ್ನೇಹಿತರಾಗಿದ್ದರು. ನಂತರ ನಿತೇಶ್ ನಂದಿನಿಯನ್ನು ಪ್ರೀತಿಸಿ ಮದುವೆಯಾಗಿದ್ದನು. ಇನ್ನು ನವೀನ್, ನಿತೇಶ್ ಮನೆಯಲ್ಲೇ ಬಾಡಿಗೆಗೆ ವಾಸವಿದ್ದನು. ಈ ವೇಳೆ ಇಬ್ಬರ ಮಧ್ಯೆ ಸಲುಗೆ ಬೆಳೆದಿದೆ. ಇದನ್ನು ಗಮನಿಸಿದ ನಿತೇಶ್ ಪತ್ನಿಗೆ ಬುದ್ಧಿವಾದ ಹೇಳಿದ್ದಾನೆ. ಅಲ್ಲದೆ ಮನೆಯನ್ನು ಬದಲಾಯಿಸಿದ್ದನು. ಇಷ್ಟಾದರೂ ನಂದಿನಿ ಆತನ ಸಹವಾಸವನ್ನು ಬಿಟ್ಟಿರಲಿಲ್ಲ. ನಿನ್ನೆ ಹೊಟ್ಟೆನೋವು ಎಂದು ಕೆಲಸಕ್ಕೆ ರಜೆ ಹಾಕಿದ್ದ ಪತ್ನಿ ನವೀನ್ ಜೊತೆ ನಾಪತ್ತೆಯಾಗಿದ್ದಾಳೆ. ಈ ಸಂಬಂಧ ನಿತೇಶ್ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ತನಿಖೆ ಕೈಗೊಂಡ ಪೊಲೀಸರು ಇಬ್ಬರನ್ನು ಪತ್ತೆ ಹಚ್ಚೆ ಠಾಣೆಗೆ ಕರೆತಂದಿದ್ದರು. ಇನ್ನು ಮಹಿಳೆ ನಾನು ಪತಿಯ ಮನೆಗೆ ಹೋಗುವುದಿಲ್ಲ ಎಂದು ಹಠ ಹಿಡಿದಿರುವುದು ಪೊಲೀಸರಿಗೆ ಧರ್ಮಸಂಕಷ್ಟಕ್ಕೀಡು ಮಾಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ರಧಾನಿ ಮೋದಿ 'ಟೆರರಿಸ್ಟ್': ಮಲ್ಲಿಕಾರ್ಜುನ ಖರ್ಗೆಗೆ ಚುನಾವಣಾ ಆಯೋಗ ನೋಟಿಸ್; 24 ಗಂಟೆ ಗಡುವು!

ನಾವು ಯಾರ ಮಾತು ಕೇಳಲ್ಲ: ಹಾರ್ಮುಜ್ ಮೂಲಕ ಭಾರತಕ್ಕೆ ಬರುತ್ತಿದ್ದ ಹಡಗು ಸೇರಿ 3 ಹಡಗುಗಳನ್ನು ವಶಕ್ಕೆ ಪಡೆದ ಇರಾನ್!

ನೀರಿಗೆ ಹಾಹಾಕಾರ: ಖಾಲಿ ಕೊಡ ಹಿಡಿದು, ಸಚಿವರ ಕಾರು ಅಡ್ಡಗಟ್ಟಿದ ಮಹಿಳೆಯರು; ತಂಗಡಗಿ ತಬ್ಬಿಬ್ಬು!

ವೈಭವ್ ಸೂರ್ಯವಂಶಿಯಲ್ಲಿ ಬ್ರಿಯಾನ್ ಲಾರಾ ನೋಡಬಲ್ಲೆ, ಆದ್ರೆ...: ಆಸೀಸ್ ಮಾಜಿ ನಾಯಕ ಹೇಳಿದ್ದೇನು?

ವಿರಾಟ್ ಕೊಹ್ಲಿ, ಕತ್ರಿನಾ ಕೈಫ್ ಮನೆ ಪಕ್ಕದಲ್ಲೇ ಐಷಾರಾಮಿ ಮನೆ ಬಾಡಿಗೆಗೆ ಪಡೆದ ಅಲ್ಲು ಅರ್ಜುನ್: ರೆಂಟ್ ಎಷ್ಟು ಗೊತ್ತಾ?

SCROLL FOR NEXT