ಕಲಬುರಗಿ: ಆ.3-2025-26 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 3,00,952 ರೈತರು ಬೆಳೆ ವಿಮೆ ನೋಂದಣಿ ಮಾಡಿಸಿದ್ದು, ಸರ್ಕಾರದಿಂದ ರೂ 585.72 ಕೋಟಿಬೆಳೆ ವಿಮೆ ಪರಿಹಾರ ಮಂಜೂರಾಗಿದೆ ಎಂದು ಗೃಹ ಸಚಿವರಾದ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುಬ ಅವರು 2,87,696 ರೈತರಿಗೆ ಒಟ್ಟು 243.52 ಕೋಟಿ ಬೆಳೆ ವಿಮೆ ಪರಿಹಾರದ ಮೊದಲನೆಯ ಕಂತನ್ನು ಈಗಾಗಲೆ ಜಮೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಜಿಲ್ಲೆಯ 2,67,133 ರೈತರಿಗೆ ರೂ 234.73 ಕೋಟಿ ಹಾಗೂ ಸ್ಥಳೀಯ ವಿಕೋಪದಡಿ 20,563 ರೈತರಿಗೆ ರೂ 8.79 ಕೋಟಿ ಜಮೆ ಮಾಡಲಾಗಿದೆ.
ಎರಡನೆಯ ಕಂತು: ರೂ 221 ಕೋಟಿ ಅನುದಾನ ರೂ 54 ಕೋಟಿ ಬಿಡುಗಡೆಯಾಗಿದ್ದು ಕೆಲವೇ ದಿನಗಳಲ್ಲಿ ರೈತರ ಖಾತೆಗೆ ಜಮೆಯಾಗಲಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಇನ್ನುಳಿದ ರೂ 67 ಕೋಟಿ ಕೆಲವೇ ದಿನಗಳಲ್ಲಿ ಜಮೆ ಮಾಡಲು ಕ್ರಮ ಜರುಗಿಸಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.
ಬೆಳೆ ಹಾನಿ ಪರಿಹಾರ
2025-26 ನೇ ಸಾಲಿನ ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಹೆಚ್ಚಿನ ಮಳೆಯಿಂದಾಗಿ ಅತಿವೃಷ್ಟಿಯಿಂದ 3.24 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿತ್ತು.