ಕುಲಪತಿ ಪ್ರೊ.ಸಿ.ಶಿವರಾಜು ಅಧಿಕಾರಿಗಳೊಂದಿಗೆ ನಡೆಸಿದ ಸಭೆಯ ಚಿತ್ರ 
ರಾಜ್ಯ

ಜ್ಞಾನಭಾರತಿ ಕ್ಯಾಂಪಸ್: ಗಾಂಧಿ ರಸ್ತೆಯಲ್ಲಿ ಶೀಘ್ರದಲ್ಲೇ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ!

ಗಾಂಧಿ ರಸ್ತೆಯಲ್ಲಿ ಸಾರ್ವಜನಿಕರ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲು ರಾಜ್ಯ ಸರ್ಕಾರ ಮತ್ತು ಬಿ.ಯು. ಸಿಂಡಿಕೇಟ್‌ನೊಂದಿಗೆ ಸಮಾಲೋಚಿಸಿ ವಿಶ್ವವಿದ್ಯಾಲಯವು ಅಗತ್ಯ ಪ್ರಕ್ರಿಯೆಗಳನ್ನು ಆರಂಭಿಸಲಿದೆ.

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ (ಬಿ.ಯು.) ಜ್ಞಾನಭಾರತಿ ಆವರಣದಲ್ಲಿರುವ ಗಾಂಧಿ ರಸ್ತೆಯಲ್ಲಿ ಶೀಘ್ರದಲ್ಲೇ ಸಾರ್ವಜನಿಕರ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗುತ್ತಿದೆ.

ಕ್ಯಾಂಪಸ್ ಒಳಗಡೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ದೃಶ್ಯಕಲೆ ವಿಭಾಗದ (Department of Visual Arts) ಪ್ರಥಮ ವರ್ಷದ ವಿದ್ಯಾರ್ಥಿನಿ ಮಾನಸಾ ಮೃತಪಟ್ಟ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಶುಕ್ರವಾರ ನಡೆದ ಸಭೆಯಲ್ಲಿ ಬಿ.ಯು. ಕುಲಪತಿ ಪ್ರೊ. ಸಿ. ಶಿವರಾಜು ಮತ್ತು ಪೊಲೀಸ್ ಉಪ ಆಯುಕ್ತರು (ನೈಋತ್ಯ ವಿಭಾಗ) ಅನಿತಾ ಹದ್ದಣ್ಣವರ್ ಅವರು ಈ ಕುರಿತು ನಿರ್ಧಾರ ಕೈಗೊಂಡರು.

"ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಕ್ಷೇಮಕ್ಕಾಗಿ ಬೆಂಗಳೂರು ನಗರ ಪೊಲೀಸರ ಸಹಯೋಗದೊಂದಿಗೆ ಈ ಕ್ರಮಗಳನ್ನು ಜಾರಿಗೆ ತರಲಾಗುವುದು. ಕ್ಯಾಂಪಸ್ ಒಳಗಡೆ ಸುರಕ್ಷತೆಯ ಮೇಲೆ ಪರಿಣಾಮ ಬೀರುವ ದಟ್ಟ ವಾಹನ ಸಂಚಾರ, ಅತಿಯಾದ ವೇಗ, ಭಾರಿ ವಾಹನಗಳ ಸಂಚಾರ ಮತ್ತು ಅನಧಿಕೃತ ವಾಹನ ನಿಲುಗಡೆ ಸೇರಿದಂತೆ ಹಲವು ಪ್ರಮುಖ ವಿಷಯಗಳನ್ನು ಸಭೆಯಲ್ಲಿ ಪರಿಶೀಲಿಸಲಾಯಿತು ಎಂದು ಪ್ರೊ. ಶಿವರಾಜು ತಿಳಿಸಿದರು.

ಗಾಂಧಿ ರಸ್ತೆಯಲ್ಲಿ ಸಾರ್ವಜನಿಕರ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲು ರಾಜ್ಯ ಸರ್ಕಾರ ಮತ್ತು ಬಿ.ಯು. ಸಿಂಡಿಕೇಟ್‌ನೊಂದಿಗೆ ಸಮಾಲೋಚಿಸಿ ವಿಶ್ವವಿದ್ಯಾಲಯವು ಅಗತ್ಯ ಪ್ರಕ್ರಿಯೆಗಳನ್ನು ಆರಂಭಿಸಲಿದೆ.

ಅಂತಿಮ ನಿರ್ಧಾರ ಜಾರಿಗೆ ಬರುವವರೆಗೆ, ಏಕಮುಖ ಸಂಚಾರ ವ್ಯವಸ್ಥೆ, ಪಾದಚಾರಿಗಳಿಗೆ ಮೀಸಲಾದ ದಾರಿಗಳ ನಿರ್ಮಾಣ, ರಸ್ತೆ ಬದಿಯ ಅನಧಿಕೃತ ಅಂಗಡಿಗಳ ತೆರವು ಹಾಗೂ ಆವರಣದ ಪ್ರಮುಖ ರಸ್ತೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಅವುಗಳನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯ 'ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್'ಗೆ ಸಂಪರ್ಕಿಸುವಂತಹ ಹಲವು ಮಧ್ಯಂತರ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಕುಲಪತಿ ಹೇಳಿದರು.

"ಜ್ಞಾನಭಾರತಿ ಆವರಣದೊಳಗಿನ ಗಾಂಧಿ ರಸ್ತೆಗೆ ಸಾರ್ವಜನಿಕರ ಪ್ರವೇಶವನ್ನು ನಿಯಂತ್ರಿಸಲು ವಿಶ್ವವಿದ್ಯಾಲಯವು ತಕ್ಷಣದ ಕ್ರಮಗಳನ್ನು ಕೈಗೊಳ್ಳಲಿದೆ. ಪದೇ ಪದೇ ಉಂಟಾಗುತ್ತಿರುವ ಸಂಚಾರ ದಟ್ಟಣೆ ಮತ್ತು ಸುರಕ್ಷತಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ, ಪರ್ಯಾಯ ರಸ್ತೆಗಳು ಹಾಗೂ ಮುಖ್ಯ ಜ್ಞಾನಭಾರತಿ ರಸ್ತೆಯಲ್ಲಿ ಮೇಲ್ಸೇತುವೆ ನಿರ್ಮಾಣದ ಕುರಿತು ಸ್ಥಳೀಯ ಶಾಸಕ ಮುನಿರತ್ನ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚಿಸಲಾಗುವುದು ಎಂದು ಪ್ರೊ. ಶಿವರಾಜು ತಿಳಿಸಿದರು.

ಗಾಂಧಿ ರಸ್ತೆಯು ಕಿರಿದಾಗಿರುವುದನ್ನು ಗಮನದಲ್ಲಿಟ್ಟುಕೊಂಡು, ಅಲ್ಲಿ 'ಒನ್-ವೇ' (ಏಕಮುಖ ಸಂಚಾರ) ವ್ಯವಸ್ಥೆ ಮತ್ತು ಇತರ ಸಂಚಾರ ನಿರ್ವಹಣಾ ಕ್ರಮಗಳನ್ನು ಜಾರಿಗೆ ತರುವ ಕುರಿತು ಸಂಚಾರ ತಜ್ಞರ ತಂಡವೊಂದು ಸಮಗ್ರ ಅಧ್ಯಯನ ನಡೆಸಲಿದೆ ಎಂದು ಡಿಸಿಪಿ ಹದ್ದಣ್ಣವರ್ ಹೇಳಿದರು. ಅಲ್ಲದೆ, ಕ್ಯಾಂಪಸ್ ನಲ್ಲಿ ಸಂಚಾರವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಂಚಾರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದೂ ಅವರು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾ ತೈಲ ಖರೀದಿಗೆ ನಿರ್ಬಂಧ ಮಸೂದೆಗೆ ಅಮೆರಿಕ ಸೆನೆಟ್ ಅಸ್ತು: ಭಾರತ ಸೇರಿ 5 ದೇಶಗಳ ಮೇಲೆ ಶೇ.100ರಷ್ಟು ಸುಂಕ ಹೇರಿಕೆ ಶಾಕ್

ಉಕ್ರೇನ್ ರಾಜಧಾನಿ ಕೈವ್ ನಲ್ಲಿ ರಷ್ಯಾ ದಾಳಿ: ಮಗು ಸೇರಿದಂತೆ ಮೂವರು ಸಾವು!

ಸಿದ್ದರಾಮಯ್ಯ ಜತೆ ಮುನಿಸಿಲ್ಲ: ನನಗೆ ಸಚಿವ ಸ್ಥಾನ ನೀಡದಂತೆ ಹೈಕಮಾಂಡ್‌ಗೆ ಅವರು ಹೇಳಿಲ್ಲ; ಜಮೀರ್ ಸ್ಪಷ್ಟನೆ

ಸಚಿವನಾಗಿದ್ದೇನೆ, ಈಗೇನು ಮಾಡುತ್ತೀಯಪ್ಪಾ ಜಗದ್ಗುರು?

ಮುಂಬೈ: ಸಲ್ಮಾನ್ ಖಾನ್ ಬಾಂದ್ರಾ ನಿವಾಸದ ಹೊರಗೆ ಭದ್ರತೆಗೆ ನಿಯೋಜಿಸಲಾಗಿದ್ದ ಪೊಲೀಸ್ ಕಾನ್ಸ್‌ಟೇಬಲ್ ಹಠಾತ್ ಸಾವು!