ನಂದಿ, ಶಿವಲಿಂಗ ವಿಗ್ರಹಕ್ಕೆ ಹಾನಿ 
ರಾಜ್ಯ

ಬೆಳಗಾವಿ: ಸಿದ್ಧಗುಂಡ ದೇವಸ್ಥಾನದಲ್ಲಿ ಶಿವಲಿಂಗ, ನಂದಿ ಧ್ವಂಸ; ನಿಧಿಗಾಗಿ ದುಷ್ಕರ್ಮಿಗಳ ಕೃತ್ಯ!

ನಿಡಗಲ್ ಗ್ರಾಮದಿಂದ 2 ಕಿಮೀ ದೂರದಲ್ಲಿ ಗ್ರಾಮದ ಪಶ್ಚಿಮ ದಿಕ್ಕಿನಲ್ಲಿ ಬೆಟ್ಟದ ಮೇಲೆ ಗ್ರಾಮದ ಗ್ರಾಮದೇವತೆ ಸಿದ್ಧಗುಂಡ ದೇವಸ್ಥಾನವಿದೆ. ದೇವಾಲಯದಲ್ಲಿ ಹಣ ಅಥವಾ ಬೆಲೆಬಾಳುವ ವಸ್ತುಗಳಿಗಾಗಿ ಹುಡುಕಾಟ ನಡೆಸಿ ಏನೂ ಸಿಗದೇ ಮರಳಿದ್ದಾರೆ.

ಖಾನಾಪುರ: ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕಿನ ನಿಡಗಲ್ ಗ್ರಾಮದ ಹೊರವಲಯದ ಸಿದ್ಧನಗುಡ್ಡದ ಮೇಲಿರುವ ಸಿದ್ಧಗುಂಡ ದೇವಾಲಯದ ಶಿವಲಿಂಗ, ನಂದಿ, ತುಳಸಿಯನ್ನು ಕಿಡಿಗೇಡಿಗಳು ಶನಿವಾರ ಧ್ವಂಸಗೊಳಿಸಿದ್ದಾರೆ.

ನಿಡಗಲ್ ಗ್ರಾಮದಿಂದ 2 ಕಿಮೀ ದೂರದಲ್ಲಿ ಗ್ರಾಮದ ಪಶ್ಚಿಮ ದಿಕ್ಕಿನಲ್ಲಿ ಬೆಟ್ಟದ ಮೇಲೆ ಗ್ರಾಮದ ಗ್ರಾಮದೇವತೆ ಸಿದ್ಧಗುಂಡ ದೇವಸ್ಥಾನವಿದೆ. ದೇವಾಲಯದಲ್ಲಿ ಹಣ ಅಥವಾ ಬೆಲೆಬಾಳುವ ವಸ್ತುಗಳಿಗಾಗಿ ಹುಡುಕಾಟ ನಡೆಸಿ ಏನೂ ಸಿಗದೇ ಮರಳಿದ್ದಾರೆ.

ಆದರೆ ದೇವಾಲಯದ ಪವಿತ್ರ ವಿಗ್ರಹಗಳು ಮತ್ತು ಅವಶೇಷಗಳಿಗೆ ಧಕ್ಕೆ ಉಂಟುಮಾಡಿ ತೆರಳಿದ್ದಾರೆ. ಐತಿಹಾಸಿಕ ಶ್ರೀ ಸಿದ್ಧೇಶ್ವರ ದೇವಾಲಯದಲ್ಲಿ, ದುಷ್ಕರ್ಮಿಗಳು ದೇವಾಲಯದ ಆವರಣದಲ್ಲಿರುವ ಶಿವಲಿಂಗ, ನಂದಿ ವಿಗ್ರಹ, ಆಮೆ ಮತ್ತು ಬೃಂದಾವನವನ್ನು ಹಾನಿಗೊಳಿಸಿದ್ದಾರೆ.

ಸ್ಥಳಕ್ಕೆ ಖಾನಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ. ಶ್ರಾವಣ ಮಾಸ ಆರಂಭವಾಗುವ ನಿಮಿತ್ತ ಭಾನುವಾರ ದೇವಸ್ಥಾನವನ್ನು ಸ್ವಚ್ಛಗೊಳಿಸಲು ಬಂದ ಭಕ್ತರಿಗೆ ಈ ಕೃತ್ಯ ಕಂಡುಬಂದಿದೆ. ಈ ಕೃತ್ಯಕ್ಕೆ ಕಾರಣವಾಗಿರುವವರನ್ನು ಪತ್ತೆ ಹಚ್ಚಿ ಶಿಕ್ಷಿಸುವಂತೆ ಪೊಲೀಸರಿಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜ್ಞಾನೇಶ್ ಕುಮಾರ್ ವಿರುದ್ಧ ದೆಹಲಿ, ಮುಂಬೈನಲ್ಲಿ ಬೃಹತ್ ಪ್ರತಿಭಟನೆ; 700 ಮಂದಿ ವಶಕ್ಕೆ

FlyDubai ಘಟನೆ ಹಿಂದೆ ಯಾವುದೇ ಶಕ್ತಿಯ ಕೈವಾಡವಿದ್ದರೂ ಡೋಂಟ್ ಕೇರ್; 'ಭಾರಿ ಬೆಲೆ' ತೆರಬೇಕಾಗುತ್ತೆ- ಇಸ್ರೇಲ್ ಪ್ರಧಾನಿ ನೆತನ್ಯಾಹು ಎಚ್ಚರಿಕೆ

ಬಿಹಾರ ಪ್ರವಾಹ: ವಾಯುಪಡೆಯ ಹೆಲಿಕಾಪ್ಟರ್‌ನಿಂದ ಪರಿಹಾರ ಸಾಮಗ್ರಿಯ ಪ್ಯಾಕೆಟ್ ಬಿದ್ದು ವೃದ್ಧ ಸಾವು!

Asian Games 2026: 44 ವರ್ಷಗಳ ಬರ ನೀಗಿಸಿದ ಮಹಿಳಾ ಪಡೆ; ಚೀನಾ ಮಣಿಸಿ ಚಿನ್ನ ಗೆದ್ದ ಭಾರತ!

CJP ಪ್ರತಿಭಟನೆಗೆ ಕೈಜೋಡಿಸಿದ ನಸೀರುದ್ದೀನ್ ಶಾ; ನಟನನ್ನು ಅಪ್ಪಿಕೊಂಡು ಕಣ್ಣೀರಿಟ್ಟ ಅಭಿಜೀತ್ ದೀಪ್ಕೆ; Video!