ನಟ ಪ್ರಕಾಶ್ ರಾಜ್ 
ರಾಜ್ಯ

ನಮ್ಮನ್ನು ಭಿಕ್ಷೆ ಬೇಡುವಂತೆ ಮಾಡಬೇಡಿ: ಬೆಂಗಳೂರಿನಲ್ಲಿ ದಿಢೀರ್ ಸುದ್ದಿಗೋಷ್ಠಿ ನಡೆಸಿ ನಟ ಪ್ರಕಾಶ್ ರಾಜ್ ಆಕ್ರೋಶ!

ಇಂದು ಬೆಂಗಳೂರಿನ ಪ್ರೆಸ್ ಕ್ಲಬ್‍ನಲ್ಲಿ ದಿಢೀರ್ ಸುದ್ದಿಗೋಷ್ಠಿ ನಡೆಸಿದ ಪ್ರಕಾಶ್ ರಾಜ್, ಚುನಾವಣಾ ಆಯೋಗ ಇಡೀ ದೇಶದ ಜನರಿಂದ ಪರೀಕ್ಷೆ ಬರೆಸುತ್ತಿದೆಯೇ? ಎಂದು ಪ್ರಶ್ನಿಸಿದರು.

ಬೆಂಗಳೂರು: ಚುನಾವಣಾ ಆಯೋಗದ ಅಧಿಕಾರಿಗಳೇ, ಮತದಾನದ ಹಕ್ಕನ್ನು ಖಚಿತಪಡಿಸಿಕೊಳ್ಳಲು ನಮ್ಮನ್ನು ಅಧಿಕಾರಿಗಳ ಹಿಂದೆ ಅಲೆಯುವಂತೆ ಮಾಡುತ್ತಿದ್ದೀರಿ. ನಮ್ಮ ಮೂಲಭೂತ ಹಕ್ಕಿಗಾಗಿ ನಮ್ಮನ್ನು ಭಿಕ್ಷೆ ಬೇಡುವ ಸ್ಥಿತಿಗೆ ತಳ್ಳಬೇಡಿ ಎಂದು ದಕ್ಷಿಣ ಭಾರತದ ಖ್ಯಾತ ನಟ ಪ್ರಕಾಶ್ ರಾಜ್ ಅವರು ಶುಕ್ರವಾರ ಚುನಾವಣಾ ಆಯೋಗದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಇಂದು ಬೆಂಗಳೂರಿನ ಪ್ರೆಸ್ ಕ್ಲಬ್‍ನಲ್ಲಿ ದಿಢೀರ್ ಸುದ್ದಿಗೋಷ್ಠಿ ನಡೆಸಿದ ಪ್ರಕಾಶ್ ರಾಜ್, ಚುನಾವಣಾ ಆಯೋಗ ಇಡೀ ದೇಶದ ಜನರಿಂದ ಪರೀಕ್ಷೆ ಬರೆಸುತ್ತಿದೆಯೇ? ರಾಜ್ಯದಲ್ಲಿರುವ 5.54 ಕೋಟಿ ಮತದಾರರ ಮಾಹಿತಿಯನ್ನು ಒಂದು ತಿಂಗಳಿನಲ್ಲಿ ಪಡೆದುಕೊಳ್ಳಲು ಸಾಧ್ಯವೇ? ಯಾಕೆ ಬಿಎಲ್‍ಒಗಳ ಮೇಲೆ ಒತ್ತಡ ಹೇರುತ್ತೀರಿ? ಎಂದು ಪ್ರಶ್ನಿಸಿದರು.

ಚುನಾವಣಾ ಆಯೋಗದ ನಡೆಯನ್ನು ಮತದಾನದಿಂದ 'ಜನರನ್ನು ಹೊರಗಿಡುವ ಕುತಂತ್ರ' ಎಂದು ಟೀಕಿಸಿದರು.

ಹಿಂದೆ ರಾಜಕೀಯ ನಾಯಕರು ವೋಟ್ ಹಾಕಿ ಎಂದು ಜನರ ಬಳಿ ಬೇಡಿಕೊಳ್ಳುತ್ತಿದ್ದರು. ಆದರೆ ಇಂದು ಮತದಾರ ತನ್ನ ವೋಟು ಉಳಿಸಿಕೊಡಿ ಎಂದು ಅಧಿಕಾರಿಗಳ ಮುಂದೆ ಬೇಡುವ ಸ್ಥಿತಿ ಬಂದಿದೆ. ನೋಟ್ ಬ್ಯಾನ್ ಮತ್ತು ಕೊರೋನಾ ಸಮಯದಲ್ಲಿ ಜನ ಕ್ಯೂ ನಿಂತು ಪರದಾಡಿದ್ದು ಸಾಕು, ಈಗ SIR ಹೆಸರಿನಲ್ಲಿ ಜನರಿಗೆ ಮತ್ತೆ ನೋವು ಕೊಡಬೇಡಿ ಎಂದು ಆಗ್ರಹಿಸಿದರು.

ಮತದಾರರ ಪಟ್ಟಿ ಪರಿಷ್ಕರಣೆಯ ಕ್ರಮವನ್ನು ಪ್ರಶ್ನಿಸಿದ ಅವರು, ರಾಜ್ಯದಲ್ಲಿ ಮುಂದಿನ ಎರಡು ವರ್ಷ ಯಾವುದೇ ಚುನಾವಣೆ ಇಲ್ಲದಿದ್ದರೂ ಇಷ್ಟೊಂದು ಅವಸರದಲ್ಲಿ ಪರಿಷ್ಕರಣೆ ಮಾಡುತ್ತಿರುವುದು ಏಕೆ? ಇದರ ಹಿಂದೆ ಎನ್‌ಆರ್‌ಸಿ (NRC) ಹುನ್ನಾರ ಇದೆಯೇ? ದಲಿತರು, ಹಿಂದುಳಿದವರು, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಮತಗಳನ್ನು ಗುರಿಯಾಗಿಸಿ ಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

ಸ್ಥಳಾಂತರಗೊಂಡವರಿಗೆ ವಿಳಾಸ ಬದಲಾವಣೆ ಮಾಡಲು ಫಾರಂ ನಂ. 8 ಕೊಡಬೇಕು. ಅದನ್ನು ಬಿಟ್ಟು ಹೆಸರನ್ನೇ ಡಿಲೀಟ್ ಮಾಡಿ ಮತ್ತೆ ಹೊಸದಾಗಿ ಫಾರಂ ನಂ. 6 ತುಂಬಲು ಹೇಳುವುದು ಯಾವ ನ್ಯಾಯ? ಜನರು ಬಾಡಿಗೆ ಮನೆ ಬದಲಾಯಿಸುವುದು ಅಥವಾ ಹೆಣ್ಣುಮಕ್ಕಳು ಮದುವೆಯಾಗಿ ತವರು ಮನೆಗೆ ಹೋಗುವುದು ಅಪರಾಧವೇ? ಕೇವಲ ಬಾಡಿಗೆ ಮನೆ ಬದಲಿಸಿದ ಕಾರಣಕ್ಕೆ ಅವರ ಹೆಸರನ್ನು ಪಟ್ಟಿಯಿಂದ ಡಿಲೀಟ್ ಮಾಡುವುದು ಖಂಡನೀಯ ಎಂದು ಪ್ರಕಾಶ್ ರಾಜ್ ಆಕ್ರೋಶ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಚಿವ ಜಮೀರ್ ಅಹ್ಮದ್ ಧ್ವಜಾರೋಹಣ ಮಾಡದಷ್ಟು ದೊಡ್ಡವರೇ? ಇದು ದೇಶಕ್ಕೆ ಮಾಡಿದ ಅವಮಾನ, ವಿಧಾನಸಭೆಯಲ್ಲಿ ಬಿಜೆಪಿ ಪ್ರತಿಭಟನೆ! ಸಚಿವ ಸ್ಥಾನದಿಂದ ವಜಾಕ್ಕೆ ಒತ್ತಾಯ

'ಅಪ್ಪಿಕೋ' ವಿದೇಶಾಂಗ ನೀತಿ: ಮೋದಿ ಕೆಣಕಿದ ರಾಹುಲ್ ಗಾಂಧಿ; ಇಂದಿರಾ ಗಾಂಧಿ ವಿಡಿಯೋ ಮೂಲಕ ಬಿಜೆಪಿ ತಿರುಗೇಟು!

Census 2027: 40 ಪ್ರಶ್ನೆಗಳು ಪ್ರಕಟ, ಉದ್ದೇಶವೇ ಶಂಕಾಸ್ಪದ, ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿ!

ಆತ್ಮನಿರ್ಭರ ಭಾರತಕ್ಕೆ ಮತ್ತೊಂದು ಗರಿ: ದೇಶೀಯವಾಗಿ ಫೈಟರ್ ಜೆಟ್ ಎಂಜಿನ್ ನಿರ್ಮಿಸಲಿವೆ ರಿಲಯನ್ಸ್-ರೋಲ್ಸ್ ರಾಯ್ಸ್!

Toxic: ಯಶ್ ಅಭಿನಯದ 'ಟಾಕ್ಸಿಕ್'ಗೆ ಸಿಕ್ತು 'A' ಸರ್ಟಿಫಿಕೇಟ್; ರನ್‌ಟೈಮ್‌ ಕೇಳಿದ್ರೆ ಥ್ರಿಲ್‌ ಆಗ್ತೀರಾ!