ಸಾರಿಗೆ ನಿಗಮ  
ರಾಜ್ಯ

ರಾಜ್ಯ ಸಾರಿಗೆ ನೌಕರರಿಗೆ ವರಮಹಾಲಕ್ಷ್ಮಿ ಹಬ್ಬದ ಗಿಫ್ಟ್: ವೇತನ ಹಿಂಬಾಕಿ ಬಿಡುಗಡೆ

ಇಂದು ಬೆಂಗಳೂರಿನ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಯಲ್ಲಿ 15ಕ್ಕೂ ಹೆಚ್ಚು ಕಾರ್ಮಿಕ ಸಂಘಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ನಂತರ ಸಾರಿಗೆ ಸಚಿವರು ಈ ಘೋಷಣೆ ಮಾಡಿದರು.

ಬೆಂಗಳೂರು: ರಾಜ್ಯ ಸರ್ಕಾರ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರ ಬಾಕಿ ವೇತನಕ್ಕಾಗಿ 170 ಕೋಟಿ ರೂ. ಬಿಡುಗಡೆ ಮಾಡಿರುವುದಾಗಿ ಸಾರಿಗೆ ಸಚಿವ ಬೈರತಿ ಸುರೇಶ್ ಅವರು ಶುಕ್ರವಾರ ತಿಳಿಸಿದ್ದಾರೆ.

ಇಂದು ಬೆಂಗಳೂರಿನ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಯಲ್ಲಿ 15ಕ್ಕೂ ಹೆಚ್ಚು ಕಾರ್ಮಿಕ ಸಂಘಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ನಂತರ ಸಾರಿಗೆ ಸಚಿವರು ಈ ಘೋಷಣೆ ಮಾಡಿದರು. ಸಭೆಯಲ್ಲಿ ಸಾರಿಗೆ ನೌಕರರ ವಿವಿಧ ಬೇಡಿಕೆಗಳ ಕುರಿತು ಚರ್ಚಿಸಲಾಯಿತು.

2025 ರಲ್ಲಿ ರಾಜ್ಯ ಸರ್ಕಾರ ಸಾರಿಗೆ ನೌಕರರ ವೇತನವನ್ನು ಪರಿಷ್ಕರಿಸಿದ್ದರಿಂದ, 1271 ಕೋಟಿ ರೂಪಾಯಿ ವೇತನ ಹಿಂಬಾಕಿ ಕೊಡಬೇಕಿತ್ತು. ಈ ಹಿಂದೆ ಸರ್ಕಾರ 450 ಕೋಟಿ ಬಿಡುಗಡೆ ಮಾಡಿತ್ತು. ಉಳಿದ 821 ಕೋಟಿ ಹಿಂಬಾಕಿಯಲ್ಲಿ ಇಂದು ಮತ್ತೆ 170 ಕೋಟಿ ರೂ. ಬಿಡುಗಡೆ ಮಾಡಿದೆ. ಉಳಿದ 651 ಕೋಟಿಯನ್ನು ಹಂತ ಹಂತವಾಗಿ ಬಿಡುಗಡೆ ಮಾಡುವುದಾಗಿ ಸಾರಿಗೆ ಸಚಿವ ಬೈರತಿ ಬಸವರಾಜ್ ಅವರು ಭರವಸೆ ನೀಡಿದ್ದಾರೆ.

ಸಾರಿಗೆ ನೌಕರರಿಗೆ ಉಚಿತ ಆರೋಗ್ಯ ಯೋಜನೆ ಕಲ್ಪಿಸಲಾಗುವುದು. ನಾಲ್ಕು ನಿಗಮಗಳಿಗೆ ಯೋಜನೆ ವಿಸ್ತರಣೆ ಆಗಲಿದೆ ಎಂದು ಸಚಿವರು ಭರವಸೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Video: ಆಕಾಶದಲ್ಲೇ ಪೈಲಟ್‌ಗಳ ರಕ್ತಸಿಕ್ತ ಮಾರಮಾರಿ; ಇಸ್ರೇಲ್‌ಗೆ ತೆರಳುತ್ತಿದ್ದ ವಿಮಾನ ಸೌದಿಯಲ್ಲಿ ತುರ್ತು ಲ್ಯಾಂಡಿಂಗ್: ತಪ್ಪಿದ ದೊಡ್ಡ ದುರಂತ!

CEC ಮನೆ ಗೇಟ್ ಮೇಲೆ 'ಗದ್ದರ್ ಜ್ಞಾನೇಶ್' ಬರಹ: 20 ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಕೊಲೆ ಯತ್ನ ಕೇಸ್; 6 ಮಂದಿ ಬಂಧನ!

ಏಕದಿನ ಕ್ರಿಕೆಟ್‌ನಲ್ಲಿ 200ನೇ ವಿಕೆಟ್ ಪಡೆದು ಎಲೈಟ್ ಕ್ಲಬ್ ಸೇರಿದ ಕುಲದೀಪ್ ಯಾದವ್

ಬಿಜೆಪಿಗಿಂತ ಕಾಂಗ್ರೆಸ್ ಸರ್ಕಾರದಲ್ಲೇ ಹೆಚ್ಚು ಕಮಿಷನ್; ನವೆಂಬರ್ ಒಳಗೆ ಬಾಕಿ ಬಿಲ್​​ ಪಾವತಿಸದಿದ್ದರೆ ದಾಖಲೆ ಬಿಡುಗಡೆ: ಮತ್ತೆ ಸಿಡಿದೆದ್ದ ಗುತ್ತಿಗೆದಾರರು

SIR ಪ್ರಕ್ರಿಯೆ ಪೂರ್ಣಗೊಂಡ ಕೇಂದ್ರಾಡಳಿತ ಪ್ರದೇಶ, ರಾಜ್ಯಗಳಲ್ಲಿ ಫಾರ್ಮ್-6 ರದ್ದು: ಕೇಂದ್ರ ಚುನಾವಣಾ ಆಯೋಗ