ಬಿ ಎಲ್ ಸಂತೋಷ್  
ರಾಜ್ಯ

'RSS ನೋಂದಣಿ ಆಗಿಲ್ಲ, ಮುಂದೆಯೂ ಆಗಲ್ಲ': B L ಸಂತೋಷ್

ತಿರಂಗ ಧ್ವಜ ಹಾಗೂ ಕೇಸರಿ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾತನಾಡಿದ ಅವರು, ದೇಶದ ಇತಿಹಾಸ ಹಾಗೂ ಆರ್‌ಎಸ್‌ಎಸ್ ಕೊಡುಗೆಗಳೇನು ದೇಶದ ಅಭಿಮಾನಿಗಳಿಗೆ ಗೊತ್ತಿದೆ. RSS ನೋಂದಣಿ ಮಾಡಿಲ್ಲ, ಮಾಡೋದೂ ಇಲ್ಲ, ರಿಜಿಸ್ಟ್ರೇಷನ್ ಮಾಡಿಸಿಕೊಂಡ ಸಂಘಟನೆಗಳು ಏನೇನ್ ಮಾಡುತ್ತಿವೆ ಎಂದು ನಮಗೆ ಗೊತ್ತಿದೆ ಎಂದರು.

ಬೆಂಗಳೂರು: 80ನೇ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಹಿಂದೂ ಜಾಗರಣ ವೇದಿಕೆ ಬೆಂಗಳೂರಿನ ಬನ್ನಪ್ಪ ಪಾರ್ಕ್‌ನಲ್ಲಿ ಆಯೋಜಿಸಿದ್ದ 'ಅಖಂಡ ಭಾರತ ಸಂಕಲ್ಪ ದಿನ' ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಭಾಗವಹಿಸಿದ್ದರು. ಈ ವೇಳೆ RSS ನೋಂದಣಿ ಕುರಿತು ಮಾತಾಡಿದ ಬಿ ಎಲ್ ಸಂತೋಷ್ , ಸಚಿವ ಪ್ರಿಯಾಂಕ್ ಖರ್ಗೆಗೆ ತಿರುಗೇಟು ನೀಡಿದ್ದಾರೆ.

'RSS ನೋಂದಣಿ ಆಗಿಲ್ಲ, ಮಾಡೋದು ಇಲ್ಲ'

ತಿರಂಗ ಧ್ವಜ ಹಾಗೂ ಕೇಸರಿ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾತನಾಡಿದ ಅವರು, ದೇಶದ ಇತಿಹಾಸ ಹಾಗೂ ಆರ್‌ಎಸ್‌ಎಸ್ ಕೊಡುಗೆಗಳೇನು ದೇಶದ ಅಭಿಮಾನಿಗಳಿಗೆ ಗೊತ್ತಿದೆ. RSS ನೋಂದಣಿ ಮಾಡಿಲ್ಲ, ಮಾಡೋದೂ ಇಲ್ಲ, ರಿಜಿಸ್ಟ್ರೇಷನ್ ಮಾಡಿಸಿಕೊಂಡ ಸಂಘಟನೆಗಳು ಏನೇನ್ ಮಾಡುತ್ತಿವೆ ಎಂದು ನಮಗೆ ಗೊತ್ತಿದೆ ಎಂದರು.

ನಾನೊಬ್ಬ ಬಿಜೆಪಿ ಕಾರ್ಯಕರ್ತ, ನಾನು ಇಲ್ಲಿ ರಾಜಕೀಯ ಮಾತಾಡಲು ಬಂದಿಲ್ಲ, ಆದರೆ ಇವತ್ತು ಬೆಂಗಳೂರಿನ ಶಿವಾಜಿನಗರ, ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಇಪ್ಪತ್ತು ವರ್ಷದಿಂದ ಹಿಂದೂ ಪ್ರತಿನಿಧಿಯನ್ನು ಶಾಸಕನಾಗಿ ಮಾಡಲು ಆಗಿಲ್ಲ. ನಾನು ಚಾಲೆಂಜ್ ಮಾಡ್ತೀನಿ, ಈ ಎರಡು ಕ್ಷೇತ್ರದಲ್ಲಿ ಹಿಂದೂ ನಾಯಕನನ್ನು ಎಲೆಕ್ಷನ್​​ಗೆ ನಿಲ್ಲಿಸಿ, ಗೆಲ್ಲಿಸಿ ನೋಡೋಣ ಎಂದಿದ್ದಾರೆ.

'ರಜಾಕರ ದಾಳಿಗೆ ಹೆದರಿ ಓಡಿ ಬಂದ್ರು'

ಸಂಘ ರೆಜಿಸ್ಟ್ರೇಷನ್ ಮಾನದಂಡ ಅಲ್ಲ, ಪ್ರಿಯಾಂಕ ಖರ್ಗೆ ಅವರೇ ಎಲ್ಲದಕ್ಕೂ ಮಾನದಂಡ ಅಲ್ಲ. ನಿಮ್ಮ ಕುಟುಂಬ, ಗುಲ್ಬರ್ಗಕ್ಕೆ ಓಡಿ ಬಂದು ಜೀವನ ಕಟ್ಕೊಂಡಿದೆ. ರಜಾಕರ ದಾಳಿಗೆ ಹೆದರಿ ಆಗ ನಿಮ್ಮಪ್ಪ ಮಲ್ಲಿಕಾರ್ಜುನ ಖರ್ಗೆ ಓಡೋಡಿ ಬಂದ್ರು. ನೀವು ನಿಮ್ಮ ಕುಟುಂಬ ಇಲ್ಲಿ ನೆಮ್ಮದಿ ವಾಸ ಮಾಡೋಕೆ ಹಿಂದೂಗಳು ಕಾರಣ. ಅವತ್ತು ನೀವು ಓಡಿ ಬಂದ ದಿನ ರಜಾಕರ ವಿರುದ್ಧ ನಿಂತಿದ್ದು ಇದೇ RSS. ಆಗ ನಿಮ್ಮ ಪೋಲಿಸರು ಬಂದಿಲ್ಲ. ನಿಮ್ಮ ರಾಜಕಾರಣಿಗಳು ಬಂದಿಲ್ಲ. ಇದೇ RSS ನ ಹುಡುಗರು ರಸ್ತೆಗಳಲ್ಲಿ ನಿಂತಿದ್ದರು. ಇದನ್ನು ನೀವೂ ನೆನಪಿಟ್ಟುಕೊಳ್ಳಬೇಕು ಎಂದು ಸಂತೋಷ್​ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

PM Modi's I-Day speech: 'ನಮ್ಮ ಕನಸು, ಸಂಕಲ್ಪಗಳು ದೊಡ್ಡದಾಗಿರಬೇಕು; 2047ರ ವೇಳೆಗೆ ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರ ಮಾಡಿಯೇ ತೀರುತ್ತೇವೆ: ಪ್ರಧಾನಿ ಮೋದಿ-Video

80th Independence Day|ಯುವಜನತೆ ಸಾಮರ್ಥ್ಯವನ್ನು ರಾಷ್ಟ್ರ ನಿರ್ಮಾಣಕ್ಕೆ ಬಳಸಿಕೊಳ್ಳಲಾಗುವುದು: ಪ್ರಧಾನಿ ಮೋದಿ-Video

ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗೆ ಪರೀಕ್ಷಾ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ- ಸ್ವಾತಂತ್ರ್ಯ ದಿನದ ಹಿನ್ನೆಲೆ ದೇಶವನ್ನುದ್ದೇಶಿಸಿ ರಾಷ್ಟ್ರಪತಿ ಮುರ್ಮು ಮಾತು

ಬೆಂಗಳೂರು: ಟೆಕ್ಕಿ ಪತ್ನಿ ಹತ್ಯೆಗೈದು ತಾನೂ ನೇಣಿಗೆ ಶರಣಾದ ಇಂಜಿನಿಯರ್; ತಾಯಿಗೆ ಕಳಿಸಿದ್ದ ವಾಯ್ಸ್ ಮೆಸೇಜ್‌ನಲ್ಲಿ ಸ್ಫೋಟಕ ಕಾರಣ ಬಹಿರಂಗ!

ರಾಜ್ಯ ಸಾರಿಗೆ ನೌಕರರಿಗೆ ವರಮಹಾಲಕ್ಷ್ಮಿ ಹಬ್ಬದ ಗಿಫ್ಟ್: ವೇತನ ಹಿಂಬಾಕಿ ಬಿಡುಗಡೆ