ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ವೇಳೆ ಫ್ರೀಡಂ ಹಬ್ಬದ ಮೂಲಕ ಸಿಲಿಕಾನ್ ಸಿಟಿ ಜನರು ಮನರಂಜನೆಯ ರಸದೌತಣಕ್ಕೆ ರಾಜ್ಯ ಸರ್ಕಾರ ವೇದಿಕೆ ಮಾಡಿಕೊಟ್ಟಿತ್ತು. ಇದರ ಬೆನ್ನಲ್ಲೇ ಮತ್ತೊಂದು ಹಬ್ಬ, ಹಬ್ಬ ಅಲ್ಲ ಈ ಭಾರಿ ಅದ್ದೂರಿ ಜಾತ್ರೆಗೆ ರಾಜ್ಯ ಸರ್ಕಾರ ತಯಾರಿ ಮಾಡಿಕೊಳ್ಳುತ್ತಿದೆ. ಅದರಂತೆ, ಮುಂಬರುವ ಡಿಸೆಂಬರ್‌ನಲ್ಲಿ ಬೆಂಗಳೂರು ಜಾತ್ರೆ ಆಯೋಜಿಸುವುದಾಗಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಘೋಷಣೆ ಮಾಡಿದ್ದಾರೆ. ಆ ಕುರಿತು ವರದಿ ಇಲ್ಲಿದೆ:
ಡಿಸೆಂಬರ್‌ನಲ್ಲಿ ಬೆಂಗಳೂರು ಜಾತ್ರೆ
ಫ್ರೀಡಂ ಹಬ್ಬದ ವೇಳೆ ಬೆಂಗಳೂರು ಜಾತ್ರೆ ಬಗ್ಗೆ ಘೋಷಣೆ ಮಾಡಿದ ಸಿಎಂ ಡಿಕೆ ಶಿವಕುಮಾರ್, "ಡಿಸೆಂಬರ್‌ನಲ್ಲಿ ಬೆಂಗಳೂರು ಜಾತ್ರೆಯನ್ನ ಆಚರಣೆ ಮಾಡಬೇಕು ಅಂತೇಳಿ ಈಗಾಗಲೇ ಕೃಷ್ಣ ಬೈರೇಗೌಡರು ಅದಕ್ಕೆ ತಯಾರನ್ನ ಮಾಡ್ಲಿಕ್ಕೆ ಸಿದ್ಧತೆಯನ್ನ ನಡೆಸ್ತಾ ಇದ್ದಾರೆ" ಎಂದು ತಿಳಿಸಿದರು.
ಇದಕ್ಕೆ ಧನಿಗೂಡಿಸಿದ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ, ನೀವು ನಿಮ್ಮ ಊರಿನಲ್ಲಿ ದೊಡ್ಡ ಜಾತ್ರೆಗಳನ್ನ ನೋಡಿರ್ತೀರ. ಅದೇತರಹದ ಜಾತ್ರೆಯನ್ನ ಬೆಂಗಳೂರಿನಲ್ಲೂ ಕೂಡಾ ಊರಹಬ್ಬವನ್ನ, ಬೆಂಗಳೂರು ಜಾತ್ರೆಯನ್ನ, ಸಿಎಂ ಡಿಕೆ ಶಿವಕುಮಾರ್ ಸೂಚನೆಯ ಮೇರೆಗೆ ಇದೆ ಡಿಸೆಂಬರ್‌ನಲ್ಲಿ ಆಯೋಜನೆ ಮಾಡುತ್ತೇವೆ ಎಂದು ತಿಳಿಸಿದರು.