ದೂರು ನೀಡಲು ಕ್ಯೂಆರ್ ಕೋಡ್ ಬಿಡುಗಡೆ 
ರಾಜ್ಯ

ದೂರು ನೀಡಲು ಕ್ಯೂಆರ್ ಕೋಡ್ ಬಿಡುಗಡೆ; ಹೋಟೆಲ್‌ಗಳ ಅಡುಗೆ ಕೋಣೆಗೆ ಸಿಸಿಟಿವಿ ಕಡ್ಡಾಯ, ಪಿಜಿ ಗಳಿಗೆ ಪ್ರತ್ಯೇಕ ಗೈಡ್‌ಲೈನ್ಸ್‌: ಖಾದರ್ ಮಹತ್ವದ ಘೋಷಣೆ

ಇನ್ನು ಮುಂದೆ ಪಿಜಿಗಳು, ಹಾಸ್ಟೆಲ್‌ಗಳು, ಬಸ್ ನಿಲ್ದಾಣ ಮತ್ತು ರೈಲ್ವೆ ಕ್ಯಾಂಟೀನ್‌ಗಳು ಹಾಗೂ ಮದುವೆ ಸಮಾರಂಭಗಳಿಗೆ ಆಹಾರ ಒದಗಿಸುವ ಕ್ಯಾಟರಿಂಗ್ ಸೇವೆಗಳಿಗೂ ಆಹಾರ ಗುಣಮಟ್ಟದ ಪರಿಶೀಲನೆ ನಡೆಸಲಾಗುವುದು ಎಂದು ಖಾದರ್ ತಿಳಿಸಿದ್ದಾರೆ.

ಬೆಂಗಳೂರು: ರಾಜ್ಯದಲ್ಲಿ ಆಹಾರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕಳೆದ ಕೆಲವು ದಿನಗಳಿಂದ ಆರೋಗ್ಯ ಇಲಾಖೆ ಅಧಿಕಾರಿಗಳು ಹಲವು ಕಡೆ ದಾಳಿ ನಡೆಸಿ ಆಹಾರ ಗುಣಮಟ್ಟ ಪರಿಶೀಲನೆ ನಡೆಸುತ್ತಿದ್ದು, ಪಿಜಿಗಳು ಮತ್ತು ಖಾಸಗಿ ಹಾಸ್ಟೆಲ್ ಗಳನ್ನು ಕೂಡ ಪರಿಶೀಲನೆ ಮಾಡುತ್ತೇವೆ ಎಂದು ಆರೋಗ್ಯ ಸಚಿವ ಯು.ಟಿ ಖಾದರ್‌ ಸೋಮವಾರ ಎಚ್ಚರಿಕೆ ನೀಡಿದ್ದಾರೆ.

ಹೋಟೆಲ್‌ಗಳ ಮೇಲೆ ದಾಳಿ ನಡೆಸಿ ಕರ್ತವ್ಯ ಪ್ರಜ್ಞೆ ಮೆರೆದ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಇಂದು ಆರೋಗ್ಯ ಸೌಧದಲ್ಲಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅಧಿಕಾರಿಗಳಿಗೆ ಗೌರವ ಸಮರ್ಪಣೆ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಆರೋಗ್ಯ ಸಚಿವರು, ಹಲವು ವಿಷಯಗಳನ್ನ ಪ್ರಸ್ತಾಪಿಸಿದರು.

ಇನ್ನು ಮುಂದೆ ಪಿಜಿಗಳು, ಹಾಸ್ಟೆಲ್‌ಗಳು, ಬಸ್ ನಿಲ್ದಾಣ ಮತ್ತು ರೈಲ್ವೆ ಕ್ಯಾಂಟೀನ್‌ಗಳು ಹಾಗೂ ಮದುವೆ ಸಮಾರಂಭಗಳಿಗೆ ಆಹಾರ ಒದಗಿಸುವ ಕ್ಯಾಟರಿಂಗ್ ಸೇವೆಗಳಿಗೂ ಆಹಾರ ಗುಣಮಟ್ಟದ ಪರಿಶೀಲನೆ ನಡೆಸಲಾಗುವುದು ಎಂದು ಖಾದರ್ ತಿಳಿಸಿದ್ದಾರೆ.

ಪಿಜಿ ಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಿ, ಯುವಸಮೂಹ, ವಿದ್ಯಾರ್ಥಿಗಳ ನೋವಿನಲ್ಲಿ ದುಡ್ಡು ಮಾಡಬೇಡಿ ಎಂದು ಎಚ್ಚರಿಕೆ ನೀಡಿದರಲ್ಲದೇ, ಪಿಜಿಗಳು ಮತ್ತೆ ತಪ್ಪು ಮಾಡಿದ್ರೆ ಕ್ಷಮಿಸುವ ಮಾತೇ ಇಲ್ಲ. ಖಾಸಗಿ ಹಾಸ್ಟೆಲ್‌ಗಳನ್ನೂ ಚೆಕ್ ಮಾಡ್ತೇವೆ ಎಂದು ಎಚ್ಚರಿಸಿದರು.

ಹೋಟೆಲ್‌ಗಳಲ್ಲಿ ಆಹಾರ ಪದಾರ್ಥ ತಯಾರು ಮಾಡುವ ಕಡೆ ತಪಾಸಣೆ ಮಾಡಿದ್ದೇವೆ, ಎಲ್ಲಿಂದ ಆಹಾರ ಪದಾರ್ಥಗಳು ಸರಬರಾಜು ಆಗುತ್ತವೆ ಅನ್ನೋದನ್ನೂ ತಪಾಸಣೆ ಮಾಡಿದ್ದೇವೆ. ರಾಜ್ಯದಲ್ಲಿ 30 ಟೀಂ ತಯಾರು ಮಾಡಿ, 60ಕ್ಕೂ ಹೆಚ್ಚು 3 ಸ್ಟಾರ್, 5 ಸ್ಟಾರ್, 8 ವೇರ್ ಹೌಸ್, 4 ಅಂತಾರಾಷ್ಟ್ರೀಯ ರೆಸ್ಟೋರೆಂಟ್ ಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಲಾಗಿದೆ. 30 ಆಹಾರ ಉದ್ದಿಮೆದಾರರಿಗೆ ನೋಟಿಸ್ ನೀಡಲಾಗಿದ್ದು, ವಿಚಾರಣೆ ಹಂತದಲ್ಲಿದೆ ಎಂದು ಮಾಹಿತಿ ನೀಡಿದರು.

ಇನ್ನು ಸಾರ್ವಜನಿಕರು ದೂರು ನೀಡಲು ಅನುಕೂಲವಾಗುವಂತೆ, ಹೋಟೆಲ್‌ಗಳು ಮತ್ತು ಮೆಡಿಕಲ್ ಸ್ಟೋರ್‌ಗಳಲ್ಲಿ ಕ್ಯೂಆರ್ ಕೋಡ್ ವ್ಯವಸ್ಥೆಯನ್ನು ಪರಿಚಯಿಸಲಾಗುವುದು. ಇದನ್ನು ಸ್ಕ್ಯಾನ್ ಮಾಡುವ ಮೂಲಕ ಜನರು ತಮ್ಮ ಸಮಸ್ಯೆಗಳನ್ನು ನೇರವಾಗಿ ಅಧಿಕಾರಿಗಳ ಗಮನಕ್ಕೆ ತರಬಹುದು. ಇದು ಕರ್ನಾಟಕದಲ್ಲಿ ಮೊದಲ ಬಾರಿಗೆ ಜಾರಿಗೆ ಬರುತ್ತಿರುವಂತಹ ವ್ಯವಸ್ಥೆಯಾಗಿದೆ ಎಂದು ಸಚಿವರು ತಿಳಿಸಿದರು.

ಪಿಜಿ ಗಳಿಗೆ ಪ್ರತ್ಯೇಕ ಗೈಡ್‌ಲೈನ್ಸ್‌

ಮುಂದುವರಿದು ಮಾತನಾಡಿದ ಸಚಿವರು, ಅಡುಗೆ ಮತ್ತು ಸ್ವಚ್ಛತೆಗೆ ಸಂಬಂಧಿಸಿದಂತೆ ಪಿಜಿಗಳಿಗೆ ಪ್ರತ್ಯೇಕ ಮಾರ್ಗಸೂಚಿ ಬರಲಿದೆ ಎಂದು ಹೇಳಿದರು.

ಹೋಟೆಲ್ ಗಳ ಅಡುಗೆ ಕೋಣೆಯಲ್ಲಿ ಸಿಸಿಟಿವಿ ಕಡ್ಡಾಯ

ಇನ್ನು ಮುಂದೆ ಹೋಟೆಲ್ ಗಳ ಅಡುಗೆ ಕೋಣೆಗೆ ಸಿಸಿಟಿವಿ ಕಡ್ಡಾಯ ಮಾಡುತ್ತೇವೆ. ಅದಕ್ಕೆ ಶೀಘ್ರವೇ ಸೂಚನೆ ನೀಡುತ್ತೇನೆ ಎಂದು ಯುಟಿ ಖಾದರ್ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸುಪ್ರೀಂ ಕೋರ್ಟ್‌ನಲ್ಲೂ ಕರ್ನಾಟಕಕ್ಕೆ ಹಿನ್ನಡೆ: ಕಾವೇರಿ ವಿಚಾರಣೆ ಒಂದು ವಾರ ಮುಂದೂಡಿಕೆ, CWMA ಆದೇಶ ಪಾಲಿಸಲು ಸೂಚನೆ..!

Rahul Gandhi ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಬ್ರೇಕ್! ಹೈಕೋರ್ಟ್‌ಗೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ

ಯುರೋಪ್‌ನಲ್ಲಿ ಯುದ್ಧದ ಭೀತಿ: ಉಕ್ರೇನ್‌ನಲ್ಲಿರುವ ಭಾರತದ ಬಿಲಿಯನೇರ್‌ ಉದ್ಯಮಿಯ ಕಾರ್ಖಾನೆ ಮೇಲೆ ರಷ್ಯಾ ದಾಳಿ!

ಹನೂರು ಶೂಟೌಟ್ ಪ್ರಕರಣ: ಮೃತರ ಕುಟುಂಬಸ್ಥರಿಗೆ 15 ಲಕ್ಷ ರೂ. ಪರಿಹಾರ ವಿತರಣೆ, ಪ್ರತಿಭಟನೆ ವಾಪಸ್

ನಿನ್ನಿಂದಲೇ ಇಡೀ ಇಲಾಖೆ ಮರ್ಯಾದೆ ಹೋಯಿತು: ಪ್ರಜ್ವಲ್ ರೇವಣ್ಣಗೆ ಅಲೋಕ್ ಕುಮಾರ್ 'ಸ್ಪೆಷಲ್ ಕ್ಲಾಸ್'