ಕೃಷಿ ಕ್ಷೇತ್ರ (ಸಾಂದರ್ಭಿಕ ಚಿತ್ರ) online desk
ರಾಜ್ಯ

ಶೂನ್ಯ ಬಡ್ಡಿ ದರ ಕೃಷಿ ಸಾಲಮಿತಿ 5 ಲಕ್ಷ ರೂಗಳಿಗೆ ಏರಿಕೆ ಸದುಪಯೋಗಕ್ಕೆ CM ಕರೆ

ರೈತರಿಗೆ ಸಹಕಾರಿ ಸಂಘಗಳ ಮೂಲಕ ನೀಡುವ ಶೂನ್ಯ ಬಡ್ಡಿ ದರದ ಬೆಳೆ ಸಾಲ ಮಿತಿಯನ್ನು 2023-24ನೇ ಸಾಲಿನಲ್ಲಿಸರಕಾರ 3ರಿಂದ 5 ಲಕ್ಷ ರೂ.ಗೆ ಏರಿಕೆ ಮಾಡಲಾಗಿತ್ತು.

ಬೆಂಗಳೂರು: ಸಹಕಾರ ಸಂಘಗಳ ಮೂಲಕ ರೈತ ಸದಸ್ಯರಿಗೆ ನೀಡುವ ಶೂನ್ಯ ಬಡ್ಡಿ ದರದ ಸಾಲಮಿತಿಯನ್ನು 5 ಲಕ್ಷ ರೂ.ಗಳಿಗೆ ಏರಿಸಲಾಗಿದ್ದು, ಈ ಸಂಬಂಧ ಸರ್ಕಾರದಿಂದ ಅಧಿಕೃತ ಸುತ್ತೋಲೆ ಹೊರಡಿಸಲಾಗಿದೆ.

ರೈತರಿಗೆ ಸಹಕಾರಿ ಸಂಘಗಳ ಮೂಲಕ ನೀಡುವ ಶೂನ್ಯ ಬಡ್ಡಿ ದರದ ಬೆಳೆ ಸಾಲ ಮಿತಿಯನ್ನು 2023-24ನೇ ಸಾಲಿನಲ್ಲಿಸರಕಾರ 3ರಿಂದ 5 ಲಕ್ಷ ರೂ.ಗೆ ಏರಿಕೆ ಮಾಡಲಾಗಿತ್ತು. ಆದರೆ ನಬಾರ್ಡ್‌ ಇದಕ್ಕೆ ಬೇಕಾದ ಮೊತ್ತವನ್ನು ಬಿಡುಗಡೆಗೊಳಿಸದ ಕಾರಣ ಅನೇಕ ರೈತರು ಈ ಯೋಜನೆಯಿಂದ ವಂಚಿತರಾಗಿದ್ದರು.

ಈಗ ಸಾಲ ಮಿತಿ ಏರಿಕೆ ಕುರಿತು ಸಹಕಾರ ಇಲಾಖೆಯಿಂದ ಸುತ್ತೋಲೆ ಪ್ರಕಟವಾಗಿದ್ದು, 2026-27ನೇ ಸಾಲಿನಲ್ಲಿ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ನೀಡುವ 5 ಲಕ್ಷ ರೂ.ವರೆಗಿನ ಕೃಷಿ ಸಾಲ ಮತ್ತು 2 ಲಕ್ಷ ರೂ.ವರೆಗಿನ ಪಶು ಸಂಗೋಪನೆ ಮತ್ತು ಮೀನುಗಾರಿಕೆ ದುಡಿಯುವ ಬಂಡವಾಳ ಸಾಲ ಹಾಗೂ ಶೇ.3 ಬಡ್ಡಿ ದರದಲ್ಲಿ ನೀಡುವ 15 ಲಕ್ಷ ರೂ. ಮಧ್ಯಮಾವಧಿ ಸಾಲ ವಿತರಿಸುವಂತೆ ಸೂಚಿಸಲಾಗಿದೆ. ಇದುವರೆಗೆ ಶೇ.3 ಬಡ್ಡಿ ದರದ ಸಾಲದ ಮಿತಿ ಗರಿಷ್ಠ 10 ಲಕ್ಷ ರೂ. ಆಗಿತ್ತು. ಕನಿಷ್ಠ ಶೇ.10ರಷ್ಟು ಹೊಸ ಸದಸ್ಯರಿಗೆ, ಶೇ.24.10ರಷ್ಟು ಪ.ಜಾತಿ, ಪಂಗಡದ ಸದಸ್ಯರಿಗೆ ಸಾಲ ವಿತರಿಸಲು ನಿರ್ದೇಶನ ನೀಡಲಾಗಿದೆ.

CM ಸಂದೇಶ

ಪ್ರಿಯ ರೈತರೇ, "ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ 5 ಲಕ್ಷ ರೂ.ವರೆಗೆ ಪಡೆದ ಬೆಳೆ ಸಾಲವನ್ನು ಗರಿಷ್ಠ ಒಂದು ವರ್ಷದೊಳಗೆ ಬಡ್ಡಿರಹಿತವಾಗಿ ಮರುಪಾವತಿಸಿದಲ್ಲಿ ಸರಕಾರದಿಂದ ಪ್ರತಿವರ್ಷ ಬಡ್ಡಿ ಸಹಾಯಧನ ಪಾವತಿಸಲಾಗುತ್ತದೆ. ಮಂಜೂರಾದ ಸಾಲದ ಹಣ ಡಿಸಿಸಿ ಬ್ಯಾಂಕ್‌ನಲ್ಲಿರುವ ಉಳಿತಾಯ ಖಾತೆಗೆ ಜಮಾ ಆಗಿರುವುದನ್ನು ಖಚಿತಪಡಿಸಿಕೊಂಡು ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಕೋರಿಕೊಳ್ಳುತ್ತೇನೆ ಎಂದು ಸಿಎಂ ಡಿಕೆ ಶಿವಕುಮಾರ್ ಸಂದೇಶ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

IAS ಅಧಿಕಾರಿ ನಿಗೂಢ ಕಣ್ಮರೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ನಾಪತ್ತೆ ಆಗಿಲ್ಲ, ಆದ್ರೆ...: ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದೇನು?

'ನಾವು ದೇಶದ್ರೋಹಿಗಳಾ?.. ಗಾಂಧಿ, ನೆಹರು, ಪಟೇಲ್, ಬೋಸ್ ನಿರ್ಧರಿಸಿದ ಆವೃತ್ತಿಯನ್ನೇ ಹಾಡುತ್ತಿದ್ದೇವೆ: ವಂದೇ ಮಾತರಂ ವಿವಾದಕ್ಕೆ Kharge ತಿರುಗೇಟು

ತಮಿಳುನಾಡಲ್ಲಿ ಹುಟ್ಟುವ ಮಕ್ಕಳಿಗೆ CM ವಿಜಯ್ ಭರ್ಜರಿ ಗಿಫ್ಟ್: 1.28 ಲಕ್ಷ ಗೋಲ್ಡ್‌ ರಿಂಗ್‌ಗಳಿಗೆ ವರ್ಕ್ ಆರ್ಡರ್

3ನೇ ಮಗುವಿನ ನಿರೀಕ್ಷೆಯಲ್ಲಿದ್ದಾರಾ ಕರೀನಾ ಕಪೂರ್? ವೈರಲ್ ವಿಡಿಯೋ ಬಗ್ಗೆ ನಾದಿನಿ ಸಬಾ ಪಟೌಡಿ ಹೇಳಿದ್ದೇನು?

ಚೀನಾ, ಪಾಕ್ ಮುಂದಿವೆ; 2030 ರಲ್ಲಿ ತೇಜಸ್ ಸೇರ್ಪಡೆಯಾದರೂ, ಕಾರ್ಯಾಚರಣೆಗೆ ಅಪ್ರಸ್ತುತ ಸಾಧ್ಯತೆ; ನಿವೃತ್ತ ಏರ್ ಮಾರ್ಷಲ್ ಕಳವಳ