ಸಂಗ್ರಹ ಚಿತ್ರ 
ರಾಜ್ಯ

ಬೆಂಗಳೂರು Airport ಪ್ರಯಾಣಿಕರಿಗೆ ಹೊಸ ರೂಲ್ಸ್: ಇನ್ನು ಮುಂದೆ ವಿಮಾನ ಹತ್ತುವವರ ಜೊತೆಗೆ ಇಳಿಯುವವರಿಗೂ ಅನ್ವಯಿಸಲಿದೆ UDF ಶುಲ್ಕ..!

ಹೊಸ ಶುಲ್ಕ ರಚನೆಯಂತೆ, ನಿರ್ಗಮಿಸುವ ದೇಶೀಯ ಪ್ರಯಾಣಿಕರಿಗೆ ರೂ.300 ಹಾಗೂ ಆಗಮಿಸುವ ದೇಶೀಯ ಪ್ರಯಾಣಿಕರಿಗೆ ರೂ.125 UDF ವಿಧಿಸಲಾಗುತ್ತದೆ. ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ನಿರ್ಗಮನದ ವೇಳೆ ರೂ.997 ಹಾಗೂ ಆಗಮನದ ವೇಳೆ ರೂ.426 ಶುಲ್ಕ ಇರಲಿದೆ.

ಬೆಂಗಳೂರು: ದೇಶದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಒಂದಾದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (KIA) ಬಂದು ಇಳಿಯುವ ಪ್ರಯಾಣಿಕರಿಗೆ ಸೆಪ್ಟೆಂಬರ್ 1 ರಿಂದ ಹೊಸ ಶುಲ್ಕದ ಬಿಸಿ ತಟ್ಟಲಿದೆ.

ಇದೂವರೆಗೆ ಮುಖ್ಯವಾಗಿ ನಿರ್ಗಮಿಸುವ ಪ್ರಯಾಣಿಕರಿಂದ ಸಂಗ್ರಹಿಸಲಾಗುತ್ತಿದ್ದ ಶುಲ್ಕ ವ್ಯವಸ್ಥೆಯಲ್ಲಿ ಇದೀಗ ಬದಲಾವಣೆ ಮಾಡಲಾಗಿದೆ.

ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ (BIAL) ಶುಕ್ರವಾರ ಹಂಚಿಕೊಂಡ ಮಾಹಿತಿಯ ಪ್ರಕಾರ, ಭಾರತೀಯ ವಿಮಾನ ನಿಲ್ದಾಣಗಳ ಆರ್ಥಿಕ ನಿಯಂತ್ರಣ ಪ್ರಾಧಿಕಾರ (AERA) 2026-27ರಿಂದ 2030-31ರ ಹಣಕಾಸು ವರ್ಷದವರೆಗಿನ ನಾಲ್ಕನೇ ನಿಯಂತ್ರಣ ಅವಧಿಗೆ ಕೆಐಎ ಬೆಂಗಳೂರಿನ ಪರಿಷ್ಕೃತ ಶುಲ್ಕ ಆದೇಶ ಹೊರಡಿಸಿದೆ.

ಹೊಸ ಶುಲ್ಕ ರಚನೆಯಂತೆ, ನಿರ್ಗಮಿಸುವ ದೇಶೀಯ ಪ್ರಯಾಣಿಕರಿಗೆ ರೂ.300 ಹಾಗೂ ಆಗಮಿಸುವ ದೇಶೀಯ ಪ್ರಯಾಣಿಕರಿಗೆ ರೂ.125 UDF ವಿಧಿಸಲಾಗುತ್ತದೆ. ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ನಿರ್ಗಮನದ ವೇಳೆ ರೂ.997 ಹಾಗೂ ಆಗಮನದ ವೇಳೆ ರೂ.426 ಶುಲ್ಕ ಇರಲಿದೆ.

ಈ ಪರಿಷ್ಕೃತ ದರಗಳು ಆಗಸ್ಟ್ 2029ರವರೆಗೆ ಜಾರಿಯಲ್ಲಿರಲಿವೆ. ಬಳಿಕ ಟರ್ಮಿನಲ್-2 (T2) ಹಂತ-2 ಸೇರಿದಂತೆ ಪ್ರಮುಖ ಮೂಲಸೌಕರ್ಯ ಯೋಜನೆಗಳು ಪೂರ್ಣಗೊಂಡ ನಂತರ ಶುಲ್ಕದಲ್ಲಿ ಬದಲಾವಣೆ ಮಾಡುವ ಸಾಧ್ಯತೆಯಿದೆ.

ಪ್ರಸ್ತುತ ನಿರ್ಗಮಿಸುವ ದೇಶೀಯ ಪ್ರಯಾಣಿಕರಿಂದ ಒಟ್ಟು ರೂ.550 UDF ಸಂಗ್ರಹಿಸಲಾಗುತ್ತಿದ್ದು, ಹೊಸ ವ್ಯವಸ್ಥೆಯಲ್ಲಿ ದೇಶೀಯ ಪ್ರಯಾಣಿಕರಿಗೆ ಒಟ್ಟು UDF ರೂ.425ಕ್ಕೆ ಇಳಿಕೆಯಾಗಲಿದೆ.

ಅದೇ ರೀತಿ, ನಿರ್ಗಮಿಸುವ ಅಂತಾರಾಷ್ಟ್ರೀಯ ಪ್ರಯಾಣಿಕರಿಂದ ಪ್ರಸ್ತುತ ಸಂಗ್ರಹಿಸಲಾಗುತ್ತಿರುವ ರೂ.1,500 ಬದಲಿಗೆ ಹೊಸ ವ್ಯವಸ್ಥೆಯಲ್ಲಿ ಒಟ್ಟು UDF ರೂ.1,423 ಆಗಲಿದೆ.

ಭಾರತದ ಇತರ ಪ್ರಮುಖ ಹಾಗೂ ಇತ್ತೀಚೆಗೆ ಆರಂಭಗೊಂಡ ವಿಮಾನ ನಿಲ್ದಾಣಗಳಲ್ಲಿ ಅನುಸರಿಸುತ್ತಿರುವ ಮಾದರಿಯಂತೆ, UDF ಶುಲ್ಕವನ್ನು ಆಗಮಿಸುವ ಮತ್ತು ನಿರ್ಗಮಿಸುವ ಪ್ರಯಾಣಿಕರ ನಡುವೆ ಹಂಚಿಕೆ ಮಾಡುವಂತೆ ಭಾರತೀಯ ವಿಮಾನ ನಿಲ್ದಾಣಗಳ ಆರ್ಥಿಕ ನಿಯಂತ್ರಣ ಪ್ರಾಧಿಕಾರ (AERA) ನಿರ್ಧರಿಸಿದೆ.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಭವಿಷ್ಯದ ಪ್ರಯಾಣಿಕರ ಸಾಮರ್ಥ್ಯ ಹೆಚ್ಚಿಸಲು ಕೈಗೊಳ್ಳಲಾಗುತ್ತಿರುವ ಹಲವು ಪ್ರಮುಖ ಮೂಲಸೌಕರ್ಯ ಕಾಮಗಾರಿಗಳನ್ನೂ ಹೊಸ ಶುಲ್ಕ ಆದೇಶ ಪರಿಗಣಿಸಿದೆ ಎಂದು BIAL ವಕ್ತಾರರು ತಿಳಿಸಿದ್ದಾರೆ.

ಇವುಗಳಲ್ಲಿ T2 ಹಂತ-2, T2 ಹಂತ-2 ಏಪ್ರನ್, ವಿಮಾನ ನಿಲ್ದಾಣದ ವಾಯುಕ್ಷೇತ್ರ ಕಾಮಗಾರಿಗಳು, ರಸ್ತೆ ಹಾಗೂ ಭೂಭಾಗದ ಮೂಲಸೌಕರ್ಯ ಸೇರಿದಂತೆ ಹಲವು ವಿಮಾನಯಾನ ಸಂಬಂಧಿತ ಯೋಜನೆಗಳು ಸೇರಿವೆ.

ಪ್ರಮುಖ ಯೋಜನೆಗಳಿಗೆ ಸಂಬಂಧಿಸಿದ ಹೆಚ್ಚುವರಿ ಶುಲ್ಕಗಳನ್ನು ಕಾಮಗಾರಿಗಳು ಪೂರ್ಣಗೊಂಡು, ಕಾರ್ಯಾರಂಭ ಮಾಡಿ ಬಳಕೆಗೆ ಬಂದ ನಂತರ ಹಾಗೂ AERA ನಿಗದಿಪಡಿಸಿರುವ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮಾತ್ರ ಜಾರಿಗೆ ತರಲಾಗುತ್ತದೆ ಎಂದು BIAL ಸ್ಪಷ್ಟಪಡಿಸಿದೆ.

ಸೆಪ್ಟೆಂಬರ್ 1ರವರೆಗೆ ದೇಶೀಯ ಮತ್ತು ಅಂತಾರಾಷ್ಟ್ರೀಯ ನಿರ್ಗಮಿಸುವ ಪ್ರಯಾಣಿಕರಿಗೆ ಪ್ರಸ್ತುತ ಜಾರಿಯಲ್ಲಿರುವ UDF ಶುಲ್ಕವೇ ಮುಂದುವರಿಯಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Canada ವಿರುದ್ಧ Trump ಸುಂಕಾಸ್ತ್ರ; 20 ಬಿಲಿಯನ್ ಡಾಲರ್‌ ಉತ್ಪನ್ನಗಳ ಮೇಲೆ ಶೇ.50ರಷ್ಟು ತೆರಿಗೆ, ಪ್ರತೀಕಾರದ ಎಚ್ಚರಿಕೆ ನೀಡಿದ Carney..!

'Economic D-Day' ಘೋಷಣೆ: Iran ವಿರುದ್ಧ ಅಮೆರಿಕಾ ಆರ್ಥಿಕ ದಿಗ್ಬಂಧನ ಅಸ್ತ್ರ; ಇದು ಆರ್ಥಿಕ ಭಯೋತ್ಪಾದನೆ-‘ಜಗತ್ತನ್ನು ವಸಾಹತು ಮಾಡುವ ಹುನ್ನಾರ’- ಇರಾನ್ ಆಕ್ರೋಶ

ಹಾರ್ಮುಜ್ ಜಲಸಂಧಿ ನಮ್ಮದೇ: ಟ್ರಂಪ್ ಸ್ಫೋಟಕ ಹೇಳಿಕೆ; ನಮ್ಮ ಭೂಪ್ರದೇಶಕ್ಕೆ ಕೈಹಾಕಿದರೆ ಸರ್ವನಾಶ ಗ್ಯಾರಂಟಿ- ಟೆಹ್ರಾನ್ ಖಡಕ್ ವಾರ್ನಿಂಗ್

Somalia ಕರಾವಳಿಯಲ್ಲಿ ಹಡಗುಗಳ ಹೈಜಾಕ್: ಕಡಲ್ಗಳ್ಳರ ವಶದಲ್ಲಿದ್ದ 22 ಮಂದಿ ಭಾರತೀಯರು ಸೇಫ್; ಕೇಂದ್ರ ಸರ್ಕಾರ

ರಜನಿಕಾಂತ್ ರ 'ಜೈಲರ್ 2' ಹಾಡು ವೈರಲ್; ಶಮ್ನಾ ಕಾಸಿಮ್ ಮಸ್ತ್ ಸ್ಟೆಪ್! ಅಭಿಮಾನಿಗಳು ಏನಂತಿದ್ದಾರೆ ಗೊತ್ತಾ? Video