ಸಾರ್ವಜನಿಕರಿಂದ ಯುವಕನಿಗೆ ಧರ್ಮದೇಟು 
ರಾಜ್ಯ

KSRTC ಬಸ್ಸಿನಲ್ಲಿ ಯುವತಿ ಜೊತೆ ಯುವಕನ ಅನುಚಿತ ವರ್ತನೆ: ಸಾರ್ವಜನಿಕರಿಂದ ಧರ್ಮದೇಟು!

ಮಧ್ಯರಾತ್ರಿ ಜರ್ನಿ ವೇಳೆಯಲ್ಲಿ ಚಳಿಯಲ್ಲಿ ಬೆಚ್ಚಗೆ ಮಾಡಿಕೊಳ್ಳುವ ಯತ್ನಿಸಿದ ಯುವಕನಿಗೆ ಚಪ್ಪಲಿಯಲ್ಲಿ ಹೊಡೆದು ಯುವತಿ, ಗ್ರಹಚಾರ ಬಿಡಿಸಿದ್ದಾಳೆ.

ಬೆಂಗಳೂರು: KSRTC ಬಸ್ಸಿನಲ್ಲಿ ಯುವತಿ ಜೊತೆ ಅನುಚಿತವಾಗಿ ವರ್ತಿಸಿದ ಯುವಕನಿಗೆ ಸಾರ್ವಜನಿಕರು ಧರ್ಮದೇಟು ನೀಡಿರುವ ಘಟನೆ ನಡೆದಿದೆ.

ನೆಲಮಂಗಲ ಬಳಿಯ ಸೋಲೂರು ಬಳಿ ಇಂದು ಬೆಳಗಿನ ಜಾವ ಹಾಸನದಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ KSRTC ಬಸ್ಸಿನಲ್ಲಿ ಈ ಘಟನೆ ನಡೆದಿದೆ.

ಮಧ್ಯರಾತ್ರಿ ಜರ್ನಿ ವೇಳೆಯಲ್ಲಿ ಚಳಿಯಲ್ಲಿ ಬೆಚ್ಚಗೆ ಮಾಡಿಕೊಳ್ಳುವ ಯತ್ನಿಸಿದ ಯುವಕನಿಗೆ ಚಪ್ಪಲಿಯಲ್ಲಿ ಹೊಡೆದು ಯುವತಿ, ಗ್ರಹಚಾರ ಬಿಡಿಸಿದ್ದಾಳೆ.

ಬಳಿಕ ಯುವತಿ ಕಣ್ಣೀರು ಹಾಕುತ್ತಿದ್ದಂತೆಯೇ ಸಹ ಪ್ರಯಾಣಿಕರು ಆಕೆಯ ಬೆಂಬಲಕ್ಕೆ ನಿಂತಿದ್ದು, ಯುವಕನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಪೊಲೀಸ್ ಠಾಣೆಗೆ ಬಸ್ ತಿರುಗಿಸಿ ಎಂದ ಪ್ರಯಾಣಿಕರು ಪಟ್ಟು ಹಿಡಿದಿದ್ದಾರೆ. ಕೊನೆಗೆ ನಿದ್ದೆಯಲ್ಲಿ ನನ್ನಿಂದ ತಪ್ಪಾಗಿದೆ ಎಂದು ಯುವಕ ಕ್ಷಮೆಯಾಚಿಸಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಆರ್ಥಿಕ ದಿಗ್ಬಂಧನಕ್ಕೆ ಕೆಂಡಾಮಂಡಲ: ಅಮೆರಿಕಕ್ಕೆ ಸಾಥ್ ನೀಡುವ ದೇಶಗಳೂ ನಮಗೆ ಶತ್ರುಗಳೇ; ಇರಾನ್ ಕಠಿಣ ಎಚ್ಚರಿಕೆ

ಪಾರದೀಪ್ ಕರಾವಳಿಯಲ್ಲಿ ಭೀಕರ ದುರಂತ: 72,100 ಟನ್ ಕಬ್ಬಿಣದ ಅದಿರು ಹೊತ್ತಿದ್ದ Panama ಹಡಗು ಮುಳುಗಡೆ; ಇಬ್ಬರ ರಕ್ಷಣೆ, 22 ಮಂದಿ ನಾಪತ್ತೆ..!

Hormuz ಮೇಲೆ ಅಮೆರಿಕಾ ಕಣ್ಣು: ‘‘NEW US Territory’’ ಎಂದು ಮತ್ತೆ ನಕ್ಷೆ ಪೋಸ್ಟ್ ಮಾಡಿದ ಟ್ರಂಪ್, ಇರಾನ್ ಕೆಂಡಾಮಂಡಲ..!

ವಾಲ್ಮೀಕಿ ನಿಗಮ ಹಗರಣ: Prosecutionಗೆ ರಾಜ್ಯಪಾಲರ ಅನುಮತಿ ಕೋರಿದ CBI, ಸಚಿವ ನಾಗೇಂದ್ರಗೆ ಹೆಚ್ಚಿದ ಸಂಕಷ್ಟ..!

ಕೈಕೊಟ್ಟ ಮುಂಗಾರು: ಬರ ತಗ್ಗಿಸಲು 28 ಕೋಟಿ ರೂ. ವೆಚ್ಚದಲ್ಲಿ ಮೋಡ ಬಿತ್ತನೆಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್..!