ವಿಧಾನಸಭೆಯಲ್ಲಿ ಸಿಎಂ ಡಿ ಕೆ ಶಿವಕುಮಾರ್, ಡಿಸಿಎಂ ಡಾ ಜಿ ಪರಮೇಶ್ವರ್  
ರಾಜ್ಯ

ವಿಧಾನಸಭೆ, ವಿಧಾನಪರಿಷತ್‌ನಲ್ಲಿ 7,043 ಕೋಟಿ ರೂ ಪೂರಕ ಬಜೆಟ್ ಅಂದಾಜುಗಳಿಗೆ ಅಂಗೀಕಾರ

ಇದರಲ್ಲಿ 4,324.35 ಕೋಟಿ ರೂಪಾಯಿ ರಾಜಸ್ವ ವೆಚ್ಚಕ್ಕೆ ಹಾಗೂ 2,718.35 ಕೋಟಿ ರೂಪಾಯಿ ಬಂಡವಾಳ ವೆಚ್ಚಕ್ಕೆ ಮೀಸಲಿಡಲಾಗಿದೆ.

ಬೆಂಗಳೂರು: 2026-27ನೇ ಸಾಲಿನ ಪೂರಕ ಬಜೆಟ್ ಅಂದಾಜುಗಳ ಮೊದಲ ಕಂತನ್ನು ವಿಧಾನಮಂಡಲದ ಉಭಯ ಸದನಗಳಲ್ಲಿ ಅಂಗೀಕರಿಸಲಾಯಿತು. ಒಟ್ಟು 7,042.69 ಕೋಟಿ ರೂಪಾಯಿ ಮೊತ್ತದ ಈ ಪೂರಕ ಬಜೆಟ್‌ನಲ್ಲಿ 4,324.35 ಕೋಟಿ ರೂಪಾಯಿ ರಾಜಸ್ವ ವೆಚ್ಚಕ್ಕೆ ಹಾಗೂ 2,718.35 ಕೋಟಿ ರೂಪಾಯಿ ಬಂಡವಾಳ ವೆಚ್ಚಕ್ಕೆ ಮೀಸಲಿಡಲಾಗಿದೆ.

ಪೂರಕ ಅಂದಾಜುಗಳಲ್ಲಿ ‘ವಿಕಸಿತ ಭಾರತ — ಗ್ಯಾರಂಟಿ ಫಾರ್ ರೋಜ್ಗಾರ್ ಆ್ಯಂಡ್ ಆಜೀವಿಕಾ ಮಿಷನ್ (ಗ್ರಾಮೀಣ)’ ಯೋಜನೆಗೆ 2,918 ಕೋಟಿ ರೂಪಾಯಿ, ಬೆಂಗಳೂರು ನಗರದ ರಸ್ತೆ ಅಭಿವೃದ್ಧಿಗೆ ಮೂಲಸೌಕರ್ಯ ಬಂಡವಾಳವಾಗಿ 1,000 ಕೋಟಿ ರೂಪಾಯಿ, ಭಾರತ್ ಜೋಡೋ ಯುವ ಕ್ಲಬ್‌ಗಳಿಗೆ 781 ಕೋಟಿ ರೂಪಾಯಿ, ಅಮೃತ್ (AMRUT) ಯೋಜನೆಯಡಿ 708 ಕೋಟಿ ರೂಪಾಯಿ ಹಾಗೂ ಬರಪೀಡಿತ ಜನರಿಗೆ ಕುಡಿಯುವ ನೀರು ಒದಗಿಸಲು ಜಲಧಾರೆ ಯೋಜನೆಯಡಿ ಪ್ರತಿ ಗ್ರಾಮೀಣ ವಿಧಾನಸಭಾ ಕ್ಷೇತ್ರಕ್ಕೆ ತಲಾ 1 ಕೋಟಿ ರೂಪಾಯಿ, ಒಟ್ಟು 289 ಕೋಟಿ ರೂಪಾಯಿ ಅನುದಾನವನ್ನು ಒದಗಿಸಲಾಗಿದೆ.

ಇತರೆ ಯೋಜನೆಗಳ ಪೈಕಿ ರಸ್ತೆ ಸಾರಿಗೆ ನಿಗಮಗಳಿಗೆ ಸರ್ಕಾರಿ ಮೋಟಾರು ವಾಹನ ತೆರಿಗೆ ಪಾಲಿನ ಪರಿಷ್ಕರಣೆಗೆ 193.61 ಕೋಟಿ ರೂಪಾಯಿ, ಪ್ರಧಾನಮಂತ್ರಿ ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಮಿಷನ್‌ಗೆ 152.72 ಕೋಟಿ ರೂಪಾಯಿ, ಪ್ರಧಾನಮಂತ್ರಿ ಆವಾಸ್ ಯೋಜನೆ (ಗ್ರಾಮೀಣ)ಕ್ಕೆ 93 ಕೋಟಿ ರೂಪಾಯಿ, ವಿಶ್ವೇಶ್ವರಯ್ಯ ಜಲ ನಿಗಮಕ್ಕೆ 91 ಕೋಟಿ ರೂಪಾಯಿ, ಕೆಕೆಆರ್‌ಟಿಸಿ ಬಸ್‌ಗಳ ಖರೀದಿಗೆ 76 ಕೋಟಿ ರೂಪಾಯಿ ಹಾಗೂ ಇತರೆ ಯೋಜನೆಗಳಿಗೆ 738 ಕೋಟಿ ರೂಪಾಯಿ ಮೀಸಲಿಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Cockroach Janta Partyಗೆ ಬಿಗ್ ಶಾಕ್: ಜಂತರ್ ಮಂತರ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸರು, 57 ಮೆಟ್ರೋ ನಿಲ್ದಾಣಗಳು ಬಂದ್..!

ಕೇಂದ್ರ ಸಚಿವ, ಬಿಜೆಪಿ ನಾಯಕನಿಂದ ಸ್ಟಿಂಗ್ ಆಪರೇಷನ್‌ಗೆ ಸಂಚು: Congress ಶಾಸಕ ಗಣಿಗ ರವಿ ಸ್ಫೋಟಕ ಆರೋಪ; Video

ಧಾರವಾಡ: ಕಾರು - ಕ್ಯಾಂಟರ್ ಮುಖಾಮುಖಿ ಡಿಕ್ಕಿ; ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವು!

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ

ಯೋಗೀಶ್ ಗೌಡ ಕೊಲೆ ಪ್ರಕರಣ: ಕಾಂಗ್ರೆಸ್ ಶಾಸಕ ವಿನಯ್‌ ಕುಲಕರ್ಣಿಗೆ ತಾತ್ಕಾಲಿಕ ರಿಲೀಫ್‌; ಅ.27ಕ್ಕೆ ವಿಚಾರಣೆ ಮುಂದೂಡಿಕೆ