ರೇಣುಕಾಸ್ವಾಮಿ ಮತ್ತು ನಟ ದರ್ಶನ್ (ಸಂಗ್ರಹ ಚಿತ್ರ) 
ರಾಜ್ಯ

ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್: ಉಲ್ಟಾ ಹೊಡೆದ ದರ್ಶನ್ ಆಪ್ತ; ಪ್ರಾಸಿಕ್ಯೂಷನ್ ಕೈಗೆ ಸಿಕ್ತು ಬ್ರಹ್ಮಾಸ್ತ್ರ, D Boss ಹಣೆಬರಹ ನಿರ್ಧರಿಸಲಿದೆಯೇ ಪ್ರದೋಷ್ ಹೇಳಿಕೆ..?

ಈಗಾಗಲೇ ಪೊಲೀಸರು ಸಂಗ್ರಹಿಸಿರುವ ಸಾಂದರ್ಭಿಕ ಸಾಕ್ಷ್ಯಗಳಿಗೆ ಪ್ರದೋಷ್‌ ಅವರ ಹೇಳಿಕೆ ಪೂರಕವಾಗುವ ಸಾಧ್ಯತೆಯಿದ್ದು, ನಟ ದರ್ಶನ್‌ ಸೇರಿದಂತೆ ಇತರ ಆರೋಪಿಗಳ ವಿರುದ್ಧದ ಪ್ರಾಸಿಕ್ಯೂಷನ್‌ ಪ್ರಕರಣಕ್ಕೆ ಇದು ಮತ್ತಷ್ಟು ಬಲ ನೀಡುವ ಸಾಧ್ಯತೆಗಳಿವೆ.

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಭೀಕರ ಕೊಲೆ ಪ್ರಕರಣದಲ್ಲಿ ಎ-1 ನಟ ದರ್ಶನ್ ಹಾಗೂ ಇತರೆ ಆರೋಪಿಗಳಿಗೆ ಭಾರೀ ಕಾನೂನು ಹಿನ್ನಡೆಯಾಗಿದೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿ ನಂಬರ್‌ 14 ಪ್ರದೋಷ್‌ ಎಸ್‌. ರಾವ್‌ ಸರ್ಕಾರಿ ಸಾಕ್ಷಿಯಾಗಲು ಮುಂದಾಗಿರುವುದು ಪ್ರಕರಣದ ವಿಚಾರಣೆಯಲ್ಲಿ ಮಹತ್ವದ ಬೆಳವಣಿಗೆಯಾಗಿದೆ.

ಈಗಾಗಲೇ ಪೊಲೀಸರು ಸಂಗ್ರಹಿಸಿರುವ ಸಾಂದರ್ಭಿಕ ಸಾಕ್ಷ್ಯಗಳಿಗೆ ಪ್ರದೋಷ್‌ ಅವರ ಹೇಳಿಕೆ ಪೂರಕವಾಗುವ ಸಾಧ್ಯತೆಯಿದ್ದು, ನಟ ದರ್ಶನ್‌ ಸೇರಿದಂತೆ ಇತರ ಆರೋಪಿಗಳ ವಿರುದ್ಧದ ಪ್ರಾಸಿಕ್ಯೂಷನ್‌ ಪ್ರಕರಣಕ್ಕೆ ಇದು ಮತ್ತಷ್ಟು ಬಲ ನೀಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಘಟನೆ ನಡೆದ ಸಂದರ್ಭ, ಆರೋಪಿಗಳ ಪಾತ್ರ ಹಾಗೂ ಹತ್ಯೆಯ ನಂತರ ನಡೆದ ಬೆಳವಣಿಗೆಗಳ ಕುರಿತು ಅವರ ಹೇಳಿಕೆ ತನಿಖೆಯಲ್ಲಿನ ಹಲವು ಅಂಶಗಳನ್ನು ಜೋಡಿಸುವಲ್ಲಿ ಪ್ರಮುಖವಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಹೆಸರನ್ನು ಬಹಿರಂಗಪಡಿಸದ ಷರತ್ತಿನ ಮೇಲೆ ಮಾತನಾಡಿದ ಸರ್ಕಾರಿ ಅಭಿಯೋಜಕರೊಬ್ಬರು, ಅಪರಾಧದಲ್ಲಿ ಸಹ ಆರೋಪಿಯಾಗಿರುವ ವ್ಯಕ್ತಿಯೊಬ್ಬರು ಪ್ರಾಸಿಕ್ಯೂಷನ್‌ ಪರ ಸಾಕ್ಷಿಯಾಗಿ, ಪ್ರಕರಣ ಮತ್ತು ಇತರ ಆರೋಪಿಗಳ ಪಾತ್ರದ ಕುರಿತು ಸಂಪೂರ್ಣ ಹಾಗೂ ಸತ್ಯವಾದ ಮಾಹಿತಿಯನ್ನು ನೀಡಲು ಒಪ್ಪಿಕೊಂಡರೆ ಅವರನ್ನು ಸರ್ಕಾರಿ ಸಾಕ್ಷಿ (Approver) ಎಂದು ಕರೆಯಲಾಗುತ್ತದೆ. ಇದಕ್ಕೆ ಪ್ರತಿಯಾಗಿ ಅವರಿಗೆ ಕ್ಷಮಾದಾನ ನೀಡಲಾಗುತ್ತದೆ ಎಂದು ವಿವರಿಸಿದ್ದಾರೆ.

ಗಂಭೀರ ಅಪರಾಧಗಳಿಗೆ ಸಂಬಂಧಿಸಿದಂತೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS)ಯ ಸೆಕ್ಷನ್‌ 343ರ ಅಡಿಯಲ್ಲಿ, ಕೆಲವು ಷರತ್ತುಗಳಿಗೆ ಒಳಪಟ್ಟು ಸಮರ್ಥ ನ್ಯಾಯಾಲಯವು ಸಹ ಆರೋಪಿಗೆ ಕ್ಷಮಾದಾನ ನೀಡಬಹುದು. ಆದರೆ, ಸರ್ಕಾರಿ ಸಾಕ್ಷಿಯು ತನ್ನ ಸಾಕ್ಷ್ಯ ಮತ್ತು ಹೇಳಿಕೆಗಳ ಮೂಲಕ ಪ್ರಾಸಿಕ್ಯೂಷನ್‌ಗೆ ಸಹಕರಿಸಲು ವಿಫಲವಾದರೆ, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರಾಸಿಕ್ಯೂಷನ್‌ ನ್ಯಾಯಾಲಯವನ್ನು ಕೋರಬಹುದು. ಸುಳ್ಳು ಸಾಕ್ಷ್ಯ ನೀಡಿದ ಆರೋಪದಲ್ಲಿ ಫೋರ್ಜರಿ ಪ್ರಕರಣ ದಾಖಲಿಸುವ ಸಾಧ್ಯತೆಯೂ ಇದ್ದು, ಪ್ರತ್ಯೇಕವಾಗಿ ವಿಚಾರಣೆ ನಡೆಸಬಹುದಾಗಿದೆ ಎಂದು ಹೇಳದ್ದಾರೆ.

ಹಿರಿಯ ವಕೀಲ ಶ್ಯಾಮಸುಂದರ್‌ ಎಂ.ಎಸ್‌. ಅವರು ಮಾತನಾಡಿ, ಉದಾಹರಣೆಗೆ, ಒಂದು ಪ್ರಕರಣದಲ್ಲಿ 10 ಮಂದಿ ಆರೋಪಿಗಳಿದ್ದರೆ, ಅವರಲ್ಲಿ ಕಾರು ಚಾಲನೆ ಮಾಡುವುದು ಅಥವಾ ಘಟನೆ ನಡೆದ ಸ್ಥಳದಲ್ಲಿ ಉಪಸ್ಥಿತರಿರುವಂತಹ ಕಡಿಮೆ ಪಾತ್ರ ಹೊಂದಿರುವ ವ್ಯಕ್ತಿ ಸರ್ಕಾರಿ ಸಾಕ್ಷಿಯಾಗಲು ಮುಂದಾಗಬಹುದು ಎಂದು ವಿವರಿಸಿದ್ದಾರೆ.

ಅಂತಹ ವ್ಯಕ್ತಿಯ ಹೇಳಿಕೆ ಪ್ರಕರಣದಲ್ಲಿರುವ ಇತರ ಸಾಕ್ಷ್ಯಗಳಿಗೆ ಪೂರಕ ಸಾಕ್ಷ್ಯವಾಗಿ ಕಾರ್ಯನಿರ್ವಹಿಸಬಹುದು ಎಂದಿದ್ದಾರೆ.

ಪೊಲೀಸರು ಸಾಂದರ್ಭಿಕ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದರೂ, ನೇರ ಸಾಕ್ಷ್ಯಗಳ ಕೊರತೆಯಿದ್ದರೆ ಸರ್ಕಾರಿ ಸಾಕ್ಷಿಯ ಹೇಳಿಕೆಯು ಇತರ ಪೂರಕ ಸಾಕ್ಷ್ಯಗಳೊಂದಿಗೆ ಸೇರಿ ಪ್ರಾಸಿಕ್ಯೂಷನ್‌ ಪ್ರಕರಣವನ್ನು ಬಲಪಡಿಸಬಹುದು.

ಸರ್ಕಾರಿ ಸಾಕ್ಷಿಯಾಗಲು ಬಯಸುವ ವ್ಯಕ್ತಿಯು ಈ ಕುರಿತು ಅರ್ಜಿ ಸಲ್ಲಿಸಬೇಕು. ಆತನ ಹೇಳಿಕೆಯನ್ನು ಪರಿಶೀಲಿಸಿದ ಬಳಿಕ ಪ್ರಕರಣಕ್ಕೆ ಅನುಕೂಲವಾಗಲಿದೆ ಎಂದು ಪ್ರಾಸಿಕ್ಯೂಷನ್‌ ಭಾವಿಸಿದರೆ, ಆರೋಪಿಗೆ ಕ್ಷಮಾದಾನ ನೀಡುವಂತೆ ನ್ಯಾಯಾಲಯದ ಮುಂದೆ ಮನವಿ ಮಾಡಬಹುದು ಎಂದು ಹೇಳಿದ್ದಾರೆ.

ನ್ಯಾಯಾಲಯ ಕ್ಷಮಾದಾನ ನೀಡಿದ ಬಳಿಕ ಆ ವ್ಯಕ್ತಿ ಆರೋಪಿಯಿಂದ ಸಾಕ್ಷಿಯಾಗಿ ಬದಲಾಗುತ್ತಾನೆ ಮತ್ತು ಆತನನ್ನು ಪ್ರತಿಪಕ್ಷದ ವಕೀಲರು ವಿಚಾರಣೆಗೆ ಒಳಪಡಿಸಬಹುದು.

ಪ್ರಕರಣವನ್ನು ಅಂತಿಮ ತೀರ್ಮಾನಕ್ಕೆ ಕೊಂಡೊಯ್ಯಲು ರಾಜ್ಯಕ್ಕೆ ಸಹಾಯ ಮಾಡುವುದಾಗಿ ಒಪ್ಪಿಕೊಂಡಿರುವ ಕಾರಣಕ್ಕೆ ಕ್ಷಮಾದಾನ ನೀಡಲಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal floods|ಮೃತರ ಸಂಖ್ಯೆ 165ಕ್ಕೆ ಏರಿಕೆ; ನಾಪತ್ತೆಯಾದವರಲ್ಲಿ 133 ಮಂದಿ ಭಾರತೀಯರು, ಭಾರತದಿಂದ ನೆರವು

Iran ಸರ್ವೋಚ್ಚ ನಾಯಕ Mojtaba Khamenei ಸತ್ತಿಲ್ಲ, ಗಂಭೀರವಾಗಿ ಗಾಯಗೊಂಡಿದ್ದಾರೆ: ಹಳೇ Vidoe ಬಿಡುಗಡೆ ಬೆನ್ನಲ್ಲೇ ಅಸಲಿಯತ್ತು ಬಿಚ್ಚಿಟ್ಟ Donald Trump..!

Nepal floods: ಸಾವಿನ ಸಂಖ್ಯೆ 157ಕ್ಕೇರಿಕೆ, 750ಕ್ಕೂ ಅಧಿಕ ಮಂದಿ ನಾಪತ್ತೆ, ನೇಪಾಳಕ್ಕೆ ಭಾರತ ನೆರವು! ಸಹಾಯವಾಣಿ ಬಿಡುಗಡೆ

ನೇಪಾಳ ಭೀಕರ ಪ್ರವಾಹ: 95 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರ, ಯುಪಿಯಲ್ಲಿ ಹೈ ಅಲರ್ಟ್! Video

ನೇಪಾಳ ಪ್ರವಾಹ: ಭಾರತಕ್ಕೆ ದೊಡ್ಡ ಆತಂಕವಿಲ್ಲ, ಜಲಾಶಯಗಳ ನೀರಿನ ಮಟ್ಟ ಇಳಿಕೆ: ಕೇಂದ್ರ ಸ್ಪಷ್ಟನೆ