ನೇಪಾಳ ಪ್ರವಾಹ 
ರಾಜ್ಯ

ನೇಪಾಳ ಪ್ರವಾಹ: ಸಂಕಷ್ಟದಲ್ಲಿ ಕನ್ನಡಿಗರು; ರಕ್ಷಣೆಗೆ ರಾಜ್ಯ ಸರ್ಕಾರ ತುರ್ತು ಕ್ರಮ, ತುರ್ತು ಸಹಾಯವಾಣಿ ಆರಂಭ..!

ಕೈಲಾಸ ಮಾನಸ ಸರೋವರ ಯಾತ್ರೆ, ಪ್ರವಾಸ ಅಥವಾ ಇತರ ಕಾರಣಗಳಿಂದ ನೇಪಾಳ ಹಾಗೂ ಟಿಬೆಟ್‌ ಗಡಿ ಪ್ರದೇಶಗಳಿಗೆ ತೆರಳಿರುವ ಕನ್ನಡಿಗರು ಪ್ರವಾಹದಲ್ಲಿ ಸಿಲುಕಿದ್ದರೆ, ಅವರ ಕುಟುಂಬಸ್ಥರು, ಸಂಬಂಧಿಕರು ಹಾಗೂ ಪ್ರವಾಸ ಆಯೋಜಕರು ತಕ್ಷಣವೇ ಗೂಗಲ್‌ ಫಾರ್ಮ್‌ ಮೂಲಕ ಅಗತ್ಯ ಮಾಹಿತಿಯನ್ನು ದಾಖಲಿಸುವಂತೆ ಮನವಿ ಮಾಡಿದೆ.

ಬೆಂಗಳೂರು: ನೇಪಾಳ-ಟಿಬೆಟ್‌ ಗಡಿ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಗಂಭೀರಗೊಂಡಿರುವ ಬೆನ್ನಲ್ಲೇ, ಅಲ್ಲಿಗೆ ತೆರಳಿರುವ ಕನ್ನಡಿಗರ ಸುರಕ್ಷತೆ ಬಗ್ಗೆ ಆತಂಕ ಹೆಚ್ಚಾಗಿದೆ.

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದ್ದು, ಸಂಕಷ್ಟದಲ್ಲಿರುವವರನ್ನು ಗುರುತಿಸಿ ರಕ್ಷಣಾ ಕಾರ್ಯಾಚರಣೆಗೆ ನೆರವಾಗಲು ಅಧಿಕೃತ ತುರ್ತು ಸಹಾಯವಾಣಿ ಹಾಗೂ ಗೂಗಲ್‌ ಫಾರ್ಮ್‌ ಬಿಡುಗಡೆ ಮಾಡಿದೆ.

ವಿಪತ್ತು ನಿರ್ವಹಣೆ ಸಚಿವಾಲಯ (ಕoದಾಯ ಇಲಾಖೆ) ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದೆ.

ಕೈಲಾಸ ಮಾನಸ ಸರೋವರ ಯಾತ್ರೆ, ಪ್ರವಾಸ ಅಥವಾ ಇತರ ಕಾರಣಗಳಿಂದ ನೇಪಾಳ ಹಾಗೂ ಟಿಬೆಟ್‌ ಗಡಿ ಪ್ರದೇಶಗಳಿಗೆ ತೆರಳಿರುವ ಕನ್ನಡಿಗರು ಪ್ರವಾಹದಲ್ಲಿ ಸಿಲುಕಿದ್ದರೆ, ಅವರ ಕುಟುಂಬಸ್ಥರು, ಸಂಬಂಧಿಕರು ಹಾಗೂ ಪ್ರವಾಸ ಆಯೋಜಕರು ತಕ್ಷಣವೇ ಗೂಗಲ್‌ ಫಾರ್ಮ್‌ ಮೂಲಕ ಅಗತ್ಯ ಮಾಹಿತಿಯನ್ನು ದಾಖಲಿಸುವಂತೆ ಮನವಿ ಮಾಡಿದೆ.

ಫಾರ್ಮ್‌ನಲ್ಲಿ ಸಂತ್ರಸ್ತರ ಹೆಸರು, ಸಂಪರ್ಕ ಸಂಖ್ಯೆ, ಪ್ರಸ್ತುತ ಇರುವ ಸ್ಥಳ, ಪಾಸ್‌ಪೋರ್ಟ್‌ ವಿವರಗಳು ಹಾಗೂ ತುರ್ತು ಸಂಪರ್ಕ ಸಂಖ್ಯೆಗಳಂತಹ ಮಾಹಿತಿಯನ್ನು ನಮೂದಿಸಬಹುದು. ಈ ಮೂಲಕ ಸಂಕಷ್ಟದಲ್ಲಿರುವವರನ್ನು ಶೀಘ್ರವಾಗಿ ಪತ್ತೆಹಚ್ಚಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ.

ಸಂಗ್ರಹಿಸಲಾದ ಮಾಹಿತಿಯನ್ನು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA), ನೇಪಾಳದಲ್ಲಿರುವ ಭಾರತೀಯ ರಾಯಭಾರ ಕಚೇರಿ ಹಾಗೂ ಚೀನಾದ ಬೀಜಿಂಗ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗಳೊಂದಿಗೆ ಹಂಚಿಕೊಳ್ಳಲಾಗುತ್ತದೆ.

ಬಳಿಕ ಸಂಬಂಧಪಟ್ಟ ಸಂಸ್ಥೆಗಳ ಸಹಕಾರದೊಂದಿಗೆ ಸಿಲುಕಿರುವ ಕನ್ನಡಿಗರಿಗೆ ರಕ್ಷಣೆ, ವೈದ್ಯಕೀಯ ನೆರವು ಹಾಗೂ ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರುವ ಕಾರ್ಯಾಚರಣೆಯನ್ನು ತೀವ್ರಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ತುರ್ತು ಸಹಾಯವಾಣಿ

ಸಹಾಯವಾಣಿ ಸಂಖ್ಯೆಗಳು: 1070 / 080-22253707

ಇ-ಮೇಲ್: seockarnataka@gmail.com

ನೇಪಾಳದಲ್ಲಿ ಭೋಟಿ ಕೋಶಿ ನದಿ ಉಕ್ಕಿ ಹರಿದ ಪರಿಣಾಮ ಹಲವು ಪ್ರದೇಶಗಳು ಜಲಾವೃತಗೊಂಡಿದ್ದು, ಭಾರತೀಯ ಯಾತ್ರಿಕರು ಸೇರಿದಂತೆ ಅನೇಕ ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕಿರುವ ವರದಿಗಳಿವೆ. ಕೆಲವರು ಸಂಪರ್ಕಕ್ಕೆ ಸಿಗದಿರುವ ಹಿನ್ನೆಲೆಯಲ್ಲಿ ಆತಂಕ ಹೆಚ್ಚಾಗಿದೆ.

ನೇಪಾಳ ಅಥವಾ ಟಿಬೆಟ್‌ ಗಡಿ ಪ್ರದೇಶದಲ್ಲಿ ಯಾವುದೇ ಕನ್ನಡಿಗರು ಸಿಲುಕಿರುವ ಮಾಹಿತಿ ಇದ್ದರೆ, ಅವರ ಕುಟುಂಬಸ್ಥರು ಆತಂಕಕ್ಕೊಳಗಾಗದೆ ಕೂಡಲೇ ಸರ್ಕಾರದ ಗೂಗಲ್‌ ಫಾರ್ಮ್‌ನಲ್ಲಿ ವಿವರಗಳನ್ನು ದಾಖಲಿಸುವಂತೆ ಮನವಿ ಮಾಡಲಾಗಿದೆ. ಜೊತೆಗೆ, ತುರ್ತು ಪರಿಸ್ಥಿತಿಯಲ್ಲಿ ಮೇಲ್ಕಂಡ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸುವಂತೆ ಸರ್ಕಾರ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal floods|ನೇಪಾಳ-ಟಿಬೆಟ್ ಗಡಿಯಲ್ಲಿ ಭೀಕರ ಪ್ರವಾಹ: ಸಾವಿನ ಸಂಖ್ಯೆ 165ಕ್ಕೆ ಏರಿಕೆ; 300ಕ್ಕೂ ಹೆಚ್ಚು ಭಾರತೀಯರು ನಾಪತ್ತೆ

Toxic Box Office Collection: ಟಾಕ್ಸಿಕ್ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ? ಕನ್ನಡಕ್ಕಿಂತ ಹಿಂದಿಯಲ್ಲಿ ಡಬಲ್ ಗಳಿಕೆ!

ದೆಹಲಿ: ಫ್ರೆಂಡ್​ಶಿಪ್ ನಿರಕಾರಿಸಿದ್ದಕ್ಕೆ 21 ವರ್ಷದ ಮಾಡೆಲ್'ನನ್ನು ಆಕೆಯ ಮನೆಗೆ ನುಗ್ಗಿ ಹತ್ಯೆಗೈದು ಜಿಮ್ ಟ್ರೇನರ್!

ಅಸಮಾಧಾನ ತಣಿಸಲು CM ಡಿಕೆಶಿ ಆಪ್ತ ಶಾಸಕ ಆಸೀಫ್ ಸೇಠ್‌ಗೆ ‘ಬುಡಾ’ ಅಧ್ಯಕ್ಷ ಪಟ್ಟ

Iran ಸರ್ವೋಚ್ಚ ನಾಯಕ Mojtaba Khamenei ಸತ್ತಿಲ್ಲ, ಗಂಭೀರವಾಗಿ ಗಾಯಗೊಂಡಿದ್ದಾರೆ: ಹಳೇ Vidoe ಬಿಡುಗಡೆ ಬೆನ್ನಲ್ಲೇ ಅಸಲಿಯತ್ತು ಬಿಚ್ಚಿಟ್ಟ Donald Trump..!