ಪ್ರಿಯಾಂಕ್‌ ಖರ್ಗೆ, ಮೊಹಮ್ಮದ್‌ ನಲಪಾಡ್‌ 
ರಾಜ್ಯ

RSS ವಿರುದ್ಧ ಅವಹೇಳನಕಾರಿ ಪೋಸ್ಟ್: ಸಚಿವ ಪ್ರಿಯಾಂಕ್‌ ಖರ್ಗೆ, ನಲಪಾಡ್‌ಗೆ ಕೋರ್ಟ್‌ನಿಂದ ಬಿಗ್ ರಿಲೀಫ್!

RSS ವಿರುದ್ಧ ಅವಹೇಳನಕಾರಿ ಪೋಸ್ಟ್‌ ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಹಾಗೂ ಕಾಂಗ್ರೆಸ್‌ ಮುಖಂಡ ಮೊಹಮ್ಮದ್‌ ನಲಪಾಡ್‌ ಗೆ ಬೆಂಗಳೂರಿನ 42ನೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಾ ಸಂಘ (RSS) ವಿರುದ್ಧ ಅವಹೇಳನಕಾರಿ ಪೋಸ್ಟ್‌ ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಹಾಗೂ ಕಾಂಗ್ರೆಸ್‌ ಮುಖಂಡ ಮೊಹಮ್ಮದ್‌ ನಲಪಾಡ್‌ ಗೆ ಬೆಂಗಳೂರಿನ 42ನೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಇದು ಖುದ್ಧು ಪ್ರಿಯಾಂಕ್‌ ಖರ್ಗೆ ಹಾಗೂ ಮೊಹಮ್ಮದ್‌ ನಲಪಾಡ್‌ ನ್ಯಾಯಾಲಯದ ಮುಂದೆ ಹಾಜರಾಗಿದ್ದರು. ಎರಡೂಕಡೆ ವಾದ ಆಲಿಸಿದ ನ್ಯಾಯಾಲಯವು ತಲಾ 10 ಸಾವಿರ ವೈಯಕ್ತಿಕ ಶ್ಯೂರಿಟಿ ನೀಡುವಂತೆ ಸೂಚಿಸಿ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

2025ರ ಆಗಸ್ಟ್‌ 14ರಂದು ಪ್ರಿಯಾಂಕ್‌ ಖರ್ಗೆ ತಮ್ಮ ‘X’ ಖಾತೆಯಲ್ಲಿ RSS ಸದಸ್ಯರನ್ನು ಗುರಿಯಾಗಿಸಿಕೊಂಡು ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದರು. ಇದೇ ವೇಳೆ, ನಲಪಾಡ್‌ ಅವರು ಯೂಟ್ಯೂಬ್‌ ಚಾನೆಲ್‌ವೊಂದರ ಸಂದರ್ಶನದಲ್ಲಿ ಆರ್‌ಎಸ್‌ಎಸ್‌ ವಿರುದ್ಧ ಮಾನಹಾನಿಕರ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಇಬ್ಬರ ವಿರುದ್ಧ ಬೆಂಗಳೂರಿನ ಸಿದ್ದಾಪುರದ RSS ಕಾರ್ಯಕರ್ತ ಎ ತೇಜಸ್ ದೂರು ದಾಖಲಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CM ಡಿಕೆಶಿ ಬಾಲ್ಯ ಸ್ನೇಹಿತ, ನಟ ರವಿಚಂದ್ರನ್‌ಗೆ MLC ಸ್ಥಾನ? ರಾಜಕೀಯ ಅಖಾಡಕ್ಕೆ ‘ಕ್ರೇಜಿ ಸ್ಟಾರ್’ ಎಂಟ್ರಿ ಸಾಧ್ಯತೆ

'ಕುಮಾರಸ್ವಾಮಿ ತಮ್ಮ ಹೆಂಡ್ತಿ ಫೋನ್ ಟ್ಯಾಪಿಂಗ್ ಮಾಡಿದ್ದರು, ನಿನ್ನ ಪತ್ನಿ ಮೇಲೆಯೇ ನಂಬಿಕೆ ಇಲ್ಲ, ಇನ್ನೂ...?': ಸಚಿವ ಬಾಲಕೃಷ್ಣ

'ಮೋದಿ ಸಂಪುಟದಿಂದ ನನ್ನನ್ನು ಹೊರಹಾಕಲು ಪಿತೂರಿ': ಸ್ವಪಕ್ಷ BJP ನಾಯಕರ ವಿರುದ್ಧವೇ ಕೇಂದ್ರ ಸಚಿವ ಗಂಭೀರ ಆರೋಪ

'ಅಪ್ಪಾ.. ಪ್ಲೀಸ್ ಕರ್ಕೊಂಡು ಹೋಗು, ನನ್ನ ಸಾಯಿಸಿಬಿಡ್ತಾರೆ': ಹೆರಿಗೆಗೂ ಮುನ್ನ ಗೋಗರೆದ ಮಗಳು, ಕೊನೆಗೂ ಸಾವು, ವೈದ್ಯರ ಅಮಾನತು!

ಹೃದಯ ವಿದ್ರಾವಕ ಘಟನೆ: ಸೇತುವೆ ಮೇಲೆ 3 ವರ್ಷದ ಮಗು ಬಿಟ್ಟು ನದಿಗೆ ಹಾರಿದ ದಂಪತಿ; ಅನಾಥವಾದ ಕಂದಮ್ಮ!