54 ಕನ್ನಡಿಗರು ವಾಪಸ್ 
ರಾಜ್ಯ

'ಟೀ ಬ್ರೇಕ್‌ನಿಂದಾಗಿ ಇಂದು ಜೀವಂತವಾಗಿದ್ದೇವೆ': 54 ಮಂದಿ ಬೆಂಗಳೂರಿಗೆ ವಾಪಸ್; ನೇಪಾಳ ದುರಂತ ಭೀಕರತೆ ಬಿಚ್ಚಿಟ್ಟ ಕನ್ನಡಿಗರು, Video!

ನೇಪಾಳ-ಟಿಬೆಟ್ ಗಡಿಯಲ್ಲಿ ಸಂಭವಿಸಿದ ಹಠಾತ್ ಪ್ರವಾಹದ ನಂತರ ನೇಪಾಳದಲ್ಲಿ ಸಿಲುಕಿದ್ದ 54 ಕನ್ನಡಿಗರು ಕರ್ನಾಟಕಕ್ಕೆ ಸುರಕ್ಷಿತವಾಗಿ ವಾಪಸ್ ಆಗಿದ್ದು ಅವರ ಕುಟುಂಬಸ್ಥರು ಆತಂಕದಿಂದ ಹೊರಬಂದಿದ್ದಾರೆ. ಶನಿವಾರ ರಾತ್ರಿ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದರು.

ಬೆಂಗಳೂರು: ನೇಪಾಳ-ಟಿಬೆಟ್ ಗಡಿಯಲ್ಲಿ ಸಂಭವಿಸಿದ ಹಠಾತ್ ಪ್ರವಾಹದ ನಂತರ ನೇಪಾಳದಲ್ಲಿ ಸಿಲುಕಿದ್ದ 54 ಕನ್ನಡಿಗರು ಕರ್ನಾಟಕಕ್ಕೆ ಸುರಕ್ಷಿತವಾಗಿ ವಾಪಸ್ ಆಗಿದ್ದು ಅವರ ಕುಟುಂಬಸ್ಥರು ಆತಂಕದಿಂದ ಹೊರಬಂದಿದ್ದಾರೆ. ಶನಿವಾರ ರಾತ್ರಿ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದರು.

ಕರ್ನಾಟಕದ ಬೆಂಗಳೂರು, ಹಾವೇರಿ, ಶಿವಮೊಗ್ಗ, ಕಡೂರು ಸೇರಿದಂತೆ ವಿವಿಧ ಜಿಲ್ಲೆಗಳ ಪ್ರವಾಸಿಗರು ಆಗಸ್ಟ್ 23ರಂದು ನೇಪಾಳಕ್ಕೆ ಪ್ರಯಾಣಿಸಿದ್ದರು. ಆಗಸ್ಟ್ 26ರಂದು ಅವರ ಪ್ರವಾಸ ಅಪಾಯಕಾರಿ ತಿರುವು ಪಡೆದುಕೊಂಡಿತು. ಹಠಾತ್ ಪ್ರವಾಹವು ರಸ್ತೆಗಳು, ಸೇತುವೆಗಳು ಮತ್ತು ಇತರ ಮೂಲಸೌಕರ್ಯಗಳು ನಾಶಗೊಂಡಿದ್ದವು. ಹಲವಾರು ಪ್ರವಾಸಿಗರು ಸಿಲುಕಿಕೊಂಡಿದ್ದರು. ನೇಪಾಳಕ್ಕೆ ತೆರಳುವ ಮುನ್ನ ಕನ್ನಡಿಗರ ಗುಂಪು ಉತ್ತರ ಪ್ರದೇಶದ ಗೋರಖ್‌ಪುರಕ್ಕೆ ಪ್ರಯಾಣಿಸಿತು.

ಪ್ರವಾಹಕ್ಕೆ ತುತ್ತಾದ ಮಾರ್ಗದಲ್ಲಿ ಪ್ರಯಾಣಿಸುವಾಗ ಸುಮಾರು 30 ನಿಮಿಷಗಳ ಕಾಲ ಚಹಾ ಕುಡಿಯಲು ತಂಗಿದ್ದವು. ನಾವು ಜೀವಂತವಾಗಿರುವುದು ಒಂದು ಪವಾಡ, ನಾವೆಲ್ಲರೂ ನಮ್ಮ ಜೀವಕ್ಕೆ ಹೆದರುತ್ತಿದ್ದೆವು. ಆ ಮಾರ್ಗವು ಒಂದು ದುರಂತದ ಕ್ಷಣವಾಗಿತ್ತು. ತಮ್ಮ ಕುಟುಂಬ ಸದಸ್ಯರೊಂದಿಗೆ ಪ್ರಯಾಣಿಸುತ್ತಿದ್ದೇವು ಎಂದು ಪ್ರವಾಸಿಗರೊಬ್ಬರು ಹೇಳಿದ್ದಾರೆ.

ಚಹಾ ವಿರಾಮದ ಸಮಯದಲ್ಲಿ ನಮಗೆ ಮೊದಲೇ ಪ್ರವಾಹದ ಕುರಿತಂತೆ ಮಾಹಿತಿ ಸಿಕ್ಕಿತ್ತು. ಇಲ್ಲದಿದ್ದರೆ ನಾವು ಹಠಾತ್ ಪ್ರವಾಹಕ್ಕೆ ಸಿಲುಕುತ್ತಿದ್ದೇವು ಎಂದು ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕರ್ನಾಟಕದ ನೂತನ ರಾಜ್ಯಪಾಲರಾಗಿ ಸುಧಾ ಯಾದವ್ ಪ್ರಮಾಣವಚನ ಸ್ವೀಕಾರ

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು..!'

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

CJP ಯ 'ತಿರಂಗಾ ಮೆರವಣಿಗೆ: 6,000 ಪೊಲೀಸರು, 220 ಸಿಎಪಿಎಫ್ ತುಕಡಿಗಳ ನಿಯೋಜನೆ, ಸಿಸಿಟಿವಿ ಕಣ್ಗಾವಲು!