Nepal Floods: ಕಣ್ಣೆದುರೇ ನುಗ್ಗಿದ ರಕ್ಕಸ ಪ್ರವಾಹ; ಮಕ್ಕಳ ಕೈಬಿಡದೆ ಜೀವ ಉಳಿಸಿದ ತಾಯಿ, 2 ಸೆಕೆಂಡ್ ತಡವಾಗಿದ್ದರೂ ಅನಾಹುತ!

ಪ್ರವಾಹದ ನೀರು ರಭಸದಿಂದ ನುಗ್ಗುತ್ತಿದ್ದರೂ ಧೃತಿಗೆಡದೆ ತನ್ನ ಮಕ್ಕಳನ್ನು ರಕ್ಷಿಸಿದ ತಾಯಿಯ ಸಾಹಸದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Mother Battles Raging Floodwaters to Save Her Children
ರಕ್ಕಸ ಪ್ರವಾಹದ ನಡುವೆ ಮಕ್ಕಳ ರಕ್ಷಿಸಿದ ತಾಯಿ
Updated on

ಕಠ್ಮಂಡು: ನೇಪಾಳದ ರಕ್ಕಸ ಪ್ರವಾಹ ಈವರೆಗೂ 700ಕ್ಕೂ ಅಧಿಕ ಜನರ ಬಲಿ ಪಡೆದಿದ್ದು, ಭೀಕರ ದುರಂತದ ವಿಡಿಯೋಗಳು ಪ್ರತಿನಿತ್ಯ ವೈರಲ್ ಆಗುತ್ತಿವೆ.

ಈ ಪಟ್ಟಿಗೆ ಇದೀಗ ಹೊಸದೊಂದು ಸೇರ್ಪಡೆಯಾಗಿದ್ದು, ಪ್ರವಾಹದ ನೀರು ರಭಸದಿಂದ ನುಗ್ಗುತ್ತಿದ್ದರೂ ಧೃತಿಗೆಡದೆ ತನ್ನ ಮಕ್ಕಳನ್ನು ರಕ್ಷಿಸಿದ ತಾಯಿಯ ಸಾಹಸದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹೌದು.. ‘ತಾಯಿಯನ್ನು ಮೀರಿಸುವ ಯೋಧರು ಯಾರೂ ಇಲ್ಲ’ ಎಂಬ ಮಾತಿಗೆ ನೇಪಾಳದಲ್ಲಿ ಸಂಭವಿಸಿದ ಪ್ರವಾಹ ಮತ್ತೊಂದು ನಿದರ್ಶನ ದೊರೆತಿದೆ. ನೇಪಾಳದ ಪ್ರವಾಹದ ನೀರು ಕ್ಷಣಕ್ಷಣಕ್ಕೂ ವೇಗವಾಗಿ ಹರಿದು ಬರುತ್ತಿದ್ದರೂ ತಾಯಿ ಭಯಪಡದೆ ತನ್ನ ಮಕ್ಕಳ ಕೈಗಳನ್ನು ಬಿಗಿಯಾಗಿ ಹಿಡಿದುಕೊಂಡು ಕೆಲವೇ ಸೆಕೆಂಡ್‌ಗಳಲ್ಲಿ ಸುರಕ್ಷಿತ ಸ್ಥಳದತ್ತ ಕರೆದೊಯ್ದಿದ್ದಾರೆ.

ಈ ವೇಳೆ ಪ್ರವಾಹದ ರಭಸಕ್ಕೆ ತಾಯಿ ಕೆಳಗೆ ಬಿದ್ದರೂ ತಕ್ಷಣವೇ ಎಚ್ಚೆತ್ತುಕೊಂಡು ಎದ್ದು ನಿಂತಿದ್ದಾರೆ. ಬಳಿಕ ಮಕ್ಕಳನ್ನು ತನ್ನೊಂದಿಗೆ ಕರೆದುಕೊಂಡು ಎತ್ತರದ ಗುಡ್ಡ ಪ್ರದೇಶದತ್ತ ಓಡಿ, ಅವರನ್ನು ಕಣ್ಣಿಗೆ ರೆಪ್ಪೆಯಂತೆ ಕಾಪಾಡಿಕೊಂಡಿದ್ದಾರೆ.

ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ತಾಯಿಯ ಧೈರ್ಯ ಮತ್ತು ಸಮಯಪ್ರಜ್ಞೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Mother Battles Raging Floodwaters to Save Her Children
ನೇಪಾಳ ದುರಂತಕ್ಕೆ 5 ತಿಂಗಳ ಹಿಂದೆಯೇ ಎಚ್ಚರಿಕೆ; ಹಿಮನದಿಗಳ ಕರಗುವಿಕೆ ಕುರಿತು ಬೆಚ್ಚಿಬೀಳಿಸುವ ವರದಿ

ಒಂದು ಕ್ಷಣ ತಡವಾಗಿದ್ದರೂ ದುರಂತ

“ಇನ್ನೆರಡು ಸೆಕೆಂಡ್ ತಡವಾಗಿದ್ದರೂ ದೊಡ್ಡ ಅನಾಹುತ ಸಂಭವಿಸುತ್ತಿತ್ತು. ಯಾವುದೇ ಭಯಕ್ಕೆ ಒಳಗಾಗದೆ ಸಮಯಪ್ರಜ್ಞೆಯಿಂದ ಮಕ್ಕಳನ್ನು ರಕ್ಷಿಸಿದ ತಾಯಿಯ ಧೈರ್ಯಕ್ಕೆ ಸಲಾಂ” ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.

ಪ್ರಾಣಾಪಾಯದ ಪರಿಸ್ಥಿತಿಯಲ್ಲೂ ಮಕ್ಕಳನ್ನು ಬಿಟ್ಟುಕೊಡದೆ ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದ ತಾಯಿಯ ಧೈರ್ಯ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com