ಶ್ರೀಕಾಂತ ಆನೆ. 
ರಾಜ್ಯ

ಮೈಸೂರು ದಸರಾ: ಗಜಪಡೆ ತೂಕ ಪರೀಕ್ಷೆ ಪೂರ್ಣ; ತೂಕದಲ್ಲಿ 9 ಆನೆಗಳ ಪೈಕಿ ಶ್ರೀಕಾಂತನೇ ನಂ.1..!

ಮೊದಲ ತಂಡದಲ್ಲಿ ಶ್ರೀಕಾಂತ 5,770 ಕೆ.ಜಿ. ತೂಕದೊಂದಿಗೆ ಅತಿ ಹೆಚ್ಚು ತೂಕ ಹೊಂದಿರುವ ಆನೆಯಾಗಿ ಹೊರಹೊಮ್ಮಿದೆ. ನಂತರದ ಸ್ಥಾನದಲ್ಲಿ ಏಕಲವ್ಯ 5,610 ಕೆ.ಜಿ. ತೂಕ ಹೊಂದಿದೆ.

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಜಂಬೂ ಸವಾರಿಗೆ ಪಾಲ್ಗೊಳ್ಳಲಿರುವ ಆನೆಗಳ ತಂಡವನ್ನು ಸಜ್ಜುಗೊಳಿಸುವ ಕಾರ್ಯಕ್ಕೆ ವಿಶೇಷ ಒತ್ತು ನೀಡಲಾಗಿದೆ.

ಇದರಂತೆ ಜಂಬೂ ಸವಾರಿಯ ಮೊದಲ ತಂಡದಲ್ಲಿ ಭಾಗವಹಿಸಲಿರುವ ಒಂಬತ್ತು ಆನೆಗಳ ತೂಕವನ್ನು ಭಾನುವಾರ ಪರಿಶೀಲಿಸಲಾಯಿತು. ಜಂಬೂ ಸವಾರಿಗೆ ನಿಯಮಿತ ತರಬೇತಿ ಆರಂಭಿಸುವ ಮುನ್ನ ಆನೆಗಳು ತೂಕ ಪರಿಶೀಲನೆ ನಡೆಸಲಾಯಿತು.

ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಪ್ರಭುಗೌಡ ಅವರು ಮಾತನಾಡಿ, ಮೊದಲ ತಂಡದಲ್ಲಿ ಶ್ರೀಕಾಂತ 5,770 ಕೆ.ಜಿ. ತೂಕದೊಂದಿಗೆ ಅತಿ ಹೆಚ್ಚು ತೂಕ ಹೊಂದಿರುವ ಆನೆಯಾಗಿ ಹೊರಹೊಮ್ಮಿದೆ. ನಂತರದ ಸ್ಥಾನದಲ್ಲಿ ಏಕಲವ್ಯ 5,610 ಕೆ.ಜಿ. ತೂಕ ಹೊಂದಿದೆ ಎಂದು ಮಾಹಿತಿ ನೀಡಿದ್ದಾರೆ.

ಆನೆಗಳ ತೂಕವನ್ನು ಹೆಚ್ಚಿಸುವುದು ನಮ್ಮ ಉದ್ದೇಶವಲ್ಲ. ಅವುಗಳ ಆರೋಗ್ಯದ ಮೇಲೆ ನಿಗಾ ಇಡಲು ತೂಕ ಪರಿಶೀಲನೆ ಮಾಡಲಾಗುತ್ತದೆ. ಅದರ ಆಧಾರದ ಮೇಲೆ ಅವುಗಳಿಗೆ ವಿಶೇಷ ಆಹಾರ ನೀಡಲಾಗುತ್ತದೆ ಎಂದು ಪ್ರಭುಗೌಡ ತಿಳಿಸಿದ್ದಾರೆ.

ತೂಕ ಪರಿಶೀಲನೆಯ ಬಳಿಕ ಆನೆಗಳಿಗೆ ಬೆಳಗ್ಗೆ ಮತ್ತು ಸಂಜೆ ಜಂಬೂ ಸವಾರಿ ಸಾಗುವ ಮಾರ್ಗದಲ್ಲಿ ನಿಯಮಿತ ತರಬೇತಿ ನೀಡಲಾಗುತ್ತದೆ. ಮೊದಲ ತಂಡದ ಆನೆಗಳು ಈಗಾಗಲೇ ಸಾಂಪ್ರದಾಯಿಕ ಗಜಪಯಣದ ಬಳಿಕ ಮೈಸೂರು ಅರಮನೆ ಆವರಣ ಪ್ರವೇಶಿಸಿವೆ.

ದಸರಾ ಮೆರವಣಿಗೆಗೂ ಮುನ್ನ ನಡೆಯಲಿರುವ ವಿವಿಧ ಧಾರ್ಮಿಕ ವಿಧಿವಿಧಾನಗಳು ಹಾಗೂ ತರಬೇತಿ ಕಾರ್ಯಕ್ರಮಗಳಿಗೆ ಅರಣ್ಯ ಇಲಾಖೆ ಆನೆಗಳನ್ನು ಸಜ್ಜುಗೊಳಿಸುತ್ತಿದೆ. ಈ ಬಾರಿ ತಂಡದಲ್ಲಿರುವ ಹಲವು ಆನೆಗಳು ಚಿನ್ನದ ಅಂಬಾರಿ ಹೊರುವಷ್ಟು ದೈಹಿಕವಾಗಿ ಸದೃಢವಾಗಿವೆ ಎಂದು ಹೇಳಿದ್ದಾರೆ.

ಜಂಬೂ ಸವಾರಿಯ ಅಂಬಾರಿ ಆನೆಯ ನಾಯಕನನ್ನು ತರಬೇತಿ ಅವಧಿಯಲ್ಲಿ ಆನೆಗಳ ಪ್ರದರ್ಶನ ಮತ್ತು ಸಾಮರ್ಥ್ಯವನ್ನು ಪರಿಶೀಲಿಸಿದ ಬಳಿಕ ಅಂತಿಮವಾಗಿ ಆಯ್ಕೆ ಮಾಡಲಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಲಾರಕ್ ದ್ವೀಪದ ಮೇಲಿನ ದಾಳಿಗೆ ಪ್ರತೀಕಾರ: ಜೋರ್ಡಾನ್‌ನ ಅಮೆರಿಕದ ಸೇನಾ ನೆಲೆಗಳ ಮೇಲೆ ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ!

ಮಧ್ಯಪ್ರದೇಶ: ಚಿತ್ರಕೂಟದಲ್ಲಿ 2 ದಶಕಗಳಲ್ಲೇ ಅತ್ಯಂತ ಭೀಕರ ಪ್ರವಾಹ, ಉಕ್ಕಿ ಹರಿದ ಮಂದಾಕಿನಿ ನದಿ; 1,000 ಜನರ ರಕ್ಷಣೆ

ಕೃಷ್ಣ ಜನ್ಮಾಷ್ಟಮಿಗೂ ಮುನ್ನ ಮಥುರಾದಲ್ಲಿ ಬಿಗಿ ಭದ್ರತೆ

ಉದ್ಯಾನವನದ 5% ಭೂಮಿ ಪರಭಾರೆಗೆ ವಿರೋಧ; ಲಾಲ್‌ಬಾಗ್ ನಲ್ಲಿ ಜನಾಂದೋಲನ; ಉದ್ಯಾನ ರಕ್ಷಣೆ ಅಪರಾಧವಾದರೆ ಪ್ರತಿದಿನ ಅಪರಾಧ ಮಾಡ್ತೇನೆ- ತೇಜಸ್ವಿ ಸೂರ್ಯ

ಚಿಕ್ಕಬಳ್ಳಾಪುರ: ಮೃತ ಯುವಕನ ಹೊಟ್ಟೆಯಲ್ಲಿ ಬ್ಯಾಟರಿ, ಲೈಟರ್, ಕಬ್ಬಿಣದ ಚೂರು ಕಂಡು ವೈದ್ಯರು ದಂಗು!