ಮಹೇಶ್ವರ ರಾವ್ 
ರಾಜ್ಯ

ಸೆಪ್ಟೆಂಬರ್ ಅಂತ್ಯದೊಳಗೆ Yelahanka Flyover ಯೋಜನೆ ಪೂರ್ಣಗೊಳಿಸಿ: ಅಧಿಕಾರಿಗಳಿಗೆ GBA ಖಡಕ್ ಸೂಚನೆ

ಹಗಲು ಸಮಯದಲ್ಲಿ ವಾಹನ ಸಂಚಾರ ಹೆಚ್ಚಿರುವುದರಿಂದ ರಾತ್ರಿ ವೇಳೆಯಲ್ಲೇ ಕಾಮಗಾರಿ ನಡೆಯುತ್ತಿದೆ. ಗುತ್ತಿಗೆದಾರರು ನಿಗದಿತ ಅವಧಿಯೊಳಗೆ ಉಳಿದ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಬೇಕು.

ಬೆಂಗಳೂರು: ಯಲಹಂಕ ಫ್ಲೈಓವರ್ ಯೋಜನೆಯನ್ನು 2026ರ ಸೆಪ್ಟೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.

ಶನಿವಾರ ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ವಿವಿಧ ಪ್ರದೇಶಗಳ ಪರಿಶೀಲನೆ ನಡೆಸಿದ ವೇಳೆ ಮಾತನಾಡಿದ ಅವರು, ದೊಡ್ಡಬಳ್ಳಾಪುರ ಮುಖ್ಯರಸ್ತೆಯಲ್ಲಿರುವ 2 ಕಿ.ಮೀ ಉದ್ದದ ಯಲಹಂಕ ಫ್ಲೈಓವರ್ ಕಾಮಗಾರಿ ಶೇ.70ರಷ್ಟು ಮುನ್ನಡೆ ಸಾಧಿಸಿದೆ ಎಂದು ತಿಳಿಸಿದರು.

ಒಟ್ಟು 56 ಪಿಲ್ಲರ್ ಗಳಲ್ಲಿ 51 ಪಿಲ್ಲರ್ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಐದು ಪಿಲ್ಲರ್'ಗಳ ಕಾಮಗಾರಿ ಬಾಕಿಯಿದೆ. 447 ಕಾಂಕ್ರೀಟ್ ರಚನೆಗಳಲ್ಲಿ 351 ಕಾಂಕ್ರೀಟ್ ರಚನೆಗಳನ್ನು ಈಗಾಗಲೇ ಅಳವಡಿಸಲಾಗಿದ್ದು, 96 ಕಾಂಕ್ರೀಟ್ ರಚನೆಗಳ ಅಳವಡಿಕೆ ಇನ್ನೂ ಬಾಕಿಯಾಗಿದೆ. ಹಗಲು ಸಮಯದಲ್ಲಿ ವಾಹನ ಸಂಚಾರ ಹೆಚ್ಚಿರುವುದರಿಂದ ರಾತ್ರಿ ವೇಳೆಯಲ್ಲೇ ಕಾಮಗಾರಿ ನಡೆಯುತ್ತಿದೆ. ಗುತ್ತಿಗೆದಾರರು ನಿಗದಿತ ಅವಧಿಯೊಳಗೆ ಉಳಿದ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

ಇದೇ ವೇಳೆ ಹೆಣ್ಣೂರು–ಬಾಗಲೂರು ರಸ್ತೆಯ 5 ಕಿ.ಮೀ ಉದ್ದದ ವೈಟ್‌ಟಾಪಿಂಗ್ ಕಾಮಗಾರಿ ಕುರಿತಂತೆಯೂ ಮಹೇಶ್ವರ ರಾವ್ ಅವರು ಮಾಹಿತಿ ನೀಡಿದರು.

ರಸ್ತೆಯ ಒಂದು ಬದಿಯಲ್ಲಿ 4 ಕಿ.ಮೀ ವೈಟ್‌ಟಾಪಿಂಗ್ ಪೂರ್ಣಗೊಂಡಿದ್ದು, ಉಳಿದ 1 ಕಿ.ಮೀ ಕಾಮಗಾರಿ 15 ದಿನಗಳೊಳಗೆ ಮುಗಿಸಿ, ಕ್ಯೂರಿಂಗ್ ಬಳಿಕ ವಾಹನ ಸಂಚಾರಕ್ಕೆ ತೆರೆಯಬೇಕು ಎಂದು ಹೇಳಿದರು.

ಇನ್ನೊಂದು ಬದಿಯ ವೈಟ್‌ಟಾಪಿಂಗ್ ಕಾರ್ಯವನ್ನು ಒಂದು ತಿಂಗಳೊಳಗೆ ಆರಂಭಿಸಿ, ಸಂಚಾರ ಪೊಲೀಸ್ ಇಲಾಖೆಯ ಸಮನ್ವಯದೊಂದಿಗೆ ಶೀಘ್ರವಾಗಿ ಪೂರ್ಣಗೊಳಿಸಲು ಸೂಚಿಸಿದರು.

ಯಲಹಂಕ ರೈಲ್ವೆ ಅಂಡರ್‌ಬ್ರಿಡ್ಜ್ (RUB) ಕಾಮಗಾರಿ ಕುರಿತು ಮಾತನಾಡಿ, ಒಂದು ಬದಿಯ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಇನ್ನೊಂದು ಬದಿಯ ಕಾಮಗಾರಿ ಭೂಸ್ವಾಧೀನ ಸಮಸ್ಯೆಯಿಂದ ಮಧ್ಯದಲ್ಲೇ ನಿಂತಿದೆ ಎಂದು ಹೇಳಿದರು.

ರೈಲ್ವೆಗೆ ಸಂಬಂಧಿಸಿದ ಭೂ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಿ, ಉಳಿದ ಕಾಮಗಾರಿ ಶೀಘ್ರವಾಗಿ ಪೂರ್ಣಗೊಳಿಸುವಂತೆ ಹಾಗೂ ರಸ್ತೆ ಅಗಲೀಕರಣಕ್ಕೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಬೆಂಗಳೂರು ನಗರ ಉತ್ತರ ಪಾಲಿಕೆ ವ್ಯಾಪ್ತಿಯಲ್ಲಿ ಈ ವರ್ಷ ಗುರಿಯಿರುವ ರೂ.1,242 ಕೋಟಿ ಆಸ್ತಿ ತೆರಿಗೆ ಸಂಗ್ರಹಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಅವರು ಸೂಚಿಸಿದರು. ಇದೇ ವೇಳೆ ಇದುವರೆಗೆ ರೂ.640 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ಮೂಲದ ನ್ಯಾಯಶಾಸ್ತ್ರಜ್ಞೆಗೆ ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿ; ನವನೀತ್ ನವಿ ಪಿಳ್ಳೈಗೆ ಒಲಿದ ನೊಬೆಲ್ ಶಾಂತಿ ಗರಿ

CJP ಪ್ರತಿಭಟನೆ ಹಿನ್ನೆಲೆಯಲ್ಲಿ ರೈಲುಗಳ ರದ್ದತಿ: ಯುವಕರಿಗೆ ಹೆದರುವುದಾದರೆ ಇಡೀ ದೇಶವನ್ನೇ ಬಂದ್ ಮಾಡಿ; ಕೇಂದ್ರದ ವಿರುದ್ಧ ಅಭಿಜಿತ್ ದೀಪ್ಕೆ ಆಕ್ರೋಶ

Cockroach Janta Partyಗೆ ಬಿಗ್ ಶಾಕ್: ಜಂತರ್ ಮಂತರ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸರು, 57 ಮೆಟ್ರೋ ನಿಲ್ದಾಣಗಳು ಬಂದ್..!

ಮತದಾರರ ಪಟ್ಟಿ ಪರಿಷ್ಕರಣೆ: ಕರ್ನಾಟಕದಲ್ಲಿ 1.10 ಲಕ್ಷ ಫಾರಂ-7 ಅರ್ಜಿ ಸ್ವೀಕೃತಿ, 40.88 ಲಕ್ಷ ನೋಟಿಸ್ ವಿಚಾರಣೆ ಪೂರ್ಣ: ಅ.27ಕ್ಕೆ ಅಂತಿಮ ಪಟ್ಟಿ ಪ್ರಕಟ

ಕನ್ನಡಿಗರ ಆತ್ಮೀಯತೆ, ವಾತ್ಸಲ್ಯ, ದಯೆ ನಿಜಕ್ಕೂ ನನ್ನ....: ಬೆಂಗಳೂರು ಭೇಟಿ ಬಗ್ಗೆ ಅಭಿಜೀತ್ ದೀಪ್ಕೆ ಭಾವುಕ ಪೋಸ್ಟ್!