ಕಾಂಗ್ರೆಸ್ ನಾಯಕಿ ಮೋಟಮ್ಮ 
ರಾಜ್ಯ

'ಮುಖಂಡರ ಮುಂದೆ ಗ್ಲಾಮರಸ್‌ ಆಗಿರಲು ಬಯಸಬೇಡಿ': ಕಾಂಗ್ರೆಸ್ ನಾಯಕಿ ಮೋಟಮ್ಮ ಹೇಳಿಕೆ ವೈರಲ್!

ಮಹಿಳಾ ರಾಜಕಾರಣಿಗಳು ನಾಯಕರ ಮುಂದೆ ಹಲ್ಲು ಕಿರಿದು ನಿಲ್ಲುವುದನ್ನು ಬಿಡಬೇಕು, ಸ್ವಂತ ಕಾಲ ಮೇಲೆ ನಿಂತು ಕೆಲಸ ಮಾಡಿ ನಾಯಕರು ತಮ್ಮ ಬಳಿ ಸಹಾಯ ಕೇಳುವಂತೆ ಮಾಡಬೇಕು..

ಮಂಗಳೂರು: ಮಹಿಳೆಯರು ಗ್ಲಾಮರಸ್‌ ಆಗಿ ಕಾಣಿಸಿಕೊಂಡು ನಾಯಕರ ಹಿಂದೆ ಓಡಾಡುವುದನ್ನು ನಿಲ್ಲಿಸಬೇಕು ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ ಮೋಟಮ್ಮ ಹೇಳಿದ್ದಾರೆ.

ಮಂಗಳೂರಿನಲ್ಲಿ ಭಾನುವಾರ ಆರಂಭಗೊಂಡ ಮಹಿಳಾ ಮಂಡಲಗಳ ಒಕ್ಕೂಟದ ಸಮಾವೇಶದಲ್ಲಿ ‘ರಾಜಕೀಯದಲ್ಲಿ ಮಹಿಳೆ’ ವಿಷಯದ ಬಗ್ಗೆ ಮಾತನಾಡಿದ ಮೋಟಮ್ಮ ಅವರು, 'ಮಹಿಳಾ ರಾಜಕಾರಣಿಗಳು ನಾಯಕರ ಮುಂದೆ ಹಲ್ಲು ಕಿರಿದು ನಿಲ್ಲುವುದನ್ನು ಬಿಡಬೇಕು, ಸ್ವಂತ ಕಾಲ ಮೇಲೆ ನಿಂತು ಕೆಲಸ ಮಾಡಿ ನಾಯಕರು ತಮ್ಮ ಬಳಿ ಸಹಾಯ ಕೇಳುವಂತೆ ಮಾಡಬೇಕು' ಎಂದರು.

‘ಎಲ್ಲ ರಾಜಕೀಯ ಪಕ್ಷಗಳೂ ಮಹಿಳೆಯರನ್ನು ಕಡೆಗಣಿಸುತ್ತಿದ್ದು ಕೇವಲ ಸಾಂಬಾರ್‌ಗೆ ಪರಿಮಳ ತುಂಬುವ ಕರಿಬೇವಿನಂತೆ ಬಳಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಪಕ್ಷಭೇದ ಬಿಟ್ಟು ಹೋರಾಡಬೇಕು. ಗ್ಲಾಮರಸ್‌ ಆಗಿ ಕಾಣಿಸಿಕೊಂಡು ನಾಯಕರ ಹಿಂದೆ ಓಡಾಡುವುದನ್ನು ನಿಲ್ಲಿಸಬೇಕು.

ಮತದಾರರಲ್ಲಿ ಶೇಕಡ 50ರಷ್ಟು ಮಹಿಳೆಯರು. ಆದರೆ ಯಾವ ಸರ್ಕಾರವೂ, ಯಾವ ಮುಖಂಡರೂ ಮಹಿಳೆಗೆ ಅಧಿಕಾರ ನೀಡಲು ಬಯಸಲಿಲ್ಲ. ಎಲ್ಲೂ ನಿರ್ಣಯ ಕೈಗೊಳ್ಳುವ ಅವಕಾಶ ಮಹಿಳೆಗೆ ಸಿಗುತ್ತಿಲ್ಲ’ ಎಂದು ಅವರು ಕಿಡಿಕಾರಿದರು.

ಅಂತೆಯೇ ‘ಸಮಾಜದಲ್ಲಿ ಅತ್ಯಾಚಾರದಂಥ ಮನಃಸ್ಥಿತಿ ನಿರ್ಮಾಣವಾಗಲು ಬಹುತೇಕ ಸಂದರ್ಭದಲ್ಲಿ ತಾಯಂದಿರೇ ಕಾರಣ. ಮಕ್ಕಳಿಗೆ ಅವರು ಗಟ್ಟಿತನವನ್ನು ಹೇಳಿಕೊಡುವುದಿಲ್ಲ. ಆದ್ದರಿಂದ ಅತ್ಯಾಚಾರದ ಪಾಪದಲ್ಲಿ ತಾಯಂದಿರಿಗೂ ಪಾಲು ಇದೆ. ಸಿನಿಮಾದವರನ್ನು ನೋಡಿ ಕಲಿಯುವಂತೆ ಹೆಣ್ಣುಮಕ್ಕಳಿಗೆ ಪ್ರೇರಣೆ ನೀಡುತ್ತಾರೆ. ಸ್ಲೀವ್‌ಲೆಸ್ ಬ್ಲೌಸ್‌, ಟ್ರಾನ್ಸ್‌ಪರೆಂಟ್ ಲಂಗ ಹಾಕಲು ಪ್ರೇರೇಪಿಸುವುದಕ್ಕಿಂತ ಸ್ವಾವಲಂಬಿಯಾಗಲು ತಿಳಿಸಿಕೊಡಬೇಕು’ ಎಂದು ಮೊಟಮ್ಮ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel