ನಮ್ಮ ಮೆಟ್ರೊ 
ರಾಜ್ಯ

ನಮ್ಮ ಮೆಟ್ರೊ ಪ್ರಯಾಣ ದುಬಾರಿ ಸಾಧ್ಯತೆ: ಟಿಕೆಟ್ ದರ ಪರಿಷ್ಕರಣೆಗೆ BMRCL ಅಸ್ತು

ಪ್ರತಿ ಫೆಬ್ರವರಿಯಲ್ಲಿ ವಾರ್ಷಿಕ ಹೊಂದಾಣಿಕೆಗಳನ್ನು ಸಲಹೆ ಮಾಡುವ ಶುಲ್ಕ ನಿಗದಿ ಸಮಿತಿಯ ಶಿಫಾರಸುಗಳನ್ನು ಈ ಪರಿಷ್ಕರಣೆ ಅನುಸರಿಸುತ್ತದೆ.

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಮಂಡಳಿಯು ನಮ್ಮ ಮೆಟ್ರೋ ಟಿಕೆಟ್ ದರಗಳನ್ನು ಪರಿಷ್ಕರಿಸುವ ಪ್ರಸ್ತಾವನೆಯನ್ನು ಅನುಮೋದಿಸಿದೆ. ಅಂತಿಮ ಸರ್ಕಾರದ ಅನುಮೋದನೆ ಬಾಕಿ ಉಳಿದಿದ್ದು, ಮೆಟ್ರೊ ಪ್ರಯಾಣ ದರ ಶೇಕಡಾ 5ರಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ.

ಪ್ರತಿ ಫೆಬ್ರವರಿಯಲ್ಲಿ ವಾರ್ಷಿಕ ಹೊಂದಾಣಿಕೆಗಳನ್ನು ಸಲಹೆ ಮಾಡುವ ಶುಲ್ಕ ನಿಗದಿ ಸಮಿತಿಯ ಶಿಫಾರಸುಗಳನ್ನು ಈ ಪರಿಷ್ಕರಣೆ ಅನುಸರಿಸುತ್ತದೆ. ಈ ವರ್ಷ ಪರಿಷ್ಕರಣೆಯನ್ನು ಬಿಟ್ಟುಬಿಡುವುದರಿಂದ ಶೇ. 10 ರಷ್ಟು ಹೆಚ್ಚಳವಾಗಬಹುದು ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳುತ್ತಾರೆ.

ಕಳೆದ ವರ್ಷವಷ್ಟೇ ನಮ್ಮ ಮೆಟ್ರೋ ಪ್ರಯಾಣ ದರ ಹೆಚ್ಚಳವಾಗಿತ್ತು. ಇದಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದೀಗ ನಮ್ಮ ಮೆಟ್ರೋ ಟಿಕೆಟ್ ದರವನ್ನು ಮತ್ತೆ ಹೆಚ್ಚಿಸಲು ಬಿಎಂಆರ್‌ಸಿಎಲ್ ಸಿದ್ಧತೆ ನಡೆಸಿದ್ದು, ಕರ್ನಾಟಕ ಸರ್ಕಾರದ ಅಂತಿಮ ಅನುಮೋದನೆಗಾಗಿ ಕಾಯುತ್ತಿದೆ.

ಇನ್ನು ದರ ಪರಿಷ್ಕರಣಾ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಫೆಬ್ರವರಿ 1 ರಿಂದ ಪರಿಷ್ಕೃತ ದರಗಳನ್ನು ಜಾರಿಗೆ ತರಲು ಬಿಎಂಆರ್‌ಸಿಎಲ್ ಮುಂದಾಗಿತ್ತು. ಸಮಿತಿಯು ಮೆಟ್ರೋ ಪ್ರಯಾಣ ಟಿಕೆಟ್ ಬೆಲೆಗಳಲ್ಲಿ ಶೇ 5% ಹೆಚ್ಚಳ ಮಾಡುವುದಕ್ಕೆ ಶಿಫಾರಸು ಮಾಡಿತ್ತು. ರಾಜ್ಯ ಸರ್ಕಾರವು ಅನುಮೋದನೆ ನೀಡಿದ ನಂತರ ಮೆಟ್ರೋ ಪ್ರಾಧಿಕಾರವು ಈಗ ಅದನ್ನು ಆದಷ್ಟು ಬೇಗ ಜಾರಿಗೆ ತರುವ ಸಾಧ್ಯತೆ ಇದೆ.

ಮೆಟ್ರೋ ಟಿಕೆಟ್ ದರಗಳಲ್ಲಿ ಶೇ.71% ಹೆಚ್ಚಳ ಮಾಡಲಾಗಿತ್ತು. ಇದಾದ ಕೇವಲ ಒಂದು ವರ್ಷದ ಅವಧಿಯಲ್ಲೇ ಈ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರದಿಂದ ಅನುಮೋದನೆ ದೊರೆತರೆ, ಹೊಸ ಪರಿಷ್ಕರಣೆಯು ಪ್ರಯಾಣದ ದೂರವನ್ನು ಅವಲಂಬಿಸಿ ಕನಿಷ್ಠ 1 ರೂಪಾಯಿ ಮತ್ತು ಗರಿಷ್ಠ 5 ರೂಪಾಯಿಯ ವರೆಗೆ ಹೆಚ್ಚಳವಾಗುವ ಸಾಧ್ಯತೆ ಇದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್