ನಮ್ಮ ಮೆಟ್ರೋ 
ರಾಜ್ಯ

Namma Metro Price Hike: ಪರಿಷ್ಕೃತ ದರ ಪ್ರಕಟ; ಫೆಬ್ರವರಿ 9 ರಿಂದ ಜಾರಿಗೆ..

ಮೆಟ್ರೋ ರೈಲ್ವೇ ಕಾಯ್ದೆ 2002ರ ಅಡಿಯಲ್ಲಿ ರಚಿಸಲಾದ ‘ಫೇರ್ ಫಿಕ್ಸೇಷನ್ ಕಮಿಟಿ’ (FFC) ಶಿಫಾರಸಿನಂತೆ ಈ ದರ ಪರಿಷ್ಕರಣೆ ಮಾಡಲಾಗಿದೆ. ಹೆಚ್ಚುತ್ತಿರುವ ಕಾರ್ಯಾಚರಣೆ ವೆಚ್ಚ ಸರಿದೂಗಿಸಲು ಈ ಕ್ರಮ ಅನಿವಾರ್ಯ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

ಬೆಂಗಳೂರು: ಬಿಎಂಆರ್‌ಸಿಎಲ್ (BMRCL) ಮತ್ತೆ ‘ನಮ್ಮ ಮೆಟ್ರೋ’ ಪ್ರಯಾಣಿಕರಿಗೆ ದರ ಏರಿಕೆಯ ಬರೆ ಎಳೆದಿದೆ. ಫೆಬ್ರವರಿ 9ರಿಂದ ಜಾರಿಗೆ ಬರುವಂತೆ ಮೆಟ್ರೋ ಟಿಕೆಟ್ ದರವನ್ನು ಶೇಕಡಾ 5ರಷ್ಟು ಹೆಚ್ಚಳ ಮಾಡಲಾಗಿದೆ ಎಂದು ಅಧಿಕೃತವಾಗಿ ಘೋಷಿಸಿದೆ.

ಮೆಟ್ರೋ ರೈಲ್ವೇ ಕಾಯ್ದೆ 2002ರ ಅಡಿಯಲ್ಲಿ ರಚಿಸಲಾದ ‘ಫೇರ್ ಫಿಕ್ಸೇಷನ್ ಕಮಿಟಿ’ (FFC) ಶಿಫಾರಸಿನಂತೆ ಈ ದರ ಪರಿಷ್ಕರಣೆ ಮಾಡಲಾಗಿದೆ. ಹೆಚ್ಚುತ್ತಿರುವ ಕಾರ್ಯಾಚರಣೆ ವೆಚ್ಚ ಸರಿದೂಗಿಸಲು ಈ ಕ್ರಮ ಅನಿವಾರ್ಯ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

ದೂರಕ್ಕೆ ಅನುಗುಣವಾಗಿ ಕನಿಷ್ಠ 1 ರೂಪಾಯಿಯಿಂದ ಗರಿಷ್ಠ 5 ರೂಪಾಯಿಗಳವರೆಗೆ ದರ ಹೆಚ್ಚಳವಾಗಿದೆ. ಹೊಸ ದರವು ಫೆಬ್ರವರಿ 9ರಿಂದ ಜಾರಿಗೆ ಬರಲಿದೆ ಎಂದು ತಿಳಿಸಿದೆ.

ಭವಿಷ್ಯದಲ್ಲಿ ದೊಡ್ಡ ಮತ್ತು ದಿಢೀರ್ ದರ ಹೆಚ್ಚಳದ ಅಗತ್ಯವನ್ನು ತಪ್ಪಿಸಲು, ಆರ್ಥಿಕ ಸುಸ್ಥಿರತೆ ಮತ್ತು ಸೇವಾ ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳಲು ಈ ಅಲ್ಪ ವಾರ್ಷಿಕ ಪರಿಷ್ಕರಣೆಯನ್ನು ಉದ್ದೇಶಿಸಲಾಗಿದೆ. ಈ ವಿಧಾನವು ಹಣದುಬ್ಬರ ಮತ್ತು ನಿರ್ವಹಣಾ ವೆಚ್ಚಗಳನ್ನು ಕ್ರಮೇಣವಾಗಿ ಸರಿದೂಗಿಸಲು ಅನುವು ಮಾಡಿಕೊಡುತ್ತದೆ. ಇದರಿಂದಾಗಿ ಪ್ರಯಾಣಿಕರನ್ನು ತೀವವಾದ ದರ ಏರಿಕೆಗಳಿಂದ ರಕ್ಷಿಸುತ್ತದೆ.

ಬೆಂಗಳೂರಿನ ನಾಗರಿಕರಿಗೆ ಸುರಕ್ಷಿತ, ವಿಶ್ವಾಸಾರ್ಹ, ಸಮಯಪ್ರಜ್ಞೆ ಮತ್ತು ಕೈಗೆಟುಕುವ ಮೆಟ್ರೋ ಸೇವೆಗಳನ್ನು ಒದಗಿಸಲು ನಿಗಮವು ಬದ್ಧವಾಗಿದೆ. ನಿಗಮವು ಸಮತೋಲನ ದರದಲ್ಲಿ ವಿಸ್ತರಿಸುತ್ತಿರುವ ಜಾಲದಲ್ಲಿ ಉನ್ನತ ಗುಣಮಟ್ಟದ ಸೇವೆ, ಸುರಕ್ಷತೆ ಮತ್ತು ನಿರ್ವಹಣೆಯನ್ನು ಕಾಯ್ದುಕೊಳ್ಳುವ ಅಗತ್ಯದೊಂದಿಗೆ ಪ್ರಯಾಣಿಕರ ಕೈಗೆಟುಕುವಿಕೆಯನ್ನು ಸಮತೋಲನಗೊಳಿಸುವುದನ್ನು ಮುಂದುವರಿಸುತ್ತದೆ ಎಂದು ಹೇಳಿದೆ.

ಪರಿಷ್ಕೃತ ಮೆಟ್ರೋ ದರ ಪಟ್ಟಿ ಇಂತಿದೆ...

  • 0-2 ಕಿ.ಮೀ: ರೂ.10 ರಿಂದ ರೂ.11ಕ್ಕೆ ಏರಿಕೆ

  • 2-4 ಕಿ.ಮೀ: ರೂ.20 ರಿಂದ ರೂ.21ಕ್ಕೆ ಏರಿಕೆ

  • 4-6 ಕಿ.ಮೀ: ರೂ.30 ರಿಂದ ರೂ.32ಕ್ಕೆ ಏರಿಕೆ

  • 6-8 ಕಿ.ಮೀ: ರೂ.40 ರಿಂದ ರೂ.42ಕ್ಕೆ ಏರಿಕೆ

  • 8-10 ಕಿ.ಮೀ: ರೂ.50 ರಿಂದ ರೂ.53ಕ್ಕೆ ಏರಿಕೆ

  • 10-15 ಕಿ.ಮೀ: ರೂ.60 ರಿಂದ ರೂ.63ಕ್ಕೆ ಏರಿಕೆ

  • 15-20 ಕಿ.ಮೀ: ರೂ.70 ರಿಂದ ರೂ.74ಕ್ಕೆ ಏರಿಕೆ

  • 20-25 ಕಿ.ಮೀ: ರೂ.80 ರಿಂದ ರೂ.84ಕ್ಕೆ ಏರಿಕೆ

  • 25 ಕಿ.ಮೀ ಮೇಲ್ಪಟ್ಟು: ರೂ.90 ರಿಂದ ರೂ.95ಕ್ಕೆ ಏರಿಕೆ

ರಿಯಾಯಿತಿ ಮುಂದುವರಿಕೆ

  • ಬಿಎಂಆರ್‌ಸಿಎಲ್ ಸ್ಮಾರ್ಟ್-ಕಾರ್ಡ್/NCMC ಬಳಕೆದಾರರಿಗೆ ಅಸ್ತಿತ್ವದಲ್ಲಿರುವ ಎಲ್ಲಾ ರಿಯಾಯಿತಿಗಳ ಮುಂದುವರಿಕೆ

  • ಪೀಕ್ ಸಮಯದಲ್ಲಿ ಶೇ 5 ರಿಯಾಯಿತಿ,

  • ಪೀಕ್ ಅಲ್ಲದ ಸಮಯದಲ್ಲಿ ಶೇ 10 ರಿಯಾಯಿತಿ,

  • ಭಾನುವಾರ ಮತ್ತು ಮೂರು ಗೊತ್ತುಪಡಿಸಿದ ರಾಷ್ಟ್ರೀಯ ರಜಾದಿನಗಳಲ್ಲಿ ಶೇ 10 ರಿಯಾಯಿತಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TNIE Exclusive | Air India ವಿಮಾನದಲ್ಲಿ ಭಾರೀ ತಾಂತ್ರಿಕ ದೋಷ..! Phuket-Delhi ವಿಮಾನ 300 ಅಡಿ ಕುಸಿತಕ್ಕೆ Triple hydraulic systems ವೈಫಲ್ಯ ಕಾರಣ..?

ಸಂಪುಟ ವಿಸ್ತರಣೆ ಬಿಕ್ಕಟ್ಟು ಶಮನಕ್ಕೆ ಸಿಎಂ ಡಿಕೆ.ಶಿವಕುಮಾರ್ ದೆಹಲಿಗೆ ದೌಡು: ಹೈಕಮಾಂಡ್‌ ಜೊತೆ ಮಹತ್ವದ ಚರ್ಚೆ..!

Maharashtra: ಶಾಲಾ ಹಾಸ್ಟೆಲ್‌ನಲ್ಲಿ ಭೀಕರ ದುರಂತ: ಮಲಗಿದ್ದ 6 ಬಾಲಕಿಯರಿಗೆ ಹಾವು ಕಡಿತ, ಮೂವರ ಸಾವು!

ಶಾಲೆಗಳಿಗೆ ಯೂಟ್ಯೂಬರ್‌ಗಳು, ಸೋಷಿಯಲ್ ಮೀಡಿಯಾ ಮಂದಿಗೆ ನೋ ಎಂಟ್ರಿ: ಉತ್ತರ ಪ್ರದೇಶ ಸರ್ಕಾರದ ಖಡಕ್ ಆದೇಶ

'ಬಿಜೆಪಿಗೆ ಖುಷಿ ಕೊಡುವ ಹೇಳಿಕೆ ನೀಡಬೇಡಿ': Rahul Gandhi ಕುರಿತ ಕಾಂಗ್ರೆಸ್ ಸಂಸದ ಶಶಿತರೂರ್ ಹೇಳಿಕೆಗೆ KC ವೇಣುಗೋಪಾಲ್ ಖಡಕ್ ವಾರ್ನಿಂಗ್