ಒಳಾಂಗಣ ಕ್ರೀಡಾಂಗಣದಲ್ಲಿ ವಿನೋದಕ್ಕೆ ಕ್ರಿಕೆಟ್ ಆಟವಾಡಿದ ಸತೀಶ್ ಜಾರಕಿಹೊಳಿ-ಲಕ್ಷ್ಮಿ ಹೆಬ್ಬಾಳ್ಕರ್  
ರಾಜ್ಯ

ಲಕ್ಷ್ಮಿಹೆಬ್ಬಾಳಕರ್ ಬೌಲ್‌ಗೆ ಸತೀಶ್ ಜಾರಕಿಹೊಳಿ ಕ್ಲೀನ್ ಬೋಲ್ಡ್!

ಉದ್ಘಾಟನಾ ಸಮಾರಂಭ ವೇಳೆ ಸತೀಶ್ ಜಾರಕಿಹೊಳಿ ಬ್ಯಾಟ್ ಹಿಡಿದು ಮೈದಾನಕ್ಕಿಳಿದರೆ, ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬೌಲ್ ಹಿಡಿದು ಚೆಂಡು ಎಸೆದು ಪ್ರೇಕ್ಷಕರನ್ನು ರಂಜಿಸಿದರು.

ಬೆಳಗಾವಿ: ಬೆಳಗಾವಿಯ ಶ್ರೀನಗರದಲ್ಲಿರುವ ಜಿಲ್ಲಾ ಬಾಲಭವನದಲ್ಲಿ ನೂತನವಾಗಿ ನಿರ್ಮಿಸಲಾದ ಬಾಕ್ಸ್ ಕ್ರಿಕೆಟ್ ಮೈದಾನ ಉದ್ಘಾಟನೆಯನ್ನು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ನೆರವೇರಿಸಿ ಮಿನಿ ಕ್ರಿಕೆಟ್ ಆಡಿ ನೆರೆದಿದ್ದವರಿಗೆ ಮನರಂಜನೆ ನೀಡಿದರು.

ಉದ್ಘಾಟನಾ ಸಮಾರಂಭ ವೇಳೆ ಸತೀಶ್ ಜಾರಕಿಹೊಳಿ ಬ್ಯಾಟ್ ಹಿಡಿದು ಮೈದಾನಕ್ಕಿಳಿದರೆ, ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬೌಲ್ ಹಿಡಿದು ಚೆಂಡು ಎಸೆದು ಪ್ರೇಕ್ಷಕರನ್ನು ರಂಜಿಸಿದರು.

ಹೆಬ್ಬಾಳಕರ್ ಬೌಲ್‌ಗೆ ಕ್ಲೀನ್ ಬೋಲ್ಡ್ ಆದ ಜಾರಕಿಹೊಳಿ: ಸಚಿವೆ ಹೆಬ್ಬಾಳಕರ್ ಎಸೆದ ಚೆಂಡಿಗೆ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಆಸಿಫ್ ಸೇಠ್ ಕ್ಲೀನ್ ಬೋಲ್ಡ್ ಆಗಿದ್ದು, ಈ ದೃಶ್ಯ ಎಲ್ಲರಿಗೂ ಮನರಂಜನೆ ನೀಡಿತು. ಬಳಿಕ, ಸಚಿವೆ ಹೆಬ್ಬಾಳಕರ್‌ ಕೂಡ ಬ್ಯಾಟಿಂಗ್‌ ಮಾಡಿದರು. ಈ ವೇಳೆ, ಸತೀಶ್‌ ಜಾರಕಿಹೊಳಿ ಕೀಪಿಂಗ್‌ ಮಾಡಿದರು. ಈ ಆಟ ತಮಾಷೆಗಾಗಿ ನಡೆದಿದ್ದರೂ, ಸಚಿವರು ಹಾಗೂ ಶಾಸಕರ ಆಟದ ಶೈಲಿಯನ್ನು ನೋಡಿ ಅಲ್ಲಿದ್ದ ಗಣ್ಯರು ಮತ್ತು ಸಾರ್ವಜನಿಕರು ಕೆಲಕಾಲ ಖುಷಿಯನ್ನು ಕಣ್ತುಂಬಿಕೊಂಡರು.

ಮಕ್ಕಳಿಗೆ ಕ್ರೀಡಾ ಪ್ರೋತ್ಸಾಹದ ಉದ್ದೇಶ: ಜಿಲ್ಲಾ ಬಾಲಭವನದಲ್ಲಿ ನಿರ್ಮಿಸಲಾದ ಬಾಕ್ಸ್ ಕ್ರಿಕೆಟ್ ಮೈದಾನವು ಮಕ್ಕಳಿಗೆ ಮತ್ತು ಯುವಜನತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹ ನೀಡಲಿದೆ. ಸರ್ಕಾರದ ಈ ಪ್ರಯತ್ನದಿಂದ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರವಾಗಲಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CEC ಜ್ಞಾನೇಶ್ ಕುಮಾರ್ ಅಮಾನತಿಗೆ ಆದೇಶಿಸಲು ಸುಪ್ರೀಂ ನಕಾರ: ಚುನಾವಣಾ ಆಯೋಗ, ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ!

Pneumonic Plague: ಮತ್ತೆ ವಕ್ಕರಿಸಿದ 'ಪ್ರಾಚೀನ ಮಹಾಮಾರಿ', 5 ಆಸ್ಪತ್ರೆಗಳೇ ಬಂದ್, ನೂರಾರು ಜನರಿಗೆ ಕ್ವಾರಂಟೈನ್!

ದೆಹಲಿ ಪೊಲೀಸರ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ಪ್ರತಿಭಟನೆ ಮುಂದುವರಿಕೆ, ಹಲವರು ವಶಕ್ಕೆ!

'ಸ್ಕರ್ಟ್`ನೊಳಗೆ ಕಣ್ಣು ಹಾಕೋದ್ ಅಲ್ಲ... 5 ದಿನ ಒಪ್ಪಿ, 6ನೇ ದಿನ ಇಲ್ಲ ಎಂದರೂ.. ಅದನ್ನ ಗೌರವಿಸಬೇಕು’: ನಟಿ Janhvi Kapoor ಕೆಂಡಾಮಂಡಲ

ವೈಡ್ ಪ್ಲಸ್ ಸಿಕ್ಸರ್; ಐತಿಹಾಸಿಕ ನೋಬಾಲ್ ಎಸೆದ ಬೌಲರ್, ಕೈಕೈ ಹಿಸುಕಿಕೊಂಡ ನಾಯಕ! ಅಂಪೈರ್ ತೀರ್ಪು ಅಚ್ಚರಿ-video