ಬೀದಿ ನಾಯಿ ಹಾವಳಿ 
ರಾಜ್ಯ

ಬೀದಿ ನಾಯಿಗಳಿಗೆ ಇನ್ಮುಂದೆ ಪ್ರತಿದಿನ ಸಿಗಲಿದೆ ಚಿಕನ್ ರೈಸ್; ಆಹಾರ ನೀಡಲು 463 ಸ್ಥಳಗಳ ಗುರ್ತಿಸಿದ GBA..!

ಬೀದಿ ನಾಯಿಗಳು ತಮ್ಮದೇ ಪ್ರದೇಶದಲ್ಲಿ ವಾಸಿಸುವ ಸ್ವಭಾವ ಹೊಂದಿರುವುದರಿಂದ, ಒಂದೇ ಪ್ರದೇಶದಲ್ಲಿ ಹಲವು ಆಹಾರ ಕೇಂದ್ರಗಳ ಅಗತ್ಯವಿದೆ ಎಂದು ಪ್ರಾಣಿ ಪ್ರಿಯರು ಹೇಳಿದ್ದಾರೆ.

ಬೆಂಗಳೂರು: ಬೆಂಗಳೂರು ಬೀದಿ ನಾಯಿಗಳಿಗೆ ರಾಜಯೋಗ ಕೂಡಿ ಬಂದಿದೆ. ಹೌದು, ಬೀದಿ ನಾಯಿಗಳಿಗೆ ಪ್ರತೀ ನಿತ್ಯ ಆಹಾರ ನೀಡಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ನಗರದಲ್ಲಿ ಒಟ್ಟು 463 ಸ್ಥಳಗಳನ್ನು ಗುರ್ತಿಸಿದೆ.

ಆದರೆ ಈ ಸ್ಥಳಗಳನ್ನು ವೈಜ್ಞಾನಿಕವಾಗಿ ಆಯ್ಕೆ ಮಾಡಿಲ್ಲ ಎಂದು ನಾಯಿ ಪ್ರೇಮಿಗಳು ಹಾಗೂ ಆಹಾರ ನೀಡುವವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬೀದಿ ನಾಯಿಗಳು ತಮ್ಮದೇ ಪ್ರದೇಶದಲ್ಲಿ ವಾಸಿಸುವ ಸ್ವಭಾವ ಹೊಂದಿರುವುದರಿಂದ, ಒಂದೇ ಪ್ರದೇಶದಲ್ಲಿ ಹಲವು ಆಹಾರ ಕೇಂದ್ರಗಳ ಅಗತ್ಯವಿದೆ ಎಂದು ಪ್ರಾಣಿ ಪ್ರಿಯರು ಹೇಳಿದ್ದಾರೆ.

ಆಹಾರ ಕೇಂದ್ರಗಳನ್ನು ಗುರುತಿಸುವಾಗ ನಿಯಮಿತ ಆಹಾರ ನೀಡುವವರು ಹಾಗೂ ಪ್ರಾಣಿ ಕಾರ್ಯಕರ್ತರ ಸಲಹೆ ಪಡೆಯಬೇಕಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಹಲವು ಪ್ರದೇಶಗಳಲ್ಲಿ ಆಹಾರ ಕೇಂದ್ರಗಳನ್ನು ಮುಖ್ಯ ರಸ್ತೆಗಳು, ಕಸ ಸುರಿಯುವ ಸ್ಥಳ, ಸಾರ್ವಜನಿಕ ಮೂತ್ರ ವಿಸರ್ಜನೆ ಸ್ಥಳಗಳು ಹಾಗೂ ಖಾಲಿ ಜಾಗಗಳ ಬಳಿ ಗುರುತಿಸಲಾಗಿದೆ ಎಂದು ದೂರಿದ್ದಾರೆ.

ಬೆಂಗಳೂರು ಮೂಲದ ಪ್ರಾಣಿ ಕಾರ್ಯಕರ್ತ ಅರುಣ್ ಪ್ರಸಾದ್ ಅವರು ಮಾತನಾಡಿ, ಗುರುತಿಸಿದ ಕೇಂದ್ರಗಳ ಸಂಖ್ಯೆ ಬಹಳ ಕಡಿಮೆಯಿದ್ದು, ಜಿಬಿಎಯ ಈ ಕಾರ್ಯ ಕೇವಲ ನ್ಯಾಯಾಲಯದ ಆದೇಶ ಪಾಲನೆಯ ನಾಟಕವಷ್ಟೇ ಎಂದು ಆರೋಪಿಸಿದ್ದಾರೆ.

ವಿಲ್ಸನ್ ಗಾರ್ಡನ್‌ನ ಒಂದು ಆಹಾರ ಕೇಂದ್ರವನ್ನು ಉದಾಹರಣೆಯಾಗಿ ನೀಡಿರುವ ಅವರು, “ಅಲ್ಲಿ ನಾಯಿಗಳೇ ಇಲ್ಲದ ಸ್ಥಳದಲ್ಲಿ ಆಹಾರ ಕೇಂದ್ರ ಗುರುತಿಸಲಾಗಿದೆ. ನಿಯಮಿತ ಆಹಾರ ನೀಡುವವರ ಮಾಹಿತಿಯ ಆಧಾರದಲ್ಲಿ ಸ್ಥಳಗಳನ್ನು ಗುರುತಿಸಬೇಕಿತ್ತು ಎಂದು ಹೇಳಿದ್ದಾರೆ.

ನಾಯಿಗಳು ತಮ್ಮ ಪ್ರದೇಶಕ್ಕೆ ಹೊರಗಿನ ನಾಯಿಗಳನ್ನು ಬಿಡುವುದಿಲ್ಲ; ಆದ್ದರಿಂದ ಒಂದೇ ಆಹಾರ ಕೇಂದ್ರದಿಂದ ಸಮಸ್ಯೆ ಪರಿಹಾರವಾಗುವುದಿಲ್ಲ ಎಂದು ತಿಳಿಸಿದ್ದಾರೆ.

ವೈಟ್‌ಫೀಲ್ಡ್ ನಿವಾಸಿ ಅಪರ್ಣಾ ರೈ ಎಂಬುವವರು ಮಾತನಾಡಿ, ತಮ್ಮ ಪ್ರದೇಶಕ್ಕೆ ಕನಿಷ್ಠ ಮೂರು ಆಹಾರ ಕೇಂದ್ರಗಳ ಬೇಡಿಕೆಯಿದ್ದರೂ ಒಂದೇ ಕೇಂದ್ರ ನೀಡಲಾಗಿದೆ. ಅದೂ ಕೂಡ ಸ್ಥಳೀಯರು ಬೋರ್ಡ್ ತೆಗೆದುಹಾಕಿ ಆಹಾರ ನೀಡಲು ಅವಕಾಶ ನೀಡುತ್ತಿಲ್ಲ ಎಂದು ದೂರಿದ್ದಾರೆ.

ಬೆಂಗಳೂರು ಸೆಂಟ್ರಲ್ ಕಾರ್ಪೊರೇಷನ್ ವ್ಯಾಪ್ತಿಯಲ್ಲಿ ಕೇವಲ 90 ಆಹಾರ ಕೇಂದ್ರಗಳನ್ನು ಗುರುತಿಸಲಾಗಿದೆ. “ಇಷ್ಟು ಕಡಿಮೆ ಕೇಂದ್ರಗಳಲ್ಲಿ ನೂರಾರು ನಾಯಿಗಳಿಗೆ ಆಹಾರ ಹೇಗೆ ನೀಡಬೇಕು?” ಎಂದು ಅರುಣ್ ಪ್ರಸಾದ್ ಪ್ರಶ್ನಿಸಿದ್ದಾರೆ.

ನಾಯಿಗಳಿಗೆ ಅವಿರುವ ಪ್ರದೇಶದಲ್ಲೇ ಆಹಾರ ನೀಡುವುದರಿಂದ ಆಕ್ರಮಣಕಾರಿ ವರ್ತನೆ ಮತ್ತು ಕಚ್ಚುವಿಕೆ ಪ್ರಕರಣಗಳು ಕಡಿಮೆಯಾಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

GBA ಗುರ್ತಿಸಿರುವ ಆಹಾರ ಕೇಂದ್ರಗಳ ಸಂಖ್ಯೆ ಇಂತಿದೆ...

  • ಬೆಂಗಳೂರು ಪೂರ್ವ: 150

  • ಬೆಂಗಳೂರು ಸೆಂಟ್ರಲ್: 90

  • ಬೆಂಗಳೂರು ಪಶ್ಚಿಮ: 85

  • ಬೆಂಗಳೂರು ಉತ್ತರ: 70

  • ಬೆಂಗಳೂರು ದಕ್ಷಿಣ: 68

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಹುಲ್ ಗಾಂಧಿಯನ್ನೇ ಪದಚ್ಯುತಿಗೊಳಿಸುವ ಸಮಯ ಬಂದಿದೆ: ಸ್ಪೀಕರ್‌ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಬಿಜೆಪಿ ಕಿಡಿ

ಬಿಕ್ಲು ಶಿವ ಕೊಲೆ ಪ್ರಕರಣ: ಭೈರತಿ ಬಸವರಾಜ್​ಗೆ ಬಿಗ್ ಶಾಕ್​​; ಜಾಮೀನು‌ ಅರ್ಜಿ ವಜಾ, ಬಂಧನ ಭೀತಿ

ಖಯಾಮತ್ ಬರುವುದಿಲ್ಲ, ಬಾಬ್ರಿ ಮಸೀದಿ ಪುನರ್ ನಿರ್ಮಾಣ ಸಾಧ್ಯವಿಲ್ಲ: ಯುಪಿ ಸಿಎಂ ಯೋಗಿ

ಬಾಂಗ್ಲಾದೇಶ ಚುನಾವಣೆಗೆ 3 ದಿನ ಬಾಕಿ: ಹಿಂದೂ ಉದ್ಯಮಿ ಭೀಕರ ಹತ್ಯೆ!

ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ನೋಟಿಸ್ ಸಲ್ಲಿಸಿದ ಪ್ರತಿಪಕ್ಷಗಳು; 100 ಕ್ಕೂ ಹೆಚ್ಚು ಸಂಸದರ ಬೆಂಬಲವಿದೆ- ಕಾಂಗ್ರೆಸ್

SCROLL FOR NEXT