ವಿಷ್ಣು ಸಾಯಿ ತೇಜ 
ರಾಜ್ಯ

JEE ಮುಖ್ಯ ಪರೀಕ್ಷೆಯಲ್ಲಿ ಬೆಂಗಳೂರಿನ ವಿದ್ಯಾರ್ಥಿ ರಾಜ್ಯಕ್ಕೆ ಟಾಪರ್; ಪಡೆದ ಅಂಕ ಎಷ್ಟು ಗೊತ್ತಾ?

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್‌ಟಿಎ) ಸೋಮವಾರ ಜೆಇಇ ಮುಖ್ಯ ಪರೀಕ್ಷೆ 2026-ಹಂತ 1 ಫಲಿತಾಂಶ ಪ್ರಕಟಿಸಿದ್ದು, ಸಾಯಿ ವಿಷ್ಣು ತೇಜ ಅವರು ಭೌತಶಾಸ್ತ್ರದಲ್ಲಿ 100, ರಸಾಯನಶಾಸ್ತ್ರದಲ್ಲಿ 99.99 ಮತ್ತು ಗಣಿತದಲ್ಲಿ 99.97 ಅಂಕಗಳನ್ನು ಪಡೆದಿದ್ದಾರೆ.

ಬೆಂಗಳೂರು: ಬೆಂಗಳೂರಿನ ಕಾವೇರಿ ಭವನದ ನಾರಾಯಣ ಸಿಒ ಶಾಲೆಯ ವಿದ್ಯಾರ್ಥಿ ವಿಷ್ಣು ಸಾಯಿ ತೇಜ ಅವರು ಜೆಇಇ ಹಂತ 1 ಪರೀಕ್ಷೆಯಲ್ಲಿ ಶೇಕಡ 99.9992454 ಅಂಕದೊಂದಿಗೆ ರಾಜ್ಯ ಟಾಪರ್ ಆಗಿ ಹೊರಹೊಮ್ಮಿದ್ದಾರೆ.

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್‌ಟಿಎ) ಸೋಮವಾರ ಜೆಇಇ ಮುಖ್ಯ ಪರೀಕ್ಷೆ 2026-ಹಂತ 1 ಫಲಿತಾಂಶ ಪ್ರಕಟಿಸಿದ್ದು, ಸಾಯಿ ವಿಷ್ಣು ತೇಜ ಅವರು ಭೌತಶಾಸ್ತ್ರದಲ್ಲಿ 100, ರಸಾಯನಶಾಸ್ತ್ರದಲ್ಲಿ 99.99 ಮತ್ತು ಗಣಿತದಲ್ಲಿ 99.97 ಅಂಕಗಳನ್ನು ಪಡೆದಿದ್ದಾರೆ.

ಟಿಎನ್‌ಐಇ ಜೊತೆ ಮಾತನಾಡಿದ ವಿಷ್ಣು, “ನಾನು ಯಾವಾಗಲೂ ಐಐಟಿ ಅಥವಾ ಐಐಎಸ್‌ಸಿಯಲ್ಲಿ ಅಧ್ಯಯನ ಮಾಡಲು ಆಶಿಸುತ್ತಿದ್ದೆ ಮತ್ತು ಕಂಪ್ಯೂಟರ್ ವಿಜ್ಞಾನ ಮತ್ತು ಕೃತಕ ಬುದ್ಧಿಮತ್ತೆಗೆ ಸಂಬಂಧಿಸಿದಂತೆ ನನಗೆ ಹೆಚ್ಚು ಆಸಕ್ತಿ ಇದೆ. ನಾನು ಈಗ ಜೆಇಇ ಹಂತ 2 ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಹಂತ 1 ಮತ್ತು ಹಂತ 2 ರಿಂದ ಉತ್ತಮ ಅಂಕಗಳನ್ನು ಪಡೆದ ಸುಮಾರು 2,50,000 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ನಾನು ಶಾಲೆಯಿಂದ ಬಂದ ನಂತರ ಪ್ರತಿದಿನ ಸುಮಾರು ನಾಲ್ಕು ಗಂಟೆಗಳ ಕಾಲ ಅಧ್ಯಯನ ಮಾಡಿದ್ದೇನೆ. ನಾರಾಯಣ ಸಿಒ ಶಾಲೆಯ ಶಿಕ್ಷಕರು ಪರೀಕ್ಷೆಗಳನ್ನು ಎದುರಿಸಲು ನನಗೆ ಸೂಕ್ತ ಮಾರ್ಗದರ್ಶನ ನೀಡಿದರು ಎಂದು ವಿಷ್ಟು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ನಾರಾಯಣ ಗ್ರೂಪ್ ವಕ್ತಾರರು, "ವಿಷ್ಣು ಸಾಯಿ ತೇಜ ಅವರ ಕಾರ್ಯಕ್ಷಮತೆ, ಶಿಸ್ತುಬದ್ಧ ಸಿದ್ಧತೆ, ತಜ್ಞರ ಮಾರ್ಗದರ್ಶನ ಮತ್ತು ಉತ್ತಮ ಶೈಕ್ಷಣಿಕ ಪರಿಸರ ಏನನ್ನಾದರೂ ಸಾಧಿಸಬಹುದು ಎಂಬುದನ್ನು ತೋರಿಸುತ್ತದೆ" ಎಂದಿದ್ದಾರೆ.

ಭಾರತದಾದ್ಯಂತ ಐಐಟಿಗಳಲ್ಲಿ ಅಧ್ಯಯನ ಮಾಡಲು ಆಶಿಸುವ ವಿದ್ಯಾರ್ಥಿಗಳು ಈಗ ಜೆಇಇ ಮುಖ್ಯ ಸೆಷನ್ 2 ಮತ್ತು ಜೆಇಇ ಅಡ್ವಾನ್ಸ್ಡ್‌ಗೆ ಸಜ್ಜಾಗುತ್ತಿದ್ದಾರೆ. ಸುಮಾರು 13,55,293 ವಿದ್ಯಾರ್ಥಿಗಳು ಹಂತ 1 ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ ಮತ್ತು 13,04,653 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel